ಆಮ್ ಆದ್ಮಿ ಪಕ್ಷದ ಶಾಸಕಿ ಅತಿಶಿಗೆ ಕೊರೊನಾವೈರಸ್ ಧೃಢ

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅತಿಶಿ ಅವರಿಗೆ ಬುಧವಾರ ಕರೋನವೈರಸ್ ಪೊಸಿಟಿವ್ ಧೃಡಪಟ್ಟಿದೆ.

Last Updated : Jun 17, 2020, 06:41 PM IST
ಆಮ್ ಆದ್ಮಿ ಪಕ್ಷದ ಶಾಸಕಿ ಅತಿಶಿಗೆ ಕೊರೊನಾವೈರಸ್ ಧೃಢ title=
file photo

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅತಿಶಿ ಅವರಿಗೆ ಬುಧವಾರ ಕರೋನವೈರಸ್ ಪೊಸಿಟಿವ್ ಧೃಡಪಟ್ಟಿದೆ.

ದೆಹಲಿಯ ಕಲ್ಕಾಜಿಯ ಶಾಸಕಿಯಾಗಿರುವ ಅತಿಶಿ ಮನೆಯಲ್ಲಿ ತಮ್ಮನ್ನು ನಿರ್ಬಂಧಿಸಿಕೊಂಡಿದ್ದಾರೆ ಮತ್ತು ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದ್ದಾರೆ.

ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು. 'ಕರೋನಾ ವಿರುದ್ಧದ ಹೋರಾಟದಲ್ಲಿ  ಅತಿಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಮತ್ತು ಮತ್ತೆ ಜನರಿಗೆ ಸೇವೆ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹಾರೈಸಿದ್ದಾರೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರನ್ನು ಕರೋನವೈರಸ್ ತರಹದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಿದ ಒಂದು ದಿನದ ನಂತರ ಅವರಲ್ಲಿ ಋಣಾತ್ಮಕ ಪರೀಕ್ಷೆ ಕಂಡುಬಂದಿತು.ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಜೈನ್ ಅವರ ಆಮ್ಲಜನಕದ ಮಟ್ಟವು ಕುಸಿದಿದೆ ಎಂದು ಹೇಳಿದ್ದರು.

Trending News