Aadhaar Update: ವ್ಯಕ್ತಿಯೊಬ್ಬನ ಮೃತ್ಯು ಸಂಭವಿಸಿದಾಗ ಆತನ PAN ಹಾಗೂ Aadhaar ಸಂಖ್ಯೆ ಏನ್ ಮಾಡ್ಬೇಕು? ಇಲ್ಲಿದೆ ಉತ್ತರ

Aadhaar Card Latest News: ಯಾರೊಬ್ಬರ ಮೃತ್ಯು ಸಂಭವಿಸಿದ ನಂತರ ಆ ವ್ಯಕ್ತಿಯ ಪ್ಯಾನ್ ಕಾರ್ಡ್ (PAN Card) ಮತ್ತು ಆಧಾರ್ ಕಾರ್ಡ್ (Aadhaar Card)ನಿಷ್ಪ್ರಯೋಜಕವಾಗುತ್ತದೆಯೇ? ಅಥವಾ ಮೃತ್ಯುವಿನ ಬಳಿಕವೂ ಅವುಗಳನ್ನು ಬಳಸಬಹುದೇ, ಈ ಪ್ರಶ್ನೆಗೆ ಉತ್ತರ ತಿಳಿಯಬೇಕಾದರೆ ಈ ಸುದ್ದಿಯನ್ನೊಮ್ಮೆ ಓದಿ.

Written by - Nitin Tabib | Last Updated : Dec 26, 2021, 06:54 PM IST
  • ಮೃತ್ಯು ಸಂಭವಿಸಿದ ವ್ಯಕ್ತಿಯ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆಯೇ?
  • PAN ಕಾರ್ಡ್ ಸರೆಂಡರ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
  • ಇಲ್ಲದಿದ್ದರೆ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.
Aadhaar Update: ವ್ಯಕ್ತಿಯೊಬ್ಬನ ಮೃತ್ಯು ಸಂಭವಿಸಿದಾಗ ಆತನ PAN ಹಾಗೂ Aadhaar ಸಂಖ್ಯೆ ಏನ್ ಮಾಡ್ಬೇಕು? ಇಲ್ಲಿದೆ ಉತ್ತರ title=
Aadhaar Card Latest News (File Photo)

ನವದೆಹಲಿ: PAN Card Latest News - ಭಾರತದಲ್ಲಿ (India) ಪ್ಯಾನ್ ಕಾರ್ಡ್ ಇಂದು ಒಂದು ಕಡ್ಡಾಯ ದಾಖಲೆಯಾಗಿದೆ. ಪ್ಯಾನ್ ಮತ್ತು ಆಧಾರ್ ಎರಡು ಪ್ರಮುಖ ದಾಖಲೆಗಳಾಗಿವೆ, ಇವು ಇಲ್ಲದೆ ಹೋದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಬ್ಯಾಂಕಿನಲ್ಲಿ ಸಣ್ಣ ಖಾತೆ ತೆರೆಯುವುದರಿಂದ ಹಿಡಿದು ದೊಡ್ಡ ಉದ್ಯಮ ಸ್ಥಾಪಿಸುವವರೆಗೆ ಈ ಎರಡು ದಾಖಲೆಗಳು  ಬೇಕೇ ಬೇಕು.  ಬದುಕಿರುವಾಗ ಈ ದಾಖಲೆಗಳು ಬೇಕು, ಮರಣದ ನಂತರವೂ ಅವುಗಳಿಗೆ ಸಂಬಂಧಿಸಿದ ಔಪಚಾರಿಕತೆ ಪೂರ್ಣಗೊಳಿಸುವುದು ತುಂಬಾ ಮುಖ್ಯ.

ಯಾರೊಬ್ಬರ ಸಾವಿನ ನಂತರ ಪ್ಯಾನ್ ಮತ್ತು ಆಧಾರ್ ಕಾರ್ಡ್ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಯಾರಾದರೂ ಮರಣ ಹೊಂದಿದ ನಂತರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳೊಂದಿಗೆ ಏನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ

ವ್ಯಕ್ತಿಯ ಮರಣದ ನಂತರ PAN ಕಾರ್ಡ್‌ನೊಂದಿಗೆ ಏನು ಮಾಡಬೇಕು?
ಬ್ಯಾಂಕ್ ಖಾತೆಗಳು, ಡಿಮ್ಯಾಟ್ ಖಾತೆಗಳು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆದ್ದರಿಂದ, ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಅಗತ್ಯವಿರುವ ಎಲ್ಲಾ ಖಾತೆಗಳನ್ನು ಸಂಪೂರ್ಣವಾಗಿ ಮುಚ್ಚುವವರೆಗೆ  ಅದನ್ನು ಸಂರಕ್ಷಿಸಬೇಕು. ಉದಾಹರಣೆಗೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಐಟಿ ಇಲಾಖೆಯ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಐಟಿಆರ್ ಸಲ್ಲಿಸುವ ಸಮಯದಲ್ಲಿ ಪ್ಯಾನ್ ಕಾರ್ಡ್ ಅನ್ನು ಇಟ್ಟುಕೊಳ್ಳಬೇಕು.

ಪ್ಯಾನ್ ಕಾರ್ಡ್ ಸರೆಂಡರ್ ಮಾಡುವ ಮುನ್ನ ಪ್ರಮುಖ ವಿಷಯ ನೆನಪಿರಲಿ
ಆದಾಯ ತೆರಿಗೆ ಇಲಾಖೆಯು ನಾಲ್ಕು ವರ್ಷಗಳವರೆಗೆ ಮೌಲ್ಯಮಾಪನವನ್ನು ಮರು-ತೆರೆಯುವ ಹಕ್ಕನ್ನು ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ. ಇಂತಹ  ಪರಿಸ್ಥಿತಿಯಲ್ಲಿ, ಮರಣ ಹೊಂದಿದವರ ಹೆಸರಿನಲ್ಲಿ ಯಾವುದೇ ತೆರಿಗೆ ಮರುಪಾವತಿ ಬಾಕಿ ಇದ್ದರೆ, ಅದು ಅವನ ಖಾತೆಯಲ್ಲಿ ಜಮಾ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ಅಂದರೆ ಖಾತೆಗೆ ಮರುಪಾವತಿ ಬಂದಿದೆಯೋ ಅಥವಾ ಇಲ್ಲವೋ ತಿಳಿದುಕೊಳ್ಳಿ. ಖಾತೆಗಳ ಮುಚ್ಚುವಿಕೆ, ಆದಾಯ ತೆರಿಗೆ ರಿಟರ್ನ್ಸ್ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯರ್ಥಗೊಂಡ ನಂತರ, ಅವರ ಕಾನೂನು ಉತ್ತರಾಧಿಕಾರಿಯು ಮೃತ ವ್ಯಕ್ತಿಯ ಪ್ಯಾನ್ ಅನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಬಹುದು. ಸರಂಡರ್ ಮಾಡುವ ಮೊದಲು, ಮೃತಪಟ್ಟವ್ಯಕ್ತಿಯ ಎಲ್ಲಾ ಖಾತೆಗಳನ್ನು ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾಯಿಸಬೇಕು ಅಥವಾ ಮುಚ್ಚಬೇಕು.

ಪ್ಯಾನ್ ಕಾರ್ಡ್ ಸರೆಂಡರ್ ಮಾಡುವುದು ಹೇಗೆ?
PAN ಕಾರ್ಡ್ ಅನ್ನು ಸರೆಂಡರ್ ಮಾಡಲು, ಸತ್ತವರ ಪ್ರತಿನಿಧಿ ಅಥವಾ ಅವರ ಕಾನೂನು ಉತ್ತರಾಧಿಕಾರಿಯು PAN ಕಾರ್ಡ್ ಅನ್ನು ನೋಂದಾಯಿಸಿರುವ ಮೌಲ್ಯಮಾಪನ ಅಧಿಕಾರಿಗೆ ಅರ್ಜಿ ಬರೆಯಬೇಕಾಗುತ್ತದೆ. ಅರ್ಜಿಯಲ್ಲಿ ಪ್ಯಾನ್ ಕಾರ್ಡ್ ಏಕೆ ಸರೆಂಡರ್ ಆಗುತ್ತಿದೆ ಎಂಬುದನ್ನು ನಮೂದಿಸಬೇಕು, ಮೃತರ ಹೆಸರು, ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಮೃತರ ಮರಣ ಪ್ರಮಾಣಪತ್ರದ ನಕಲನ್ನು ಸಹ ಲಗತ್ತಿಸಬೇಕು. ಸತ್ತವರ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡುವುದು ಕಡ್ಡಾಯವಲ್ಲದಿದ್ದರೂ, ಭವಿಷ್ಯದಲ್ಲಿ ನಿಮಗೆ ಯಾವಾಗ ಬೇಕಾದರೂ ಅದು ಬೇಕಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ಇಟ್ಟುಕೊಳ್ಳಿ.

ಸಾವಿನ ನಂತರ ಆಧಾರ್ ಕಾರ್ಡ್‌ನೊಂದಿಗೆ ಏನು ಮಾಡಬೇಕು?  (Aadhaar After Death)
ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಎಲ್‌ಪಿಜಿ ಗ್ಯಾಸ್ ಸಬ್ಸಿಡಿ, ಸ್ಕಾಲರ್‌ಶಿಪ್ ಪ್ರಯೋಜನಗಳು ಮತ್ತು ಇತರ ಎಲ್ಲಾ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಒಂದು ವಿಶಿಷ್ಟ ಸಂಖ್ಯೆ, ಆದ್ದರಿಂದ ಈ ಸಂಖ್ಯೆಯು ಸಾವಿನ ನಂತರವೂ ಇರುತ್ತದೆ, ಅದನ್ನು ಬೇರೆಯವರಿಗೆ ನೀಡಲಾಗುವುದಿಲ್ಲ.

ಇದನ್ನೂ ಓದಿ-Aadhaar Card-Voter Card ಜೋಡಣೆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ

ಸಾವಿನ ನಂತರ ಆಧಾರ್‌ಗೆ (Aadhaar Update) ಏನಾಗುತ್ತದೆ, ಅದನ್ನು ನಾಶಪಡಿಸಬಹುದೇ ಅಥವಾ ನಿಷ್ಕ್ರಿಯಗೊಳಿಸಬಹುದೇ ಎಂಬ ಪ್ರಶ್ನೆಗೆ ಉತ್ತರವಾಗಿ, ಸರ್ಕಾರವು ಸಂಸತ್ತಿನಲ್ಲಿ ಹೇಳಿಕೆ ನೀಡಿದೆ. ವ್ಯಕ್ತಿಯ ಮರಣದ ನಂತರ, ಅಂತಹ ಯಾವುದೇ ನಿಬಂಧನೆಗಳಿಲ್ಲದ ಕಾರಣ ಅವರ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದಿಲ್ಲ. ಅದೇನೆಂದರೆ, ಸದ್ಯ ಮೃತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದು ಮಾಡುವ ವ್ಯವಸ್ಥೆ ಇಲ್ಲ. ಜನನ ಮತ್ತು ಮರಣ ನೋಂದಣಿ ಕಾಯಿದೆ, 1969 ರ ಕರಡು ತಿದ್ದುಪಡಿಗಳ ಕುರಿತು UIDAI ನಿಂದ ಭಾರತದ ರಿಜಿಸ್ಟ್ರಾರ್ ಜನರಲ್ ಸಲಹೆಗಳನ್ನು ಕೋರಿದ್ದರು. ಆದ್ದರಿಂದ ಮರಣ ಪ್ರಮಾಣಪತ್ರವನ್ನು ನೀಡುವಾಗ ಸತ್ತವರ ಆಧಾರವನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ-Aadhaar-voter ID Linking : ನಿಮ್ಮ ಆಧಾರ್ ಜೊತೆ Voter ID ಲಿಂಕ್ ಮಾಡುವುದು ತುಂಬಾ ಸುಲಭ : ಹೇಗೆ ಇಲ್ಲಿ ಪರಿಶೀಲಿಸಿ

ಮರಣ ಪ್ರಮಾಣಪತ್ರದೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿ
ಪ್ರಸ್ತುತ, ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಜನನ ಮತ್ತು ಮರಣದ ದತ್ತಾಂಶದ ಕಸ್ಟೋಡಿಯನ್ ಅಥವಾ ಪಾಲಕರು. ಆಧಾರ್ ನಿಷ್ಕ್ರಿಯಗೊಳಿಸಲು ರಿಜಿಸ್ಟ್ರಾರ್‌ನಿಂದ ಮರಣಹೊಂದಿದವರ್ ಆಧಾರ್ ಸಂಖ್ಯೆಯನ್ನು ಪಡೆಯಲು ಪ್ರಸ್ತುತ ಯಾವುದೇ ಕಾರ್ಯವಿಧಾನವಿಲ್ಲ. ಆದರೆ ಈ ಘಟಕಗಳ ನಡುವೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ಚೌಕಟ್ಟು ಜಾರಿಯಾದ ನಂತರ, ರಿಜಿಸ್ಟ್ರಾರ್ ಅದನ್ನು ನಿಷ್ಕ್ರಿಯಗೊಳಿಸಲು UIDAI ಯೊಂದಿಗೆ ಮರಣ ಹೊಂದಿದವರ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದು ಅಥವಾ ಮರಣ ಪ್ರಮಾಣಪತ್ರದೊಂದಿಗೆ ಅದನ್ನು ಲಿಂಕ್ ಮಾಡುವುದು ಆಧಾರ್ ಮಾಲೀಕರ ಮರಣದ ನಂತರ ಅದನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತದೆ.

ಇದನ್ನೂ ಓದಿ-Election Laws Amendment Bill: ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಲೋಕಸಭೆಯ ಅಂಗೀಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News