ಉದ್ಯೋಗದಾತರೇ ನಿಮ್ಮ 'PF' ಖಾತೆಗೆ Aadhar ಜೋಡಣೆ ಕಡ್ಡಾಯ : ಇಲ್ಲದಿದ್ದರೆ ಬರಲ್ಲ ಹಣ!

ಈ ಹೊಸ ನಿಯಮವನ್ನು ಜಾರಿಗೆ ತರಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಾಮಾಜಿಕ ಭದ್ರತಾ ಸಂಹಿತೆ 2020ರ ಸೆಕ್ಷನ್ 142ಕ್ಕೆ ತಿದ್ದುಪಡಿ ಮಾಡಿದೆ.

Last Updated : Jun 11, 2021, 12:24 PM IST
  • ನಿವೃತ್ತಿ ನಿಧಿಯ ವಿವಿಧ ಪ್ರಯೋಜನಗಳನ್ನ ಪಡೆಯಲು ಆಧಾರ್ ಕಾರ್ಡ್ PF ಲಿಂಕ್ ಕಡ್ಡಾಯ
  • ನೀವು ಇನ್ನೂ ಪಿಎಫ್ ಯುಎಎನ್ ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ರೆ
  • 'ಕೆವೈಸಿ ಅಪ್ಡೇಶನ್, ಮುಂಗಡಗಳಿಗಾಗಿ ವಿನಂತಿ
ಉದ್ಯೋಗದಾತರೇ ನಿಮ್ಮ 'PF' ಖಾತೆಗೆ Aadhar ಜೋಡಣೆ ಕಡ್ಡಾಯ : ಇಲ್ಲದಿದ್ದರೆ ಬರಲ್ಲ ಹಣ! title=

ನವದೆಹಲಿ : ಜೂನ್ ನಿಂದ ಪ್ರಾರಂಭವಾಗುವ, ನಿವೃತ್ತಿ ನಿಧಿಯ ವಿವಿಧ ಪ್ರಯೋಜನಗಳನ್ನ ಪಡೆಯಲು ಆಧಾರ್ ಕಾರ್ಡ್ ಅನ್ನು ಭವಿಷ್ಯ ನಿಧಿ (PF)ಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ನೀವು ಇನ್ನೂ ಪಿಎಫ್ ಯುಎಎನ್ (UAN) ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ರೆ, ಈ ತಿಂಗಳಿನಿಂದ ನಿಮ್ಮ ಪಿಎಫ್ ಖಾತೆಯಲ್ಲಿ ಉದ್ಯೋಗದಾತರ ಕೊಡುಗೆಯನ್ನ ನೀವು ಪಡೆಯೋದಿಲ್ಲ.

'UAN'ನೊಂದಿಗೆ ಆಧಾರ್(Aadhar Card) ಲಿಂಕ್ ಮಾಡದ ಉದ್ಯೋಗದಾತರು 1 ಜೂನ್ 2021 ರಿಂದ ಪಿಎಫ್ ಕೊಡುಗೆಗಳನ್ನ ಜಾರಿಗೆ ತರಲು ಸಾಧ್ಯವಾಗುವುದಿಲ್ಲ' ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿ ರಂಗನ್ ಹೇಳಿದರು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ವೇತನದ ಮೇಲೆ ಪರಿಣಾಮ ಬೀರುವ 'Fitment Factor' ಬಗ್ಗೆ ನಿಮಗೆಷ್ಟು ಗೊತ್ತು?

ಈ ಹೊಸ ನಿಯಮವನ್ನು ಜಾರಿಗೆ ತರಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಾಮಾಜಿಕ ಭದ್ರತಾ ಸಂಹಿತೆ 2020ರ ಸೆಕ್ಷನ್ 142ಕ್ಕೆ ತಿದ್ದುಪಡಿ ಮಾಡಿದೆ. 'ಕೆವೈಸಿ ಅಪ್ಡೇಶನ್, ಮುಂಗಡಗಳಿಗಾಗಿ ವಿನಂತಿ, ಹಿಂಪಡೆಯುವಿಕೆ ಇತ್ಯಾದಿ ಎಲ್ಲಾ ಪ್ರಯೋಜನಗಳಿಗಾಗಿ EPFO ಆನ್ ಲೈನ್ ವಿಧಾನದತ್ತ ಸಾಗುತ್ತಿದೆ. ಆದ್ದರಿಂದ ಫಲಾನುಭವಿಯ ಗುರುತಿಸುವಿಕೆಯು ನಿರ್ಣಾಯಕವಾಗುತ್ತದೆ ಮತ್ತು ಆಧಾರ್ ನ್ನ ಒತ್ತಾಯಿಸಲಾಗುತ್ತಿದೆ' ಎಂದು ಕಸ್ತೂರಿ ರಂಗನ್ ಹೇಳಿದರು.

ಇದನ್ನೂ ಓದಿ : PPF Account Inactive: ಈ ತಪ್ಪು ಮಾಡಿದರೆ ಬಂದ್ ಆಗಲಿದೆ ನಿಮ್ಮ ಪಿಪಿಎಫ್ ಖಾತೆ

ನಿಮ್ಮ PF ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ನೀವು ಹೇಗೆ ಲಿಂಕ್ :

1) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ www.epfindia.gov.in ಭೇಟಿ ನೀಡಿ

2) ಉದ್ಯೋಗಿಗಳ ಟ್ಯಾಬ್ ಗೆ ಹೋಗಿ ಮತ್ತು 'ಯುಎಎನ್ ಸದಸ್ಯ ಇ-ಸೇವಾ'(UAN Member E-Sewa Portal) ಲಿಂಕ್ ಆಯ್ಕೆ ಮಾಡಿ

ಇದನ್ನೂ ಓದಿ : ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ

3) ನಿಮ್ಮ UAN ID ಮತ್ತು Password ನೊಂದಿಗೆ ಲಾಗಿನ್ ಮಾಡಿ

4) 'ಟ್ಯಾಬ್ ನಿರ್ವಹಿಸಿ' ಅಡಿಯಲ್ಲಿ, KYC ಆಯ್ಕೆಯನ್ನ ಆಯ್ಕೆಮಾಡಿ

ಇದನ್ನೂ ಓದಿ : CoWin Data Leak- ಕೋವಿನ್ ಅಪ್ಲಿಕೇಶನ್‌ನ ಡೇಟಾವನ್ನು ಹ್ಯಾಕ್ ಮಾಡಲಾಗಿದೆಯೇ?

5) ನಿಮ್ಮನ್ನು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ (ಅಲ್ಲಿ ನೀವು ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ಹಲವಾರು ದಾಖಲೆಗಳನ್ನ ಅಪ್ ಲೋಡ್ ಮಾಡಲು ಟ್ಯಾಬ್ʼಗಳನ್ನು ಕಾಣಬಹುದು)

6) 'ಆಧಾರ್' ಟ್ಯಾಬ್ ಅನ್ನು ಆಯ್ಕೆ ಮಾಡಿ

7) ವಿವರಗಳನ್ನು ಭರ್ತಿ ಮಾಡಿ ಮತ್ತು 'Save' ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ : Home Loan Rates:ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

8) ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ.

9) ಉದ್ಯೋಗದಾತರು ಮತ್ತು UIDAI ನಿಮಗೆ ವಿವರಗಳನ್ನು ಅನುಮೋದಿಸಿದ ನಂತರ, ನಿಮ್ಮ PF ಖಾತೆ ಆಧಾರ್ ಕಾರ್ಡ್ʼಗೆ ಲಿಂಕ್ ಆಗುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News