Aadhaar Card ಹೊಂದಿರುವವರೇ ಗಮನಿಸಿ : ಆಧಾರ್ ಸಂಬಂಧಿಸಿದ ಕೆಲಸಗಳು ಇನ್ನು ಮುಂದೆ ತುಂಬಾ ಸುಲಭ 

ಪ್ರಸ್ತುತ 166 ರಲ್ಲಿ 55 ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ 52,000 ಆಧಾರ್ ದಾಖಲಾತಿ ಕೇಂದ್ರಗಳನ್ನು ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುತ್ತಿವೆ.

Written by - Channabasava A Kashinakunti | Last Updated : Oct 4, 2021, 02:17 PM IST
  • ಸರ್ಕಾರದಿಂದ ಹೊಸ ಆಧಾರ್ ಸೇವಾ ಕೇಂದ್ರಗಳು
  • ಈ ಕೇಂದ್ರಗಳು ಬೆಳಿಗ್ಗೆ 9 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತವೆ
  • ವಾರದ ಏಳು ದಿನ ಕಾರ್ಯನಿರ್ವಹಿಸಲಿವೆ ಈ ಕೇಂದ್ರಗಳು
Aadhaar Card ಹೊಂದಿರುವವರೇ ಗಮನಿಸಿ : ಆಧಾರ್ ಸಂಬಂಧಿಸಿದ ಕೆಲಸಗಳು ಇನ್ನು ಮುಂದೆ ತುಂಬಾ ಸುಲಭ  title=

ನವದೆಹಲಿ : ಈಗ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಕೆಲಸವನ್ನು ಹೆಚ್ಚು ಸುಲಭವಾಗಲಿವೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ 122 ನಗರಗಳಲ್ಲಿ ಹೊಸ 166 ಏಕ ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ.

55 ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ 

ಪ್ರಸ್ತುತ 166 ರಲ್ಲಿ 55 ಆಧಾರ್ ಸೇವಾ ಕೇಂದ್ರಗಳು (Aadhaar Seva Kendra) ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ 52,000 ಆಧಾರ್ ದಾಖಲಾತಿ ಕೇಂದ್ರಗಳನ್ನು ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುತ್ತಿವೆ.

ಇದನ್ನೂ ಓದಿ : Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಪಡೆಯಿರಿ ಡಬ್ಬಲ್ ಹಣ : ಬಡ್ಡಿ ಸೇರಿದಂತೆ ಇತರೆ ವಿವರ ಇಲ್ಲಿದೆ

ಯುಐಡಿಎಐ ಅಧಿಕೃತ ಮಾಹಿತಿ ಪ್ರಕಾರ, UIDAI 122 ನಗರಗಳಲ್ಲಿ 166 ಏಕ ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

70 ಲಕ್ಷ ಜನರ ಅಗತ್ಯಗಳನ್ನು ಪೂರೈಸಲಾಗಿದೆ

ಯುಐಡಿಎಐ(UIDAI)ನ ಟ್ವೀಟ್ ನಲ್ಲಿ, ವಾರದಲ್ಲಿ ಏಳು ದಿನಗಳು ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ, 55 ಆಧಾರ್ ಸೇವಾ ಕೇಂದ್ರಗಳಲ್ಲಿ ವಿಕಲಚೇತನರು ಸೇರಿದಂತೆ 70 ಲಕ್ಷ ಜನರ ಅಗತ್ಯಗಳನ್ನು ಪೂರೈಸಲಾಗಿದೆ. ಮಾದರಿ ಎ ಆಧಾರ್ ಸೇವಾ ಕೇಂದ್ರವು 1000 ದಾಖಲಾತಿಗಳನ್ನು ನಿರ್ವಹಿಸುವ ಮತ್ತು ಪ್ರತಿ ದಿನ ವಿನಂತಿಗಳನ್ನು ನವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾದರಿ ಬಿ ಕೇಂದ್ರವು 500 ಮತ್ತು ಮಾದರಿ ಸಿ ಕೇಂದ್ರವು ದಿನಕ್ಕೆ 250 ದಾಖಲಾತಿ ಮತ್ತು ನವೀಕರಣ ವಿನಂತಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಯವರೆಗೆ UIDAI 130.9 ಕೋಟಿ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ.

ವರದ ಏಳು ದಿನ ಕಾರ್ಯನಿರ್ವಹಿಸಲಿವೆ ಕೇಂದ್ರಗಳು

ಆಧಾರ್ ಸೇವಾ ಕೇಂದ್ರಗಳು ವಾರದ ಏಳು ದಿನಗಳು ತೆರೆದಿರುತ್ತವೆ. ಎಲ್ಲಾ ರೀತಿಯ ಕೇಂದ್ರಗಳು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಸಾರ್ವಜನಿಕ ರಜಾದಿನಗಳಲ್ಲಿ(Govt Holidays) ಮಾತ್ರ ರಜೆ ಇರುತ್ತವೆ. ಸೇವಾ ಕೇಂದ್ರ ಪ್ರೈವೇಟ್ ನಲ್ಲಿ ಆಧಾರ್ ಲಭ್ಯವಿಲ್ಲ ಎಂಬುದನ್ನು ಗಮನಿಸಬಹುದು. ಆಧಾರ್ ಸೇವೆಗಳು ಬ್ಯಾಂಕುಗಳು, ಅಂಚೆ ಕಚೇರಿಗಳು, ಸಾಮಾನ್ಯ ಸೇವಾ ಕೇಂದ್ರಗಳು, ರಾಜ್ಯ ಸರ್ಕಾರಿ ಅಧಿಕಾರಿಗಳ ಕಚೇರಿಗಳು ಮತ್ತು UIDAI ನಿಂದ ನಡೆಸಲ್ಪಡುವ ಆಧಾರ್ ಸೇವಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ : Today Gold Price : ಇಂದು ಹೆಣಗಾಡುತ್ತಿದೆ ಚಿನ್ನದ ಬೆಲೆ, ₹ 10,000 ಕುಸಿತ ಕಂಡ ಬೆಳ್ಳಿ ಬೆಲೆ

ಆಧಾರ್ ನೋಂದಣಿ ಉಚಿತವಾಗಿದೆ ಎಂಬುವುದು ನೆನಪಿರಲಿ ಆದರೆ ಹುಟ್ಟಿದ ದಿನಾಂಕ(Date of Birth) ತಿದ್ದುಪಡಿಗಾಗಿ ಅಥವಾ ಪಿವಿಸಿ ಕಾರ್ಡ್ ಪಡೆಯಲು 50 ರೂ. ಮತ್ತು ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗೆ 100 ರೂ. ಹಣ ನೀಡಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News