ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಸುದ್ದಿ

ಐಟಿ ಮತ್ತು ಬಿಪಿಓ ಕಂಪೆನಿಗಳಿಗೆ ವರ್ಕ್ ಫ್ರಮ್ ಹೋಂ ಮಾಡಲು ಅವಕಾಶ ನೀಡುವಂತೆ ಈ ಮೊದಲು ಜುಲೈ 31ರವರೆಗೆ ನೀಡಿದ್ದ  ಅವಧಿಯನ್ನು ವಿಸ್ತರಿಸಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ.  

Last Updated : Jul 22, 2020, 07:50 AM IST
ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಸುದ್ದಿ title=

ಬೆಂಗಳೂರು: ಕೊರೋನಾವೈರಸ್ ಸೋಂಕನ್ನು ನಿವಾರಿಸುವ ನಿಟ್ಟಿನಲ್ಲಿ ಐಟಿ ಮತ್ತು ಬಿಪಿಓ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಹೊಸ ಸೂಚನೆ ನೀಡಿದ್ದು ಮಹಾಮಾರಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವರ್ಕ್ ಫ್ರಮ್ ಹೋಂ (Work from Home) ಅವಧಿಯನ್ನು ವಿಸ್ತರಿಸಿದೆ.

ಐಟಿ ಮತ್ತು ಬಿಪಿಓ ಕಂಪೆನಿಗಳಿಗೆ ವರ್ಕ್ ಫ್ರಮ್ ಹೋಂ ಮಾಡಲು ಅವಕಾಶ ನೀಡುವಂತೆ ಈ ಮೊದಲು ಜುಲೈ 31ರವರೆಗೆ ನೀಡಿದ್ದ  ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ.   

ತಡರಾತ್ರಿ ಮಾಡಿದ ಟ್ವೀಟ್‌ನಲ್ಲಿ, "ಕೋವಿಡ್ -19 (Covid-19) ಕಾರಣದಿಂದಾಗಿ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಿಒಟಿ ಸೇವಾ ಪೂರೈಕೆದಾರರಿಗೆ ನಿಯಮಗಳು ಮತ್ತು ಷರತ್ತುಗಳಲ್ಲಿ ಮನೆಯಿಂದ ಕೆಲಸ ಮಾಡುವ ಅವಧಿಯನ್ನು 2020 ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ. ಪ್ರಸ್ತುತ, ಐಟಿ ಕಂಪನಿಗಳ ಸುಮಾರು 85 ಪ್ರತಿಶತ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಮುಖ ಕೆಲಸಗಳನ್ನು ಮಾಡುವ ನೌಕರರು ಮಾತ್ರ ಕಚೇರಿಗೆ ಹೋಗುತ್ತಿದ್ದಾರೆ.

ಭಾರತದಲ್ಲಿ ಕರೋನಾವೈರಸ್ ಪ್ರಕರಣಗಳು ಮಂಗಳವಾರದವರೆಗೆ 11.55 ಲಕ್ಷ ದಾಟಿದ್ದರೆ, 28,084 ಜನರು ಸಾವನ್ನಪ್ಪಿದ್ದಾರೆ.

Trending News