ಬಡ ವ್ಯಕ್ತಿ ಪಾವತಿಸಬೇಕಾದ ವಿದ್ಯುತ್ ಬಿಲ್ 128 ರೂ ಅಲ್ಲ, 128 ಕೋಟಿ ರೂ!

ಉತ್ತರ ಪ್ರದೇಶದ ಬಡವನೊಬ್ಬನಿಗೆ 128 ಕೋಟಿ ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ವಿಧಿಸಲಾಯಿತು. ಆದರೆ ಈ ತಪ್ಪನ್ನು ಒಪ್ಪಿಕೊಳ್ಳದ ವಿದ್ಯುತ್ ಇಲಾಖೆ ಮಾತ್ರ ಹಣ ಪಾವತಿಸದ ಹೊರತು ವಿದ್ಯುತ್ ಸಂಪರ್ಕವಿಲ್ಲ ಎಂದು ಹೇಳಿದೆ.

Last Updated : Jul 21, 2019, 02:34 PM IST
ಬಡ ವ್ಯಕ್ತಿ ಪಾವತಿಸಬೇಕಾದ ವಿದ್ಯುತ್ ಬಿಲ್ 128 ರೂ ಅಲ್ಲ, 128 ಕೋಟಿ ರೂ!  title=
ani photo

ನವದೆಹಲಿ: ಉತ್ತರ ಪ್ರದೇಶದ ಬಡವನೊಬ್ಬನಿಗೆ 128 ಕೋಟಿ ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ವಿಧಿಸಲಾಲಾಗಿದೆ. ಆದರೆ ಈ ತಪ್ಪನ್ನು ಒಪ್ಪಿಕೊಳ್ಳದ ವಿದ್ಯುತ್ ಇಲಾಖೆ ಮಾತ್ರ ಹಣ ಪಾವತಿಸದ ಹೊರತು ವಿದ್ಯುತ್ ಸಂಪರ್ಕವಿಲ್ಲ ಎಂದು ಹೇಳಿದೆ.

ಉತ್ತರಪ್ರದೇಶದ ಹಾಪುರ್ ನಲ್ಲಿನ ಚಮ್ರಿ ಗ್ರಾಮದಲ್ಲಿ ವಾಸಿಸುತ್ತಿರುವ ಶಮಿಮ್ ಎನ್ನುವವರಿಗೆ ವಿದ್ಯುತ್ ಇಲಾಖೆ ಇಷ್ಟು ಪ್ರಮಾಣದ ಬಿಲ್ ನೀಡಬೇಕೆಂದು ಹೇಳಿದೆ ಎನ್ನಲಾಗಿದೆ. ಇದರಲ್ಲಾಗಿರುವ ತಪ್ಪಿನ ಬಗ್ಗೆ ಅವರು ವಿದ್ಯುತ್ ಇಲಾಖೆ ಗಮನ ಸೆಳೆದಾಗ ಅವರು ಈ ಬಿಲ್ ನ್ನು ಪಾವತಿಬೇಕು ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ಬಿಲ್ ನಲ್ಲಿ  ಮುದ್ರಿಸಲಾದ ಮೊತ್ತವು 2 ಕಿಲೋವ್ಯಾಟ್ ಮನೆ ಸಂಪರ್ಕಕ್ಕೆ 128, 45, 95,444 ರೂ. ಆಗಿದೆ ಆಗಿದೆ. ಎಎನ್ಐಗೆ ಮಾತನಾಡಿದ ಅವರು ' ನಮ್ಮ ಮನವಿಯನ್ನು ಯಾರೂ ಕೇಳುತ್ತಿಲ್ಲ, ನಾವು ಆ ಮೊತ್ತವನ್ನು ಹೇಗೆ ನೀಡಬೇಕು ? ನಾವು ಅದರ ಬಗ್ಗೆ ದೂರು ನೀಡಲು ಹೋದಾಗ, ನಾವು ಬಿಲ್ ಪಾವತಿಸದ ಹೊರತು ಅವರು ನಮ್ಮ ವಿದ್ಯುತ್ ಸಂಪರ್ಕವನ್ನು ಪುನರಾರಂಭಿಸುವುದಿಲ್ಲ ಎಂದು ನಮಗೆ ಅಧಿಕಾರಿಗಳು ಹೇಳಿದ್ದಾರೆ 'ಎಂದರು.

'ನಾವು ಫ್ಯಾನ್ ಮತ್ತು ಲೈಟ್ ಅನ್ನು ಮಾತ್ರ ಬಳಸುತ್ತೇವೆ. ಮೊತ್ತವು ಎಷ್ಟು ಹೆಚ್ಚಾಗಬಹುದು? ನಾವು ಬಡವರು. ಇಷ್ಟು ದೊಡ್ಡ ಮೊತ್ತವನ್ನು ನಾವು ಹೇಗೆ ನೀಡಲು ಸಾಧ್ಯ" ಎಂದು ಶಮೀಮ್ ಅವರ ಪತ್ನಿ ಖೈರು ನಿಶಾ ಪ್ರಶ್ನಿಸಿದರು.ಇಡೀ ನಗರದ ಬಿಲ್ ಅನ್ನು ವಿದ್ಯುತ್ ಇಲಾಖೆ  ತಮಗೆ ಹಸ್ತಾಂತರಿಸಿದೆ ಎಂದು ಅವರು ಆರೋಪಿಸಿದರು. ಸಾಮಾನ್ಯವಾಗಿ ಮಾಸಿಕ ಸರಾಸರಿ 700 ರೂ ಅಥವಾ 800 ರೂ ವಿದ್ಯುತ್ ದರ ವನ್ನು ತಾವು ಪಾವತಿಸುವುದಾಗಿ ಅವರು ಹೇಳಿದ್ದಾರೆ.

ಈ ವಿಚಾರವಾಗಿ ವಿದ್ಯುತ್ ಇಲಾಖೆಯ ಎಲೆಕ್ಟ್ರಿಕಲ್ ಎಂಜಿನಿಯರ್ ರನ್ನು ಸಂಪರ್ಕಿಸಿದಾಗ ಇದೇನು ದೊಡ್ಡ ವಿಷಯವಲ್ಲ, ಬಿಲ್ ಅನ್ನು ಇಲಾಖೆಗೆ ಹಿಂದಿರುಗಿಸಿದ ನಂತರ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.
 

Trending News