ನವದೆಹಲಿ: ಛತ್ತೀಸ್‌ಗಡದಲ್ಲಿ ಶನಿವಾರ ನಡೆದ ಭೀಕರ ಮುಖಾಮುಖಿಯ ನಂತರ ಮಾವೋವಾದಿ ಬಂಡುಕೋರರು ಅಪಹರಿಸಿದ
ಕಮಾಂಡೋನನ್ನು 100 ಗಂಟೆಗಳಿಗೂ ಹೆಚ್ಚು ಕಾಲದ ನಂತರ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.
Iಇದನ್ನೂ ಓದಿ:SRO Recruitment 2021: 10 ಮತ್ತು 12ನೇ ತರಗತಿ ಪಾಸಾದವರಿಗೆ ISROದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ
ಸುಮಾರು ಮೂರು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ನಂತರ ರಾಕೇಶ್ವರ ಸಿಂಗ್ ಮಾನ್ಹಾಸ್ ಅವರನ್ನು ಮಾವೋವಾದಿಗಳು
ಒತ್ತೆಯಾಳುಗಳಾಗಿ ತೆಗೆದುಕೊಂಡರು.ನಾಲ್ಕು ವರ್ಷಗಳಲ್ಲಿ ಈ ರೀತಿಯ ಮಾರಣಾಂತಿಕ ಹೊಂಚುದಾಳಿಯಲ್ಲಿ, ಸುಮಾರು
2,000 ಭದ್ರತಾ ಸಿಬ್ಬಂದಿಗಳು ಛತ್ತೀಸ್‌ಗಡ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಬಂಡಾಯ ನಾಯಕನ
ಹುಡುಕಾಟದಲ್ಲಿದ್ದರು.ಕೊಲ್ಲಲ್ಪಟ್ಟ ಭದ್ರತಾ ಪಡೆಗಳಿಂದ ಬಂಡುಕೋರರು ಶಸ್ತ್ರಾಸ್ತ್ರ, ಮದ್ದುಗುಂಡು, ಸಮವಸ್ತ್ರ ಮತ್ತು ಬೂಟುಗಳನ್ನು
ಲೂಟಿ ಮಾಡಿದ್ದರು.
ಇದನ್ನೂ ಓದಿ:NPS Benefits Issued: ಕೇಂದ್ರ ನೌಕರರ ಪಿಂಚಣಿ, NPS ಪ್ರಯೋಜನಗಳ ಕುರಿತು ಸರ್ಕಾರದಿಂದ ಮಹತ್ವದ ಅಧಿಸೂಚನೆ!
ಸೈನಿಕರು ಸಾವನ್ನಪ್ಪಿದ ನಂತರ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ 'ಧೈರ್ಯಶಾಲಿ ಹುತಾತ್ಮರ ತ್ಯಾಗವನ್ನು ಎಂದಿಗೂ
ಮರೆಯಲಾಗುವುದಿಲ್ಲ" ಎಂದು ಸಂತಾಪ ವ್ಯಕ್ತಪಡಿಸಿದ್ದರು. ಇನ್ನೊಂದೆಡೆಗೆ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿ ಶಾಂತಿ ಮತ್ತು
ಪ್ರಗತಿಯ ಈ ಶತ್ರುಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸಲಿದೆ" ಎಂದು ಬರೆದಿದ್ದರು.
ಇದನ್ನೂ ಓದಿ : IND vs AUS: ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ XI ಘೋಷಣೆ
2017 ರ ನಂತರ ನಕ್ಸಲರು ಮಾಡಿದ ಭೀಕರ ದಾಳಿಗೆ 20 ಕ್ಕೂ ಅಧಿಕ ಭದ್ರತಾ ಪಡೆಗಳ ಸೈನಿಕರು ಗುಂಡಿನ ಚಕಾಮುಖಿಯಲ್ಲಿ ಸಾವನ್ನಪ್ಪಿದ್ದರು.ಕಳೆದ ಮಾರ್ಚ್‌ನಲ್ಲಿ ಚತ್ತೀಸ್‌ಗಡದಲ್ಲಿ 300 ಕ್ಕೂ ಹೆಚ್ಚು ಸಶಸ್ತ್ರ ಬಂಡುಕೋರರು ನಡೆಸಿದ ದಾಳಿಯಲ್ಲಿ ಕಮಾಂಡೋ ಪೆಟ್ರೋಲ್‌ನ ಹದಿನೇಳು ಪೊಲೀಸರು ಸಾವನ್ನಪ್ಪಿದ್ದರು.ಮಾವೋವಾದಿಗಳ ಮೇಲೆ ಆರೋಪ ಹೊರಿಸಲಾದ ಬಾಂಬ್ ದಾಳಿಯಲ್ಲಿ 2019 ರಲ್ಲಿ ನಡೆದ ಭಾರತದ ಚುನಾವಣೆಗೆ ಮುನ್ನ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹದಿನಾರು ಕಮಾಂಡೋಗಳು ಸಾವನ್ನಪ್ಪಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.