ಅಲ್ವಾರ್: ರಾಜಸ್ಥಾನದ ಅಲ್ವಾರ್ನಲ್ಲಿರುವ ಸಾಹೀಲ್ ಆಸ್ಪತ್ರೆಯಲ್ಲಿ ಸೋಮವಾರ ಅಪರೂಪದ ಮಗು ಜನಿಸಿದೆ. ಈ ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಾಹಿತಿ ಪ್ರಕಾರ, ಭರತ್ಪುರ್ ಜಿಲ್ಲೆಯ ಸಿಕ್ರಿ ನಿವಾಸಿ ಸಿಮ್ರಾನ್ ಸೋಮವಾರ ಸಂಜೆ 6.24 ಕ್ಕೆ ಈ ಮಗುವಿಗೆ ಜನ್ಮ ನೀಡಿದರು. ಆದರೆ ಅಪರೂಪದ ಕಾಯಿಲೆಯೊಂದಿಗೆ ಜನಿಸಿರುವ ಇಂತಹ ಮಗುವನ್ನು 'ಕೊಲಾಡಿಯನ್ ಬೇಬಿ' ಎಂದು ಕರೆಯಲಾಗುತ್ತದೆ. ಇದು 3 ಲಕ್ಷ ಮಕ್ಕಳಲ್ಲಿ ಒಂದು ಮಗುವಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ವಾಸ್ತವವಾಗಿ, ಮಹಿಳೆಗೆ ಹೆರಿಗೆ ಆದಾಗ ಆಸ್ಪತ್ರೆಯ ಇಡೀ ಸಿಬ್ಬಂದಿ ಮಗುವನ್ನು ಕಂಡು ಭಯಭೀತರಾಗಿ ತಕ್ಷಣ ಕೊಠಡಿಯಿಂದ ಹೊರಬಂದಿದ್ದಾರೆ. ಆ ಮಗುವಿನ ಕುಟುಂಬವೂ ಕೂಡ ಮಗುವನ್ನು ನೋಡಲು ಭಯಪಟ್ಟಿದ್ದಾರೆ. ಮಗುವಿನ ಜನ್ಮ ಸಮಯದಲ್ಲಿ ಮಗುವಿನ ದೇಹದಲ್ಲಿ ಪ್ಲಾಸ್ಟಿಕ್ ನಂತಹ ಪದರ ಇತ್ತು ಮತ್ತು ಅದನ್ನು ತೆಗೆಯಲು ಪ್ರಾರಂಭಿಸಿದಾಗ ಮಗುವಿನ ದೇಹದಿಂದ ರಕ್ತ ಹರಿಯಲು ಪ್ರಾರಂಭಿಸಿಟು. ಅದಾಗ್ಯೂ, ವೈದ್ಯರು ಮಗುವನ್ನು ರಕ್ಷಿಸಿದ್ದಾರೆ.
ಬಳಿಕ ಮಗುವನ್ನು ಜೈಪುರ್ ಜೆಕೆ ಲೋನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ವೈದ್ಯರು, ಈ ರೀತಿ ಪ್ರಕರಣದ ಲಕ್ಷಾಂತರ ಜನರಿದ್ದಾರೆ ಎಂದಿದ್ದಾರೆ. ಇಂತಹ ಮಕ್ಕಳನ್ನು 'ಪ್ಲಾಸ್ಟಿಕ್ ಬೇಬಿ' ಎಂದೂ ಕರೆಯಲಾಗುತ್ತದೆ. ಈ ಮಗು ಕೊಲೋಡಿಯನ್ ಕಾಯಿಲೆಯಿಂದ ಬಳಲುತ್ತಿದೆ, ಇದು ಒಂದು ಅನುವಂಶಿಕ ಕಾಯಿಲೆಯಾಗಿದ್ದು, ಸ್ವಲ್ಪ ಸಮಯದ ಬಳಿಕ ಇದು ಗುಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.