99ರ ವೃದ್ಧನಿಗೆ ಉಕ್ಕಿದ ಯೌವನ, 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಹೋದ ವೃದ್ಧ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

Last Updated : Jul 10, 2018, 10:46 AM IST
99ರ ವೃದ್ಧನಿಗೆ ಉಕ್ಕಿದ ಯೌವನ, 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ!  title=

ಚೆನ್ನೈ: 10 ವರ್ಷದ ಬಾಲಕಿಯ ಮೇಲೆ 99 ವರ್ಷದ ನಿವೃತ್ತ ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಹೇಯ ಘಟನೆ ಚೆನೈನಲ್ಲಿ ನಡೆದಿದೆ. ಇದೀಗ ಪೋಲೀಸರು ಈತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಚೆನೈನ ಅವದಿ ಪ್ರದೇಶದ ನಿವಾಸಿಯಾದ ಈ ವೃದ್ಧ ಐದು ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದ. ಅವುಗಳಲ್ಲಿ ಒಂದು ಮನೆಯಲ್ಲಿ ಈ ಬಾಲಕಿ ವಾಸವಿದ್ದಳು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಹೋದ ವೃದ್ಧ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಪೋಷಕರಿಗೆ ಬಾಲಕಿ ವಿಷಯ ತಿಳಿಸಿದಾಗ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಗ ಲೈಂಗಿಕ ಕಿರುಕುಳ ನೀಡಿರುವುದು ಸಾಬಿತಾಗಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಸದ್ಯ ಪೊಲೀಸರು ವೃದ್ಧ ಪರಶುರಾಮನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Trending News