7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ! ಮತ್ತೊಂದು ಭತ್ಯೆಯ ಹೆಚ್ಚಳಕ್ಕೆ ಸರ್ಕಾರ ಚಿಂತನೆ

7th Pay Commission / Conveyance Allowance News: ಸರ್ಕಾರಿ ನೌಕರರ ಪಾಲಿಗೆ ಕೆಲಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಪ್ರತಿ ಬಾರಿ ತುಟ್ಟಿ ಭತ್ಯೆ ಶೇ.50ರಷ್ಟು ಹೆಚ್ಚಳವಾಗುವುದರ ಜೊತೆಗೆ ಇತರೆ DA ಲಿಂಕ್ಡ್ ಭತ್ಯೆಗಳ ರೀತಿಯಲ್ಲೇ ಕನ್ವೆನ್ಸ್ ಅಲೌನ್ಸ್ ನಲ್ಲಿಯೂ ಕೂಡ ಶೇ.25 ರಷ್ಟು ಹೆಚ್ಚಳವಾಗಲಿದೆ.

Written by - Nitin Tabib | Last Updated : Jan 30, 2022, 12:22 PM IST
  • ಕೇಂದ್ರ ಸರ್ಕಾರಿ ನೌಕರಿಗೊಂದು ಸಂತಸದ ಸುದ್ದಿ
  • ಮತ್ತೊಂದು ಭತ್ಯೆಯಲ್ಲಿ ಬಂಪರ್ ಹೆಚ್ಚಳ
  • ಯಾರಿಗೆ ಇದರ ಲಾಭ ಸಿಗಲಿದೆ ತಿಳಿಯೋಣ ಬನ್ನಿ
7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ! ಮತ್ತೊಂದು ಭತ್ಯೆಯ ಹೆಚ್ಚಳಕ್ಕೆ ಸರ್ಕಾರ ಚಿಂತನೆ title=
Conveyance Allowance News (File Photo)

ನವದೆಹಲಿ: Conveyance Allowance News: ಕೇಂದ್ರ ಸರ್ಕಾರಿ ನೌಕರ (Government Employee) ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇನ್ನೂ ಒಂದು ಭತ್ಯೆಯಲ್ಲಿ ಬಂಪರ್ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಹೌದು ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ (7th Pay Commission Latest News) ಅಡಿ ವಿಭಿನ್ನ ಭತ್ಯೆಗಳು ಸಿಗುತ್ತವೆ. ಇದರಲ್ಲಿ, ವಿವಿಧ ಇಲಾಖೆಗಳಲ್ಲಿ ಭತ್ಯೆಗಳು ಸಹ ವಿಭಿನ್ನವಾಗಿವೆ.

ಈ ಅನುಕ್ರಮದಲ್ಲಿ ಇತ್ತೀಚೆಗಷ್ಟೇ ಸರ್ಕಾರಿ ವೈದ್ಯರಿಗೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಸರ್ಕಾರಿ ವೈದ್ಯರ ಕನ್ವೆಯನ್ಸ್ ಅಲೌನ್ಸ್  ಹೆಚ್ಚಳವಾಗಿದೆ. ಇದರಲ್ಲಿ ಕಾರಿನಲ್ಲಿ ಚಾಲನೆ ಮಾಡುವ ನೌಕರರಿಗೆ ಗರಿಷ್ಠ ಲಾಭವನ್ನು ನೀಡಲಾಗಿದೆ. ಕೇಂದ್ರ ನೌಕರರಿಗೆ ಈ ಬಾರಿ ಭತ್ಯೆ ಹಲವು ಪಟ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ದ್ವಿಚಕ್ರ ವಾಹನ ಮತ್ತು ಸಾರ್ವಜನಿಕ ಸಾರಿಗೆ ಬಳಸುವ ವೈದ್ಯರ (Doctors) ಭತ್ಯೆಯೂ ಹೆಚ್ಚಿಸಲಾಗಿದೆ.

ನಿಮಗೆ ಎಷ್ಟು ಭತ್ಯೆ ಸಿಗುತ್ತದೆ?
ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಕಾರ್ ಚಾಲಕ ವೈದ್ಯರಿಗೆ ವಾಹನ ಭತ್ಯೆಯ ಮಿತಿಯನ್ನು ಹೆಚ್ಚಿಸಿದೆ. ಅಂದರೆ, ಇದೀಗ  ಅವರು ಪ್ರತಿ ತಿಂಗಳು ಗರಿಷ್ಠ 7,150 ರೂ. ಭತ್ಯೆ ಸಿಗಲಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ CGHS ಘಟಕಗಳ  ಅಡಿ   ಇರುವ ಆಸ್ಪತ್ರೆಗಳು/ಫಾರ್ಮಸಿ/ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಂದ್ರ ಆರೋಗ್ಯ ಸೇವೆ (CHS) ವೈದ್ಯರಿಗೆ ಸಾರಿಗೆ ಭತ್ಯೆಯ ಸಮಸ್ಯೆ  ದೀರ್ಘಕಾಲದಿಂದ ಒಂದು ಸಮಸ್ಯೆಯಾಗಿಯೇ ಮುಂದುವರೆದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಇದೀಗ ಕುರಿತು ಸರ್ಕಾರ  ನಿರ್ಧಾರ ಕೈಗೊಂಡಿದೆ. ಇದರ ಅಡಿಯಲ್ಲಿ, ಪ್ರತಿ ಬಾರಿ ತುಟ್ಟಿಭತ್ಯೆ 50% ರಷ್ಟು ಹೆಚ್ಚಾದಾಗ, ಇತರೆ ಡಿಎ ಲಿಂಕ್ಡ್  ಭತ್ಯೆಗಳಂತೆ (DA Linked Allowance) ಸಾರಿಗೆ ಭತ್ಯೆಯು ಕೂಡ ಶೇ. 25 ರಷ್ಟು ಹೆಚ್ಚಾಗಲಿದೆ.

ಭತ್ಯೆಯನ್ನು ತೆಗೆದುಕೊಳ್ಳುವ ನಿಯಮಗಳು ಮತ್ತು ಷರತ್ತುಗಳು 
ಸರ್ಕಾರದ ಆದೇಶದ ಪ್ರಕಾರ, ವೈದ್ಯಾಧಿಕಾರಿಯು ಪ್ರತಿ ತಿಂಗಳು ಸರಾಸರಿ 20 ಭೇಟಿಗಳಿಗೆ  ಅಥವಾ ಅವರ ಸಾಮಾನ್ಯ ಕರ್ತವ್ಯದ ಅವಧಿಯ ಹೊರಗೆ 20 ಭೇಟಿಗಳಿಗೆ ಹಣ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದವರ ಸಂಖ್ಯೆ 20 ಕ್ಕಿಂತ ಕಡಿಮೆ ಮತ್ತು 6 ಕ್ಕಿಂತ ಹೆಚ್ಚು ಇರಬೇಕು. ಇದರ ಅಡಿಯಲ್ಲಿ, ತಿಂಗಳಿಗೆ ರೂ 375, ರೂ 175 ಮತ್ತು ರೂ 130 ರ ಕನಿಷ್ಠ ಸಾಗಣೆ ಭತ್ಯೆ ಸಿಗಲಿದೆ. ಮತ್ತೊಂದೆಡೆ, ಮನೆಗೆ ಬರುವ ಅಥವಾ ಆಸ್ಪತ್ರೆಗೆ ಹೋಗುವ ಸಂಖ್ಯೆ 6 ಕ್ಕಿಂತ ಕಡಿಮೆಯಿದ್ದರೆ ಭತ್ಯೆ ನೀಡಲಾಗುವುದಿಲ್ಲ.

ಇದನ್ನೂ ಓದಿ-J&K encounter:ಪುಲ್ವಾಮಾ ದಾಳಿಯ ರೂವಾರಿ ಜಾಹಿದ್ ವಾನಿ ಸೇರಿದಂತೆ 5 ಉಗ್ರರು ಹತ

ಸಾರಿಗೆ ಭತ್ಯೆ ಪಡೆಯುವುದು ಹೇಗೆ?
ಈಗ ಈ ವಾಹನ ಭತ್ಯೆಯನ್ನು ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ, ನಗರದ ಪುರಸಭೆಯ ವ್ಯಾಪ್ತಿಯಲ್ಲಿ 8 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ವ್ಯಾಪ್ತಿಯೊಳಗೆ ಅಧಿಕೃತ ಕರ್ತವ್ಯದ ಮೇಲೆ ಪ್ರಯಾಣಿಸಲು ಯಾವುದೇ ತಜ್ಞ / ವೈದ್ಯಕೀಯ ಅಧಿಕಾರಿಗಳು ಯಾವುದೇ ದೈನಂದಿನ ಭತ್ಯೆ ಅಥವಾ ಮೈಲೇಜ್ ಭತ್ಯೆಯನ್ನು ಪಡೆಯುವುದಿಲ್ಲ. ಈ ಆದೇಶದ ಪ್ರಕಾರ, ಸಿಜಿಎಚ್‌ಎಸ್ ಅಡಿಯಲ್ಲಿ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಯೋಜನೆಗೊಂಡ ತಜ್ಞರ ಸಂದರ್ಭದಲ್ಲಿ, ಬಹು ಹುದ್ದೆಗಳಿಗೆ ನೇಮಕಗೊಂಡವರಿಗೆ ಮಾತ್ರ ಸಾರಿಗೆ ಭತ್ಯೆ ಸ್ವೀಕಾರಾರ್ಹವಾಗಿರುತ್ತದೆ.

ಇದನ್ನೂ ಓದಿ-ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿ

ಪ್ರಮಾಣಪತ್ರ ಕಡ್ಡಾಯವಾಗಿದೆ
- ಈ ಆದೇಶದ ಪ್ರಕಾರ, ಸಾರಿಗೆ ಭತ್ಯೆ ಪಡೆಯಲು ತಜ್ಞ/ವೈದ್ಯಕೀಯ ಅಧಿಕಾರಿಗೆ ಮಾಸಿಕ ಬಿಲ್‌ನೊಂದಿಗೆ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಿರುತ್ತದೆ.
- ಕರ್ತವ್ಯದಲ್ಲಿರುವಾಗ, ರಜೆಯಲ್ಲಿ ಮತ್ತು ಯಾವುದೇ ತಾತ್ಕಾಲಿಕ ವರ್ಗಾವಣೆಯ ಸಮಯದಲ್ಲಿ ಯಾವುದೇ ಸಾಗಣೆ ಭತ್ಯೆಗೆ ಅನುಮತಿ ನೀಡಲಾಗುವುದಿಲ್ಲ.
- ಕಡಿಮೆ ದರವನ್ನು ಕ್ಲೈಮ್ ಮಾಡುವ ವೈದ್ಯಕೀಯ ಅಧಿಕಾರಿಗಳು/ತಜ್ಞರು ಮತ್ತು ಮೋಟಾರ್‌ಕಾರ್ ಅಥವಾ ಮೋಟಾರ್‌ಸೈಕಲ್/ಸ್ಕೂಟರ್ ಬಳಸದಿರುವವರು ಸಂಬಳದ ಬಿಲ್‌ನೊಂದಿಗೆ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ-SBI: ನಾರಿ ಶಕ್ತಿಗೆ ತಲೆಬಾಗಿದ ಸ್ಟೇಟ್ ಬ್ಯಾಂಕ್, ಗರ್ಭವತಿ ಮಹಿಳೆಯರು 'ಅನರ್ಹ' ಎಂದು ಹೇಳಿದ ಆದೇಶ ವಾಪಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News