7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಇಂದು 'DA-DR' ಹೆಚ್ಚಳ ಸಾಧ್ಯತೆ!

ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಪರಿಷ್ಕೃತ ವೇತನ ಬರಲಿದೆ

Last Updated : Jun 26, 2021, 11:54 AM IST
  • ತುಟ್ಟಿ ಭತ್ಯೆ (DA) ಹೆಚ್ಚಳಕ್ಕಾಗಿ ಕಾತರದಿಂದ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು
  • ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಪರಿಷ್ಕೃತ ವೇತನ ಬರಲಿದೆ
  • ಸಿಬ್ಬಂದಿ ತರಬೇತಿ ಇಲಾಖೆ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳ ಇಂದು ಮಹತ್ವದ ಸಭೆ
7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಇಂದು 'DA-DR' ಹೆಚ್ಚಳ ಸಾಧ್ಯತೆ! title=

ನವದೆಹಲಿ : ತುಟ್ಟಿ ಭತ್ಯೆ (DA) ಹೆಚ್ಚಳಕ್ಕಾಗಿ ಕಾತರದಿಂದ ಕಾಯುತ್ತಿರುವ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಪರಿಷ್ಕೃತ ವೇತನ ಬರಲಿದೆ. ಅವರ ಸ್ಥಗಿತಗೊಂಡ ತುಟ್ಟಿ ಭತ್ಯೆ (DA) ಮತ್ತು ತುಟ್ಟಿಪರಿಹಾರ (DR) ಅನ್ನು 1 ಜುಲೈ 2021 ರಿಂದ ಪುನರಾರಂಭಿಸಲಾಗುವುದು ಎಂದು ಸರ್ಕಾರ ಈಗಾಗಲೇ ಸಂಸತ್ತಿನಲ್ಲಿ ಹೇಳಿದೆ.

ಬಾಕಿ ಯ ಬಗ್ಗೆ ಕೇಂದ್ರ ಸರ್ಕಾರಿ ನೌಕರರ (CGS) ಪ್ರಾತಿನಿಧಿಕ ಸಂಸ್ಥೆ ಯಾದ ಜೆಸಿಎಂ, ಸಿಬ್ಬಂದಿ ತರಬೇತಿ ಇಲಾಖೆ (DOPT) ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳು ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ತುಟ್ಟಿಭತ್ಯೆ (DA) ಮತ್ತು ತುಟ್ಟಿಪರಿಹಾರ (DR) ಮೇಲಿನ ಬಾಕಿ ಪ್ರಯೋಜನಗಳ ಬಗ್ಗೆ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ : Delta Plus Variant: ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ 8 ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ ಕೇಂದ್ರ ಹೇಳಿದ್ದೇನು?

ಕಳೆದ ವರ್ಷ,  ಕೊರೋನಾ ದಿಂದಾಗಿ, ಸರ್ಕಾರವು ನೌಕರರು(Central Government Employees) ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (DA) ಮತ್ತು ತುಟ್ಟಿಪರಿಹಾರ (DR) ಅನ್ನು ತಡೆಹಿಡಿದಿತ್ತು, ಇದು ಈ ಬಾರಿ ಬಿಡುಗಡೆಯಾಗಲಿದೆ. ಜುಲೈ,2021 ರಿಂದ ಡಿಎ ಯನ್ನು ಪುನಃಸ್ಥಾಪಿಸುವ ನಿರ್ಧಾರವು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ಇದನ್ನೂ ಓದಿ : ಪಿನಾಕಾ ಮತ್ತು 122 ಎಂಎಂ ಕ್ಯಾಲಿಬರ್ ರಾಕೆಟ್‌ಗಳ ಉಡಾವಣೆ

ಜುಲೈ 1 ರಿಂದ ಡಿಎಯಲ್ಲಿ ಯಾವುದೇ ಹೆಚ್ಚಳವು(DA, DR Hike) ಆ ದಿನದಿಂದ ಮಾತ್ರ ಜಾರಿಗೆ ಬರಲಿದೆ, ಅಂದರೆ ಹಿಂದಿನ ಅವಧಿಗೆ ಡಿಎ ಯನ್ನು ಪರಿಷ್ಕರಿಸದಿರುವ ಬಗ್ಗೆ ಉದ್ಯೋಗಿಗಳಿಗೆ ಯಾವುದೇ ಬಾಕಿ ಸಿಗುವುದಿಲ್ಲ. ಆದ್ದರಿಂದ ಮೇಲಿನ ಎರಡು ಪಕ್ಷಗಳ ನಡುವೆ ಜೂನ್ 26 ರಂದು ನಡೆಯಲಿರುವ ಸಭೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 7 ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ ಡಿಎ ಮತ್ತು ಡಿಆರ್ ನ ಬಾಕಿ ಪ್ರಯೋಜನಗಳ ಬಗ್ಗೆ ನಿರ್ಧರಿಸುತ್ತದೆ.

ಇದನ್ನೂ ಓದಿ : Finance Ministry Big Announcement: Corona ಪೀಡಿತರಿಗೆ ಭಾರಿ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News