7th pay commission: ಲಕ್ಷಾಂತರ ಪಿಂಚಣಿದಾರರಿಗೆ ಮೋದಿ ಸರ್ಕಾರದ ಗಿಫ್ಟ್

58 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮೋದಿ ಸರ್ಕಾರ ಅತಿದೊಡ್ಡ ಉಡುಗೊರೆಯನ್ನು ನೀಡಿದೆ. ಹೌದು ಇದೀಗ ಪಿಂಚಣಿದಾರರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸೌಲಭ್ಯ ಸರ್ಕಾರ ಒದಗಿಸಿದೆ.

Last Updated : Feb 4, 2020, 04:48 PM IST
7th pay commission: ಲಕ್ಷಾಂತರ ಪಿಂಚಣಿದಾರರಿಗೆ ಮೋದಿ ಸರ್ಕಾರದ ಗಿಫ್ಟ್ title=

ನವದೆಹಲಿ:58 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಮೋದಿ ಸರ್ಕಾರ ಅತಿದೊಡ್ಡ ಉಡುಗೊರೆಯನ್ನು ನೀಡಿದೆ. ಹೌದು ಇದೀಗ ಪಿಂಚಣಿದಾರರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಜೀವ ಪ್ರಮಾಣಪತ್ರವನ್ನು ಸಲ್ಲಿಸುವ ಸೌಲಭ್ಯ ಸರ್ಕಾರ ಒದಗಿಸಿದೆ. ಅಂದರೆ, ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್ ಅನ್ನು ಡೋರ್ ಸ್ಟೆಪ್ ರಿಕವರಿ ಮೂಲಕ ಬ್ಯಾಂಕ್‌ಗೆ ತಮ್ಮ ಲೈಫ್ ಸರ್ಟಿಫಿಕೆಟ್ ಅನ್ನು ಸಲ್ಲಿಸಲು  ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಕೇವಲ ರೂ.60 ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಕೇವಲ 60 ರೂ. ಸಲ್ಲಿಸಿದರೆ, ಬ್ಯಾಂಕ್ ನವರು ನಿಮ್ಮ ಮನೆಗೆ ಬಂದು ಈ ಸರ್ಟಿಫಿಕೆಟ್ ತೆಗೆದುಕೊಂಡು ಹೋಗಲಿದ್ದಾರೆ.

ಪಿಂಚಣಿದಾರರಿಗೆ ಮೋದಿ ಸರ್ಕಾರ ಜಾರಿಗೊಳಿಸಿರುವ ಈಜ್ ಆಫ್ ಲಿವಿಂಗ್ ಯೋಜನೆಯ ಅಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ಪಿಂಚಣಿ ಖಾತೆ ಕಚೇರಿಗಳು ಮತ್ತು ಪಿಂಚಣಿ ನೀಡುವ ಬ್ಯಾಂಕುಗಳಿಗೆ ಪಿಂಚಣಿದಾರರ ಮನೆಗೆ ಭೇಟಿ ನೀಡಿ ಅವರ ಬಳಿಯಿಂದ ಜೀವನ ಪ್ರಮಾಣ ಪತ್ರ ಪಡೆಯುವಂತೆ ಸರ್ಕಾರ ಆದೇಶ ನೀಡಿದೆ. ಇದಕ್ಕಾಗಿ, ಕಾಲ್ ಸೆಂಟರ್ ಅಥವಾ ಮೊಬೈಲ್ ಅಪ್ಲಿಕೇಶನ್‌ನ ಸಹಾಯ ಕೂಡ ಪಡೆಯಬಹುದಾಗಿದೆ.

2015ರಲ್ಲಿ ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಅಭಿಯಾನ ಆರಂಭಿಸಿತ್ತು. ಆ ಬಳಿಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗೆ ಅಭಿಯಾನ ಕೂಡ ಹಮ್ಮಿಕೊಂಡಿತ್ತು. ಅಷ್ಟೇ ಅಲ್ಲ ಈ ಅಭಿಯಾನಕ್ಕೆ ವ್ಯಾಪಕ ಪ್ರಚಾರ ನೀಡುವಂತೆ ಎಲ್ಲಾ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್.ಬಿ.ಐ ಸೂಚನೆ ಕೂಡ ನೀಡಿತ್ತು.

ಮೋದಿ ಸರ್ಕಾರ ಪಿಂಚಣಿದಾರರಿಗೆಂದೇ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಈಸ್ ಆಫ್ ಡೂಯಿಂಗ್ ಬಿಜ್) ಮಾದರಿಯಲ್ಲಿ ಈಸ್ ಆಫ್ ಲಿವಿಂಗ್ ಸರ್ಟಿಫಿಕೆಟ್ ಅಭಿಯಾನ ಪ್ರಾರಂಭಿಸಿದೆ. ಪಿಂಚಣಿದಾರರಿಗೆ ಅತಿ ಹೆಚ್ಚು ಕ್ಲಿಷ್ಟಕರವಾಗಿರುವ ಪ್ರಕ್ರಿಯೆ ಎಂದರೆ ಅದು ಲೈಫ್ ಸರ್ಟಿಫಿಕೆಟ್ ಸಲ್ಲಿಸುವ ಪ್ರಕ್ರಿಯೆ. ಇದೀಗ ಸರ್ಕಾರ ಪ್ರಾರಂಭಿಸಿರುವ ಈ ಡೋರ್ ಸ್ಟೆಪ್ ಡಿಲೆವರಿ ಪ್ರಕ್ರಿಯೆಯಿಂದ ಪಿಂಚಣಿದಾರರು ತಮ್ಮ ಮನೆಯಲ್ಲಿಯೇ ಕುಳಿತು ಈ ಸರ್ಟಿಫಿಕೆಟ್ ಗಳನ್ನು ಪ್ರೋಸೆಸ್ ಮಾಡಬಹುದಾಗಿದೆ.

ಪಿಂಚಣಿದಾರರು ತಮ್ಮ ಜೀವ ಪ್ರಮಾಣಪತ್ರವನ್ನು ಸಲ್ಲಿಸಲು ಬ್ಯಾಂಕಿಗೆ ಬರುತ್ತಾರೆ. ಆದರೆ ,ಬ್ಯಾಂಕುಗಳು ಅವರು ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಪಿಂಚಣಿ ಕಚೇರಿಗೆ ರವಾನಿಸುವುದಿಲ್ಲ ಎಂದು ಸರ್ಕಾರಕ್ಕೆ ನಿರಂತರ ದೂರುಗಳು ಬರುತ್ತಿದ್ದವು. ಇದರಿಂದ ಪಿಂಚಣಿದಾರರ ಪಿಂಚಣಿ ಸ್ಥಗಿತಗೋಳ್ಳುತ್ತಿತ್ತು ಮತ್ತು ಅವರು ಪಿಂಚಣಿ ಕಚೇರಿಗೆ ಅಲೆದಾಡುವ ಪ್ರಸಂಗ ಬಂದೊದಗುತ್ತಿತ್ತು. ಇಂತಹ ಲಕ್ಷಾಂತರ ಪಿಂಚಣಿದಾರರು ಇನ್ನೂ ಪಿಂಚಣಿ ಕಚೇರಿಗೆ ದಿನನಿತ್ಯ ಭೇಟಿ ನೀಡುತ್ತಲೇ ಇದ್ದಾರೆ. ಅಷ್ಟೇ ಅಲ್ಲ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯಗಳೂ ಕೂಡ ಕಾಲಕಾಲಕ್ಕೆ ಈ ಕುರಿತು ಸುತ್ತೋಲೆಗಳನ್ನು ಹೊರಡಿಸಿ ಬ್ಯಾಂಕುಗಳು ಮತ್ತು ಪಿಂಚಣಿ ಇಲಾಖೆಗೆ ಎಚ್ಚರಿಕೆ ರವಾನಿಸುತ್ತದೆ ಇದೆ. ಆದರೆ ಇದೀಗ ಮನೆಯಿಂದ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಪ್ರಕ್ರಿಯೆಯು ಪಿಂಚಣಿದಾರರ ಈ ಸಮಸ್ಯೆಗೆ ಅಂತ್ಯಹಾಡಲಿದ್ದು, ಪಿಂಚಣಿದಾರರು ಸುಲಭವಾಗಿ ನಿರಂತರ ಪಿಂಚಣಿ ಪಡೆಯಬಹುದಾಗಿದೆ.

ಇದಕ್ಕೆ ಸಂಬಂಧಿಸದಂತೆ ಕೇಂದ್ರ ಸರ್ಕಾರ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಗೆ ಆದೇಶ ಜಾರಿಗೊಳಿಸಿದ್ದು, ಅದರ ಒಂದು ಕಾಪಿ ನಮ್ಮ ಸಹಯೋಗಿ ವೆಬ್ ಸೈಟ್ ಝೀ ಬಿಸನೆಸ್ ಕೈಸೇರಿದ್ದು, ಬ್ಯಾಂಕ್ ಗಳು ಡೋರ್ ಸ್ಟೆಪ್ ಸೇವೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಪಿಂಚಣಿದಾರರ ಬಳಿಯಿಂದ ಬ್ಯಾಂಕ್ ಗಳು ಗರಿಷ್ಠ ರೂ.60 ಶುಲ್ಕ ಪಡೆಯಬಹುದಾಗಿದೆ.

2019 ರಲ್ಲಿ ಲೈಫ್ ಸರ್ಟಿಫಿಕೇಟ್ ನೀಡಲು ಸಾಧ್ಯವಾಗದ ಪಿಂಚಣಿದಾರರು ಫೋನ್, ಎಸ್‌ಎಂಎಸ್, ಇಮೇಲ್ ಮೂಲಕ ಮನೆಯಿಂದ ಪ್ರಮಾಣಪತ್ರಗಳನ್ನು ಸಲ್ಲಿಸಲು ಪ್ರೇರೇಪಿಸಬೇಕು ಎಂದು ಈ ಆದೇಶದಲ್ಲಿ ಹೇಳಲಾಗಿದೆ.

ಈಸ್ ಆಫ್ ಲಿವಿಂಗ್ ಅಡಿಯಲ್ಲಿ, ಬ್ಯಾಂಕುಗಳಿಗೆ ಪ್ರತಿ ವರ್ಷ ಡಿಸೆಂಬರ್ 1 ರಂದು ನವೆಂಬರ್ 30 ರವರೆಗೆ ಜೀವನ ಪ್ರಮಾಣಪತ್ರ ನೀಡಲು ಸಾಧ್ಯವಾಗದ ಪಿಂಚಣಿದಾರರ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಬಳಿಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಮರೆತ ಅಥವಾ ಸಲ್ಲಿಸದ ಪಿಂಚಣಿದಾರರಿಗೆ SMS / ಇಮೇಲ್ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಬೇಕು ಎಂದು ಹೇಳಲಾಗಿದೆ. ತಮ್ಮ ಉದ್ಯೋಗಿಯನ್ನು ಪಿಂಚಣಿದಾರರ ಮನೆಗೆ ಕಳುಹಿಸುವ ಮೂಲಕ ಸಹ ಬ್ಯಾಂಕುಗಳು ಈ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.

Trending News