ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಹೇಳಿದೆ. ಆ ಕ್ಷೇತ್ರಗಳನ್ನು ಮಾಯಾವತಿ-ಅಖಿಲೇಶ್ ಯಾದವ್ ಅವರ ಮೈತ್ರಿಕೂಟಕ್ಕೆ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಈ ಏಳು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುವ ಮೈನ್ಪುರಿ, ಡಿಂಪಲ್ ಯಾದವ್ ರ ಕನೌಜ್ ಕ್ಷೇತ್ರ ಹಾಗೂ ರಾಷ್ಟ್ರೀಯ ಲೋಕದಳ ಅಜಿತ್ ಸಿಂಗ್ ಹಾಗೂ ಜಯಂತ್ ಚೌಧರಿ ಸ್ಪರ್ಧಿಸುವ ಕ್ಷೇತ್ರ, ಮತ್ತು ಮಾಯಾವತಿ ಸ್ಪರ್ಧಿಸುವ ಇನ್ನ್ಯಾವುದೇ ಕ್ಷೇತ್ರವೆಂದು ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಘೋಷಿಸಿದ್ದಾರೆ.
UP Congress chief Raj Babbar: We are leaving 7 seats vacant for SP, BSP and RLD. These include Mainpuri, Kannauj, Firozabad and whatever seats Mayawati ji & RLD's Jayant ji and Ajit Singh contest from. We will also give two seats to Apna Dal - Gonda & Pilibhit. pic.twitter.com/n37SFNa04L
— ANI UP (@ANINewsUP) March 17, 2019
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ ಬಬ್ಬರ್ " ನಾವು ಏಳು ಕ್ಷೇತ್ರಗಳನ್ನು ಎಸ್ಪಿ-ಬಿಎಸ್ಪಿ ಹಾಗೂ ಆರ್ ಎಲ್ ಡಿ ಬಿಟ್ಟುಕೊಟ್ಟಿದ್ದೇವೆ.ಇದರಲ್ಲಿ ಮೈನ್ಪುರಿ,ಕನೌಜ್ ಫಿರೋಜ್ ಬಾದ್ ಮತ್ತು ಮಾಯಾವತಿ ಹಾಗೂ ಆರ್ ಎಲ್ ಡಿ ಜಯಂತಿ ಮತ್ತು ಅಜಿತ್ ಅವರು ಸ್ಪರ್ಧಿಸುವ ಕ್ಷೇತ್ರ. ಉಳಿದ ಎರಡು ಸೀಟುಗಳನ್ನು ಅಪ್ನಾದಳ ಕ್ಕೆ ನೀಡಿದ್ದೇವೆ " ಎಂದು ಘೋಷಿಸಿದರು.
ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ತಲಾ 38-37 ಸೀಟು ಗಳಲ್ಲಿ ಮೈತ್ರಿ ಮೂಲಕ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿಕೊಂಡಿತ್ತು. ಅದರಲ್ಲಿ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಂಡಿತ್ತು. ಇದಾದ ನಂತರ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿತ್ತು.
ಇತ್ತೀಚಿಗಷ್ಟೇ ಅಖಿಲೇಶ್ ಯಾದವ್ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಮಹಾಮೈತ್ರಿ ಭಾಗವೆಂದು ಹೇಳಿಕೆ ನೀಡಿದ್ದರು.