ನವದೆಹಲಿ: ಒಡಿಶಾದ ಧೆಂಕನಲ್ ಜಿಲ್ಲೆಯ ಕಮಲಾಂಗ ಹಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಏಳು ಆನೆಗಳು ಶನಿವಾರದಂದು ಮೃತಪಟ್ಟಿವೆ ಎಂದು ಎಎನ್ಐ ವರದಿ ಮಾಡಿದೆ.
ವಿದ್ಯುತ್ ತಂತಿ ತಗುಲಿ ಆನೆಗಳು ಮೃತಪಟ್ಟ ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿಗೆ ಮಾನವ ಸೃಷ್ಟಿಸಿದ ಕಾರಣಗಳಿಂದಾಗಿ ಈಗ ಪ್ರಾಣಿಗಳ ಸಾವು ಈಗ ಅರಣ್ಯದಲ್ಲಿ ಸಾಮಾನ್ಯ ಎನ್ನುವಂತಾಗಿದೆ.ಇದರಿಂದಾಗಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ನಿರಂತರವಾಗಿ ಮುಂದೆವರೆದಿದೆ.ಈಗ ಇಂತಹ ದುರಂತಗಳಿಗೆ ಎಚ್ಚರಿಕೆ ನೀಡಿರುವ ಪರಿಸರ ಮತ್ತು ಪ್ರಾಣಿ ಹಕ್ಕು ಕಾರ್ಯಕರ್ತರು, ಪ್ರಾಣಿಗಳಿಗೆ ಇರುವ ವಲಯ ಈಗ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಲವಾರು ಕಾಡು ಪ್ರಾಣಿಗಳು ಸಹಿತ ರೈಲ್ವೆ ಮಾರ್ಗಗಳನ್ನು ದಾಟುವಾಗ ಸಾವನ್ನಪ್ಪುತ್ತಿರುವ ಸಂಗತಿ ಹೆಚ್ಚಾಗಿದೆ.