ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 68,020 ಹೊಸ ಕೊರೊನಾ ಪ್ರಕರಣಗಳು ದಾಖಲು

 ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 68,020 ಹೊಸ ಪ್ರಕರಣಗಳು ದಾಖಲಾಗುವ ಮೂಲಕ  ಕೋವಿಡ್ -19 ಪ್ರಕರಣಗಳ ಸಂಖ್ಯೆ ಸೋಮವಾರ (ಮಾರ್ಚ್ 29) 12,039,644 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

Last Updated : Mar 29, 2021, 11:39 AM IST
  • ಸೋಮವಾರ ದೇಶದಲ್ಲಿ 291 ಹೊಸ ಸಾವು ನೋವುಗಳನ್ನು ದಾಖಲಿಸುವ ಮೂಲಕ, ಒಟ್ಟು ಸಾವಿನ ಸಂಖ್ಯೆ 161,843 ಕ್ಕೆ ತಲುಪಿದೆ.
  • ಇದಲ್ಲದೆ, ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಇದುವರೆಗೆ 11,355,993 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 68,020 ಹೊಸ ಕೊರೊನಾ ಪ್ರಕರಣಗಳು ದಾಖಲು title=
file photo

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 68,020 ಹೊಸ ಪ್ರಕರಣಗಳು ದಾಖಲಾಗುವ ಮೂಲಕ  ಕೋವಿಡ್ -19 ಪ್ರಕರಣಗಳ ಸಂಖ್ಯೆ ಸೋಮವಾರ (ಮಾರ್ಚ್ 29) 12,039,644 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಸೋಮವಾರ ದೇಶದಲ್ಲಿ 291 ಹೊಸ ಸಾವುನೋವುಗಳನ್ನು ದಾಖಲಿಸುವ ಮೂಲಕ, ಒಟ್ಟು ಸಾವಿನ ಸಂಖ್ಯೆ 161,843 ಕ್ಕೆ ತಲುಪಿದೆ. ಇದಲ್ಲದೆ, ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಇದುವರೆಗೆ 11,355,993 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Corona Update: ದೇಶದಲ್ಲಿ 15 ಲಕ್ಷಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ, ಒಟ್ಟು 34193 ಸಾವು

ಅತ್ಯಂತ ಆಘಾತಕಾರಿ ಅಂಶವೆಂದರೆ, ಸಕ್ರಿಯ ಪ್ರಕರಣಗಳು ಸೋಮವಾರ ಅರ್ಧ ಮಿಲಿಯನ್ ಗಡಿ ದಾಟಿದೆ, ಕಳೆದ ವಾರದಲ್ಲಿ 178,000 ಹೊಸ ಸಕ್ರಿಯ ಪ್ರಕರಣಗಳು ಸೇರ್ಪಡೆಯಾಗಿವೆ.ಭಾರತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು COVID-19 ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಆರೋಗ್ಯ ಸಚಿವಾಲಯದ ಅಧಿಸೂಚನೆ ತಿಳಿಸುತ್ತದೆ.ಜಾಗತಿಕ COVID-19 ಪ್ರಕರಣಗಳ ಸಂಖ್ಯೆ 127 ಮಿಲಿಯನ್ ಗೆ ತಗುಲಿದೆ. 2.78 ಮಿಲಿಯನ್ ಗೂ ಅಧಿಕ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಇದನ್ನೂ ಓದಿ: ದೇಶಾದ್ಯಂತ 13 ಲಕ್ಷ ಗಡಿ ದಾಟಿದ Corona ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 49 ಸಾವಿರ ಹೊಸ ಪ್ರಕರಣಗಳು

ಸೋಮವಾರ (ಮಾರ್ಚ್ 29) ಬೆಳಿಗ್ಗೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಪ್ರಸ್ತುತ ಜಾಗತಿಕ ಕ್ಯಾಸೆಲೋಡ್ ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 127,092,284 ಮತ್ತು 2,782,944 ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಬಹಿರಂಗಪಡಿಸಿದೆ.ಸಿಎಸ್‌ಎಸ್‌ಇ ಪ್ರಕಾರ, ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ 30,262,037 ಮತ್ತು 549,335 ರಷ್ಟಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News