ನವದೆಹಲಿ: ಜನರ ಮನಸ್ಸಿನಿಂದ ಉನ್ನಾವೋ ಮತ್ತು ಕತುವಾದ ಅತ್ಯಾಚಾರ ಪ್ರಕರಣಗಳು ಮರೆಮಾಚುವ ಮುನ್ನವೇ ಉತ್ತರಪರದೆಶದಲ್ಲಿ ಮತ್ತೊಂದು ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ.
ಹೌದು, ಉತ್ತರ ಪ್ರದೇಶದ ಸಿದ್ದಾರ್ಥ ನಗರದಲ್ಲಿ ಆರು ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ಸಂಭವಿಸಿದೆ. ಆರು ವರ್ಷ ವಯಸ್ಸಿನ ಈ ಬಾಲಕಿಯು ಹುಡುಗಿಯೊಬ್ಬಳು ತನ್ನ ಮನೆಯಿಂದ 'ಬರಾತ್' ಮೆರವಣಿಗೆಯನ್ನು ವೀಕ್ಷಿಸಳು ಬಂದಾಗ ಆಕೆಯ ಮೇಲೆ ಅತ್ಯಾಚಾರ ಗೈಯಲಾಗಿದೆ. ಆರೋಪಿಗಳು ಆ ಬಾಲಕಿಯನ್ನು ದೂರದ ಹತ್ತಿರದ ಪ್ರದೇಶಕ್ಕೆ ಕರೆದು ಅತ್ಯಾಚಾರಗೈದಿದ್ದಾರೆ ಎನ್ನಲಾಗಿದೆ,ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆ ಬಾಲಕಿಯನ್ನು ಹತ್ತಿರದ ದವಾಖಾನೆಗೆ ದಾಖಲಿಸಲಾಗಿದೆ.ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಇತ್ತೀಚಿಗೆ ಇಡೀ ದೇಶವ್ಯಾಪಿ ಹೋರಾಟಕ್ಕೆ ಕಾರಣವಾಗಿದ್ದ ಉನ್ನಾವೋ ಮತ್ತು ಕಟುವಾ ಪ್ರಕರಣಗಳ ನಂತರ ನಡೆದಿದೆ.