ದಾಂತೆವಾಡ: ಛತ್ತೀಸ್ ಘಡ್ ನ ದಾಂತೇವಾಡಾದಲ್ಲಿ ಪೊಲೀಸ್ ವಾಹನವು ನಕ್ಸಲರ ದಾಳಿಯಿಂದ ಸ್ಫೋಟಗೊಂಡು ಆರು ಮಂದಿ ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಅದರಲ್ಲಿ ಐದು ಜನರು ಸ್ಥಳದಲ್ಲೇ ಮೃತಪಟ್ಟರೆ,ಇನ್ನೊಬ್ಬರು ಚಿಕಿತ್ಸೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
Chhattisgarh: 3 jawans of Chhattisgarh Armed Force & 2 jawans of District Force killed and 2 jawans injured in an IED blast on a police vehicle in Dantewada's Cholnar Village. Troops of CRPF rushed to the spot, More details awaited. pic.twitter.com/J6a0JMpknn
— ANI (@ANI) May 20, 2018
ಇನ್ನೊಂದೆಡೆಗೆ ಚಾಲ್ನಾರ್ ಹಳ್ಳಿಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂಧಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡಿಐಜಿ ಪಿ. ಸುಂದರ್ ರಾಜ್ "ಪ್ರಾಥಮಿಕ ತನಿಖೆಯ ಪ್ರಕಾರ ಆರು ಜವಾನರು ಮೃತಪಟ್ಟು ಒಬ್ಬರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಸಹಿತ ಹುಡುಕಾಟದ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಆದರೆ ಎಲ್ಲ ಮಾಹಿತಿಗಳು ತನಿಖೆಯ ನಂತರ ಬಹಿರಂಗ ಪಡಿಸಲಾಗುತ್ತದೆ" ಎಂದು ತಿಳಿಸಿದರು.
ಚಾಲ್ನಾರ್ ಬಳಿ ನಕ್ಸಲರ ದಾಳಿಗೆ ಜೀಪ್ ಸ್ಫೋಟಗೊಂಡ ನಂತರ ಸ್ಥಳಕ್ಕೆ ಆಗಮಿಸಿದ ಸಿಆರ್ಪಿಎಫ್ ಪಡೆ ಪರಿಶೀಲಿಸಿತು. ಇದೇ ಪ್ರದೇಶದಲ್ಲಿ ಸುಮಾರು ಏಳು ಭದ್ರತಾ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದರು ಎಂದು ಹೇಳಲಾಗಿದೆ.ಈ ಬಾರಿಯ ಐಇಡಿ ಬಾಂಬ್ ಆಧುನಿಕವಾದದ್ದು ಎಂದು ಹೇಳಲಾಗಿದೆ.
ಈ ಸ್ಪೋಟವು ಇನ್ನು ಎರಡು ದಿನಗಳಲ್ಲಿ ಈ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳುವ ಮುಂಚೆ ನಡೆದಿರುವುದರಿಂದ ಇನ್ನು ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ.