ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕ ಎನ್ಕೌಂಟರ್ ಘಟನೆಯಲ್ಲಿ ಭದ್ರತಾ ಪಡೆಗಳು ಕನಿಷ್ಠ ಐದು ಭಯೋತ್ಪಾದಕರನ್ನು ಎನ್ಕೌಂಟರ್ ಮಾಡಲಾಗಿದೆ.
ಬಡ್ಗಮ್ ಜಿಲ್ಲೆಯಲ್ಲಿ ನಾಲ್ಕು ಭಯೋತ್ಪಾದಕರನ್ನು ಕೊಂದ ಭದ್ರತಾ ಸಿಬ್ಬಂದಿ, ಬಾರಾಮುಲ್ಲಾದ ಸೊಪೋರ್ನಲ್ಲಿನ ಓರ್ವನನ್ನು ತಟಸ್ಥಗೊಳಿಸಿದ್ದು, ಕಾರ್ಯಾಚರಣೆ ಇನ್ನೂ ಚಾಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಆರ್ಮಿ, ಸಿಆರ್ಪಿಎಫ್ ಮತ್ತು ಬಡ್ಗಮ್ ಪೊಲೀಸರ ಜಂಟಿ ತಂಡಗಳು ಮತ್ತು ಭಯೋತ್ಪಾದಕರ ನಡುವೆ ಬಡ್ಗಮ್ ಇಂಡು ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಕನಿಷ್ಠ 2-3 ಜೈಶ್-ಎ-ಮೊಹಮ್ಮದ್ ಉಗ್ರಗಾಮಿಗಳು ಪಖರ್ಫೊರಾ ಪ್ರದೇಶದ ಫ್ಯುಟಿಲಿಪೊರಾ ಹಳ್ಳಿಯಲ್ಲಿ ಇದ್ದರೆಂದು ಊಹಿಸಲಾಗಿತ್ತು.
ಫಫ್ಲಿಪೊರಾ ಗ್ರಾಮದಲ್ಲಿದ್ದ ಸೈನ್ಯದ ಬೆಂಗಾವಲಿಗರ ಮೇಲೆ ಪಖರ್ಫೊರಾ ಚೌಕ್ನಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿತು. ಈ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
"ಸೈನ್ಯದ ಗುಂಡಿನ ದಾಳಿಯ ನಂತರ ಸೈನ್ಯದ ದಂಡನೆಗೆ ಸೈನ್ಯವು ಆಶ್ರಯಿಸಿದಾಗ ಹದಿನೈದು ವರ್ಷ ವಯಸ್ಸಿನ ಸಿನಾರ್ ಅಹ್ಮದ್ ಗಾಯಗೊಂಡಿದ್ದಾನೆ. ಆತನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ, ಬಾರಾಮುಲ್ಲಾದ ಸೊಪೋರ್ ಪ್ರದೇಶದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಮೃತಪಟ್ಟಿದ್ದು , ಓರ್ವ ಯೋಧ ಗಾಯಗೊಂಡಿದ್ದಾನೆ.
ಭಯೋತ್ಪಾದಕರ ಅಡಗುತಾಣಗಳ ಬಗ್ಗೆ ಖಚಿತ ಮಾಹಿತಿ ಪಡೆದ ರಕ್ಷಣಾ ಪಡೆಗಳು ಸಾಗಿಪೊರಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ. ಈ ನಡುವೆ ಬುಧಗಾಂವ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.