4 ವರ್ಷಗಳ ದಾಖಲೆ ಮುರಿದ ಅಮರನಾಥ ಯಾತ್ರೆ: 24 ದಿನಗಳಲ್ಲಿ 3 ಲಕ್ಷ ಜನರಿಂದ ದರ್ಶನ

ಈ ಸಂಖ್ಯೆ 2015 ರಲ್ಲಿ 59 ದಿನಗಳ ಅಮರನಾಥ ಯಾತ್ರೆಯಲ್ಲಿ ಭೇಟಿ ನೀಡಿದ ಯಾತ್ರಾರ್ಥಿಗಳಿಗಿಂತ ಹೆಚ್ಚಾಗಿದೆ.  

Last Updated : Jul 25, 2019, 11:34 AM IST
4 ವರ್ಷಗಳ ದಾಖಲೆ ಮುರಿದ ಅಮರನಾಥ ಯಾತ್ರೆ: 24 ದಿನಗಳಲ್ಲಿ 3 ಲಕ್ಷ ಜನರಿಂದ ದರ್ಶನ title=

ಜಮ್ಮು: ಈ ವರ್ಷ ಅಮರನಾಥಕ್ಕೆ ಪ್ರಯಾಣಿಸಿರುವ ಯಾತ್ರಾರ್ಥಿಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳ ದಾಖಲೆಯನ್ನು ಮುರಿದಿದೆ. ಕೇವಲ 24 ದಿನಗಳಲ್ಲಿ ಈ ಬಾರಿ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥಕ್ಕೆ ಪ್ರಯಾಣಿಸಿದ್ದಾರೆ. ಕಳೆದ 24 ದಿನಗಳಲ್ಲಿ 3,01,818 ಯಾತ್ರಿಗಳು ಪವಿತ್ರ ಗುಹೆಗೆ ತೆರಳಿ ಲಿಂಗವನ್ನು ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2015 ರಲ್ಲಿ 59 ದಿನಗಳ ಅಮರನಾಥ ಯಾತ್ರೆಯಲ್ಲಿ ಭೇಟಿ ನೀಡಿದ ಯಾತ್ರಾರ್ಥಿಗಳಿಗಿಂತ ಈ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನಲ್ಲಿರುವ ಭಗವತಿ ನಗರ ಪ್ರಯಾಣಿಕರ ನಿವಾಸದಿಂದ 2,416 ಪ್ರಯಾಣಿಕರ ಗುಂಪು ಗುರುವಾರ ಭದ್ರತೆ ಸೇರಿದಂತೆ ಎರಡು ಬೆಂಗಾವಲುಗಳೊಂದಿಗೆ ಅಮರನಾಥನ ದರ್ಶನಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು, ಅವರಲ್ಲಿ 893 ಮಂದಿ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದರೆ, 1,523 ಪ್ರಯಾಣಿಕರು ಪಹಲ್ಗಮ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದಾರೆ. ಭಕ್ತರ ಪ್ರಕಾರ, ಅಮರನಾಥ ಗುಹೆಯಲ್ಲಿ, ಹಿಮದ ವಿಶಾಲವಾದ ರಚನೆಯು ಶಿವನ ಪೌರಾಣಿಕ ಶಕ್ತಿಗಳ ಸಂಕೇತವಾಗಿದೆ.

ಎಸ್‌ಎಎಸ್‌ಬಿ ಅಧಿಕಾರಿಗಳ ಪ್ರಕಾರ, ಯಾತ್ರೆಯಲ್ಲಿ 26 ಯಾತ್ರಿಕರು ಸಾವನ್ನಪ್ಪಿದ್ದಾರೆ. ಇದಲ್ಲದೆ ಇಬ್ಬರು ಸ್ವಯಂಸೇವಕರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗಳು ಸಹ ಸಾವನ್ನಪ್ಪಿದ್ದಾರೆ. ಅದರಲ್ಲಿ 22 ಯಾತ್ರಿಕರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ, ಇಬ್ಬರು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 

ದಕ್ಷಿಣ  ಕಾಶ್ಮೀರದ ಹಿಮಾಲಯ ಪರ್ವತ ಸ್ತೋಮದಲ್ಲಿರುವ 3880 ಮೀಟರ್ ಎತ್ತರದ ಗುಹಾಂತರ ದೇವಾಲಯದಲ್ಲಿ ಹಿಮಲಿಂಗ ದರ್ಶನ ಪಡೆಯಲು ಈ ವರ್ಷದ ಜುಲೈ 17 ರಂದು ಪ್ರಾರಂಭವಾದ 45 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 15 ರಂದು ಶ್ರವಣ ಪೂರ್ಣಿಮಾದಂದು ಮುಕ್ತಾಯಗೊಳ್ಳಲಿದೆ.

Trending News