ನವದೆಹಲಿ: ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ (Ahemedabad bomb blast case) 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯವು ಇಂದು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಇದನ್ನೂ ಓದಿ: ರಾಜ್ಯದ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಜಾರಿಗೊಳಿಸಿದ ಬೊಮ್ಮಾಯಿ ಸರ್ಕಾರ
ಅಹಮದಾಬಾದ್ನಲ್ಲಿ 2008ರ ಸರಣಿ ಬಾಂಬ್ ಸ್ಫೋಟದ (Ahmedabad bomb blast) ತ್ವರಿತ ವಿಚಾರಣೆಗಾಗಿ ರಚಿಸಲಾದ ವಿಶೇಷ ನ್ಯಾಯಾಲಯವು ಶುಕ್ರವಾರ (ಫೆಬ್ರವರಿ 18, 2022) ಯುಎಪಿಎ ಮತ್ತು ಐಪಿಸಿ 302 ರ ನಿಬಂಧನೆಗಳ ಅಡಿಯಲ್ಲಿ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ (sentenced to death) ಶಿಕ್ಷೆ ವಿಧಿಸಿದೆ. ಇತರರಿಗೆ ಮರಣದ ತನಕ ಜೀವಾವಧಿ ಶಿಕ್ಷೆ (life imprisonment) ವಿಧಿಸಿ ಆದೇಶಿಸಿದೆ.
#UPDATE | 2008 Ahmedabad serial bomb blast case: 11 convicts have been sentenced to life imprisonment.
— ANI (@ANI) February 18, 2022
ಇದಕ್ಕೂ ಮೊದಲು ಫೆಬ್ರವರಿ 8 ರಂದು, 56 ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು 200 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಸರಣಿ ಸ್ಫೋಟ (bomb blast) ಪ್ರಕರಣದಲ್ಲಿ 49 ಜನರನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು.
ಇದನ್ನೂ ಓದಿ: ಸಿಎಂ ಚನ್ನಿ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಪ್ರಧಾನಿ ಮೋದಿ!
ಜುಲೈ 26, 2008 ರಂದು ಅಹಮದಾಬಾದ್ನಲ್ಲಿ (Ahmedabad) ಹಲವಾರು ಸ್ಥಳಗಳಲ್ಲಿ 22 ಬಾಂಬ್ಗಳು ಸ್ಫೋಟಗೊಂಡವು. ಸುಮಾರು 13 ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ, ಫೆಬ್ರವರಿ 8 ರಂದು ವಿಶೇಷ ನ್ಯಾಯಾಲಯವು 49 ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಇತರ 28 ಜನರನ್ನು ಖುಲಾಸೆಗೊಳಿಸಿತು. ಈ ಪ್ರಕರಣವನ್ನು ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಕ್ರಿಮಿನಲ್ ವಿಚಾರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.