ನೋಯ್ಡಾ: ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಲಂಚ ಸ್ವೀಕಾರ ಮತ್ತು ಸುಲಿಗೆ ಆರೋಪದಲ್ಲಿ ಮೂವರು ಪತ್ರಕರ್ತರು ಮತ್ತು ಪೊಲೀಸ್ ಇನ್ಸ್ಪೆಕ್ಟರ್ನನ್ನು ಬಂಧಿಸಿದ್ದಾರೆ. ಎಫ್ಐಆರ್ ನಲ್ಲಿ ದಾಖಲಿಸಲಾಗಿದ್ದ ಕಾಲ್ ಸೆಂಟರ್ ಮಾಲೀಕನ ಹೆಸರನ್ನು ತೆಗೆಯಲು ಎಲ್ಲರೂ ನವೆಂಬರ್ 2018 ರಲ್ಲಿ ಕಾಲ್ ಸೆಂಟರ್ ಮಾಲೀಕನಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಸೆಕ್ಟರ್ 20 ಪೋಲಿಸ್ ಸ್ಟೇಶನ್ ಇನ್-ಚಾರ್ಜ್ ಮನೋಜ್ ಕುಮಾರ್ ಪಂತ್ ಮತ್ತು ಪತ್ರಕರ್ತರಾದ ಸುಶೀಲ್ ಪಂಡಿತ್, ಉದಿತ್ ಗೋಯಲ್ ಮತ್ತು ರಾಮನ್ ಠಾಕೂರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ ಬುಧವಾರ ತಿಳಿಸಿದ್ದಾರೆ. ಎಲ್ಲರನ್ನೂ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
Vaibhav Krishna SSP: One Mercedes(C200) car has also been seized from one of the journalists. This car prima facie seems to be related to some criminal activity. One Pistol .32 bore has also been recovered from one other journalist, total of Rs 8 lakhs have been recovered. pic.twitter.com/7eTcpNLX4y
— ANI UP (@ANINewsUP) January 30, 2019
ನಾಲ್ವರೂ ಎಂಟು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಮಾಹಿತಿ ನೀಡಿದ್ದಾರೆ. ನವೆಂಬರ್ 2018 ರಲ್ಲಿ ಎಫ್ಐಆರ್ ನಲ್ಲಿ ದಾಖಲಿಸಲಾಗಿದ್ದ ಕಾಲ್ ಸೆಂಟರ್ ಮಾಲೀಕನ ಹೆಸರನ್ನು ತೆಗೆಯಲು ಎಲ್ಲರೂ ಕಾಲ್ ಸೆಂಟರ್ ಮಾಲೀಕನಿಂದ ಹಣ ಪಡೆಯುತ್ತಿದ್ದರು ಎಂದು ಕೃಷ್ಣ ಹೇಳಿದರು.
ಫೈಲ್ ಫೋಟೋ
'ಕ್ರಿಮಿನಲ್ ಚಟುವಟಿಕೆ'ಗೆ ಸಂಬಂಧಿಸಿದಂತೆ ಪತ್ರಕರ್ತರಲ್ಲಿ ಒಬ್ಬರಿಂದ ಮರ್ಸಿಡಿಸ್ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಪತ್ರಕರ್ತನ ಬಳಿ ಅವರಿಗೆ .32 ಬೋರ್ ಪಿಸ್ತೂಲ್ ಸಿಕ್ಕಿದೆ ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್ ಮುಖ್ಯಸ್ಥ, "ಎಂಟು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ನಾಲ್ಕು ಜನರನ್ನು ಬಂಧಿಸಲಾಗಿದೆ" ಎಂದು ಹೇಳಿದರು. ಜೊತೆಗೆ, ಈ ಪ್ರಕರಣದ ಆರೋಪಕ್ಕೆ ಒಳಗಾಗಿರು ಸೆಕ್ಟರ್ 20 ಪೊಲೀಸ್ ಠಾಣೆಯ ಹೆಚ್ಚುವರಿ ಪೋಲೀಸ್ ಅಧಿಕಾರಿ ಜಯವೀರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.