ನವದೆಹಲಿ: 2007-08ರಲ್ಲಿ 2 ಜಿ ಸ್ಪೆಕ್ಟ್ರಮ್ ಲೈಸೆನ್ಸ್ ಹಂಚಿಕೆಯಲ್ಲಿ ನಡೆದಿದ್ದ ರೂ. 1.76 ಲಕ್ಷ ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು ಕನಿಮೋಳಿ ಸೇರಿದಂತೆ ಎಲ್ಲಾ 17 ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
#Delhi: #Visuals of A Raja; Scenes outside Patiala House Court, all acquitted. #2GScamVerdict pic.twitter.com/TWW2kCJOPT
— ANI (@ANI) December 21, 2017
ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಓ.ಪಿ. ಸೈನಿ 1.76 ಲಕ್ಷ ಕೋಟಿ ರೂ. 2 ಜಿ ಸ್ಪೆಕ್ಟ್ರಂ ಹಗರಣದ ಕುರಿತಂತೆ ತೀರ್ಪು ನೀಡಿದರು. 2ಜಿ ಹಗರಣದಲ್ಲಿ ಮಾಜಿ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಉಳಿದ ಆರೋಪಿಗಳನ್ನು ದೋಷಿ ಎಂದು ಸಾಬೀತು ಪಡಿಸುವಲ್ಲಿ ಯಾವುದೇ ಪುರಾವೆಗಳಿಲ್ಲದ ಕಾರಣ ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
2ಜಿ ಹಗರಣ ಸಂಬಂಧಿಸಿದ ತೀರ್ಪು ಹೊರಬಂದ ನಂತರ ಪಾಟೀಯಾಲ ಹೌಸ್ ಕೋರ್ಟ್ನ ಮುಂಬಾಗದಲ್ಲಿ ಸಂಭ್ರಮಾಚರಣೆ ಮನೆಮಾಡಿದೆ.
#Delhi: #Visuals of A Raja; Scenes outside Patiala House Court, all acquitted. #2GScamVerdict pic.twitter.com/TWW2kCJOPT
— ANI (@ANI) December 21, 2017
ಕಾನೂನು ರೀತಿಯಲ್ಲಿ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಎಲ್ಲಾ ಆರೋಪಿಗಳನ್ನು ಕೋರ್ಟ್ ದೋಷಮುಕ್ತರನ್ನಾಗಿ ಮಾಡಿದೆ.
The Court said that the prosecution has miserably failed to prove any of its charge. Thus all accused are acquitted: Vijay Aggarwal, Lawyer of Swan Telecom promoters Shahid Usman Balwa, Vinod Goenka and others #2GScamVerdict pic.twitter.com/MgWCLKApNE
— ANI (@ANI) December 21, 2017
ಈ ಪ್ರಕರಣದ ಸಮಯದಲ್ಲಿ ತನಗೆ ಸಹಕರಿಸಿದ ಎಲ್ಲರಿಗೂ ಕನಿಮೋಳಿ ಧನ್ಯವಾದಗಳನ್ನು ತಿಳಿಸಿದ್ದಾರೆ.
I would love to thank everyone who stood by me: Kanimozhi, Rajya Sabha MP #2GScamVerdict pic.twitter.com/3plOl0RlLE
— ANI (@ANI) December 21, 2017
ವಿಜಯ ಈಗ ಪ್ರಾರಂಭವಾಗುತ್ತದೆ. ಈ ಪ್ರಕರಣವನ್ನು ರಾಜಕೀಯ ಉದ್ದೇಶಗಳೊಂದಿಗೆ ಅನುಸರಿಸಲಾಗಿತ್ತು ಎಂದು ಹಿರಿಯ ಡಿಎಂಕೆ ಮುಖಂಡ ದುರೈ ಮುರುಗನ್ ತಿಳಿಸಿದರು.
Victory begins now. With political motives this case was put in us. Conspiracies were hatched against us but all have been blown away now: Durai Murugan, Senior DMK Leader pic.twitter.com/UfWzwmIO5y
— ANI (@ANI) December 21, 2017
"ವಿನೋದ್ ರೈ ಅವರ ದೊಡ್ಡ ದೋಷಾರೋಪಣೆ ಸಾಧ್ಯವಿಲ್ಲ" ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿಕೆ ನೀಡಿದ್ದಾರೆ.
Allegation of a major scam involving the highest levels of Government was never true, was not correct and that has been established today: P Chidambaram,Congress #2GScamVerdict pic.twitter.com/bfVgL14ES9
— ANI (@ANI) December 21, 2017