ಗುಜರಾತ್: ದಿನೇ ದಿನೇ ಗಗನಕ್ಕೇರುತ್ತಿರುವ ಈರುಳ್ಳಿ ದರ ದೇಶಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿದೆ. ಈರುಳ್ಳಿ(Onion) ಬೆಲೆ ಕೆಜಿಗೆ 120 ರಿಂದ 200 ರೂಪಾಯಿ ತಲುಪಿದ್ದು, ನಿತ್ಯ ಅಡುಗೆಯಲ್ಲಿ ಈರುಳ್ಳಿ ಕಣ್ಮರೆಯಾಗುತ್ತಿದೆ. ಮನೆಯ ಅಡುಗೆಮನೆಯಲ್ಲಿ ಮಾತ್ರವಲ್ಲದೆ ರೆಸ್ಟೋರೆಂಟ್, ಹೋಟೆಲ್‌ಗಳು ಮತ್ತು ಡಾಬಾಗಳಲ್ಲಿ ಕೂಡ ಈರುಳ್ಳಿ ಕಾಣೆಯಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಗುಜರಾತ್ ಮೊಡಾಸಾದಲ್ಲಿ ಅಂಗಡಿಯವರಿಂದ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಮೊಬೈಲ್ ಅಂಗಡಿಯನ್ನು ನಡೆಸುತ್ತಿರುವ ಅಂಗಡಿಯವನು ತನ್ನ ಅಂಗಡಿಯಿಂದ ಹೊಸ ಮೊಬೈಲ್ ಖರೀದಿಸುವವನಿಗೆ ಮೊಬೈಲ್‌ನೊಂದಿಗೆ ಎರಡು ಕೆಜಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುವುದು ಎಂಬ ಯೋಜನೆಯನ್ನು ಆರಂಭಿಸಿದ್ದಾರೆ. ಅಂಗಡಿಯವರಿಂದ ಇಂತಹ ಯೋಜನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ, ಈ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿದೆ.
ಸ್ವಲ್ಪ ಸಮಯದ ನಂತರ ಮೊಬೈಲ್ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದವರು, ಅಂಗಡಿಯವರ 'ಈರುಳ್ಳಿ ಫ್ರೀ' ಯೋಜನೆಯ ನಂತರ ಮನಸ್ಸು ಬದಲಾಯಿಸುತ್ತಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಮೊಬೈಲ್ ಮಾರಾಟ ಕಡಿಮೆಯಾಗಿತ್ತು. ಈ ಯೋಜನೆಯ ತಂದ ಬಳಿಕ ಒಂದೇ ದಿನದಲ್ಲಿ 7 ಮೊಬೈಲ್‌ಗಳನ್ನು ಮಾರಾಟ ಮಾಡಿದ್ದೇನೆ ಎಂದು ಅಂಗಡಿಯವರು ಹೇಳಿದ್ದಾರೆ.
ಅಂಗಡಿಯವರು ಹೇಳುವಂತೆ ಮನೆಯಲ್ಲಿ ಈರುಳ್ಳಿಯನ್ನು ಸಲಾಡ್‌ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಆದರೀಗ ಈರುಳ್ಳಿ ದರ ಏರಿಕೆ ಎಷ್ಟರ ಮಟ್ಟಿಗಿದೆ ಎಂದರೆ ಸೇಬು, ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಬೇಕೆಂಬುದು ಗ್ರಾಹಕರ ಬೇಡಿಕೆ. ಅದಕ್ಕಾಗಿಯೇ ನಾವು ಈ ಪ್ರಸ್ತಾಪವನ್ನು ನೀಡಿದ್ದೇವೆ ಮತ್ತು ಅದರ ನಂತರ ಗ್ರಾಹಕರ ಒಳಹರಿವು ಹೆಚ್ಚಾಯಿತು. ಈ ಯೋಜನೆಯ ನಂತರ, ಗ್ರಾಹಕರ ಕುಟುಂಬವೂ ತುಂಬಾ ಸಂತೋಷವಾಗಿದೆ ಮತ್ತು ಈ ಯೋಜನೆಯ ನಂತರ 7 ಮೊಬೈಲ್‌ಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಂದೇ ದಿನದಲ್ಲಿ ಮಾರಾಟ ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು.
ಅದೇ ವೇಳೆ ಗ್ರಾಹಕರೂ ಕೂಡ ಈ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಹಕರೊಬ್ಬರು ಮಾತನಾಡುತ್ತಾ ನಾನು ಸ್ವಲ್ಪ ಸಮಯದ ಬಳಿಕ ಮೊಬೈಲ್ ಕೊಳ್ಳಲು ಯೋಚಿಸುತ್ತಿದ್ದೆ. ಆದರೆ, ಈ ಯೋಜನೆಯ ಬಗ್ಗೆ ತಿಳಿದ ಕೂಡಲೇ ಮೊದಲಿಗೆ ಆಶ್ಚರ್ಯವಾಯಿತು. ನಂತರ ಬದು ಮೊಬೈಲ್ ಖರೀದಿಸಿದೆ. ಮೊಬೈಲ್‌ನೊಂದಿಗೆ 2 ಕೆಜಿ ಈರುಳ್ಳಿಯನ್ನೂ ಪಡೆದೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆಯಾಗಿದೆ ಎಂದು ತಿಳಿಸಿದರು.