DRDO ಅಭಿವೃದ್ಧಿಪಡಿಸಿರುವ 2 DG Drug ಔಷಧ ಪ್ರತಿ ಪ್ಯಾಕೆಟ್​ಗೆ ₹ 990! 

2 ಡಿಜಿ ಔಷಧವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೋವಿಡ್ ಸಮರದಲ್ಲಿ ಈ ಔಷಧ ಗೇಮ್​ ಚೇಂಜರ್ ಆಗಲಿದೆ

Last Updated : May 28, 2021, 03:40 PM IST
  • DRDO ಅಭಿವೃದ್ದಿಪಡಿಸಿರುವ 2 ಡಿಜಿ ಕೋವಿಡ್ ರೋಗನಿರೋಧಕ ಔಷಧ
  • 2 ಡಿಜಿ ಕೋವಿಡ್ ರೋಗನಿರೋಧಕ ಔಷಧ ಪ್ರತಿ ಪ್ಯಾಕೆಟ್​ಗೆ 990 ರೂ.
  • ರಾಜ್ಯ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧ ರಿಯಾಯಿತಿ ದರದಲ್ಲಿ ಲಭ್ಯ
DRDO ಅಭಿವೃದ್ಧಿಪಡಿಸಿರುವ 2 DG Drug ಔಷಧ ಪ್ರತಿ ಪ್ಯಾಕೆಟ್​ಗೆ ₹ 990!  title=

ನವದೆಹಲಿ : DRDO ಅಭಿವೃದ್ದಿಪಡಿಸಿರುವ 2 ಡಿಜಿ ಕೋವಿಡ್ ರೋಗನಿರೋಧಕ ಔಷಧ ಪ್ರತಿ ಪ್ಯಾಕೆಟ್​ಗೆ 990 ರೂ. ಡಾ ರೆಡ್ಡಿಸ್ ಲ್ಯಾಬ್ (Dr Reddy's Laboratories-DRL) ನಿಗದಿ ಪಡಿಸಿದೆ. 

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ನಿರೋಧಕ 2 ಡಿಜಿ(2-DG) 10 ಸಾವಿರ ಸ್ಯಾಚೆಟ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಹೇಳಿದ್ದರು.

ಇದನ್ನೂ ಓದಿ : Delhi Government : ಆಕ್ಸಿಜನ್ ಕೊರತೆಯಿಂದ ಮೃತ ಕೊರೋನಾ ರೋಗಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ!

2 ಡಿಜಿ ಔಷಧವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದೆ. ಕೋವಿಡ್ ಸಮರದಲ್ಲಿ ಈ ಔಷಧ ಗೇಮ್​ ಚೇಂಜರ್ ಆಗಲಿದೆ ಎಂದು ಕಳೆದ ವಾರ ಕರ್ನಾಟಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದ್ದರು. 

ಇದನ್ನೂ ಓದಿ : PM Kisan: ಜೂನ್ 30ರೊಳಗೆ ಈ ಸ್ಕೀಮ್ ಗೆ ಅಪ್ಪ್ಲೈ ಮಾಡಿ ಡಬಲ್ ಲಾಭ ಪಡೆಯಿರಿ

2-DG (2-Deoxy-D-glucose) ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಲ್ಯಾಬ್) ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS), ಹೈದರಾಬಾದ್‌ನ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ (DRL) ಸಹಯೋಗದೊಂದಿಗೆ DRDO ಅಭಿವೃದ್ಧಿ ಪಡಿಸಿದೆ. ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳು ಈ ಅಣುವು ಆಸ್ಪತ್ರೆಗೆ ದಾಖಲಾದ ರೋಗಿಗಳ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News