1992 Babri mosque demolition case: ಎಲ್.ಕೆ.ಅಡ್ವಾಣಿಗೆ 100 ಪ್ರಶ್ನೆ ಕೇಳಿದ ನ್ಯಾಯಾಧೀಶರು...!

ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರು 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಿದ್ದಾರೆ.ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಗಳ ಪೈಕಿ 92 ವರ್ಷದ ಅಡ್ವಾಣಿ ವಿಡಿಯೋ ಲಿಂಕ್ ಮೂಲಕ ಲಖನೌ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Last Updated : Jul 24, 2020, 09:03 PM IST
1992 Babri mosque demolition case: ಎಲ್.ಕೆ.ಅಡ್ವಾಣಿಗೆ 100 ಪ್ರಶ್ನೆ ಕೇಳಿದ ನ್ಯಾಯಾಧೀಶರು...! title=

ನವದೆಹಲಿ: ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರು 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಿದ್ದಾರೆ.ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಗಳ ಪೈಕಿ 92 ವರ್ಷದ ಅಡ್ವಾಣಿ ವಿಡಿಯೋ ಲಿಂಕ್ ಮೂಲಕ ಲಖನೌ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ: "ಬಿಜೆಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವವಿದೆ" ಚುನಾವಣೆಗೂ ಮುನ್ನ ಅಡ್ವಾಣಿ ಬ್ಲಾಗ್ ಸಂದೇಶ

4.5 ಗಂಟೆಗಳ ಕಾಲ ನಡೆದ ವಿಚಾರಣೆಯ ಸಮಯದಲ್ಲಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3: 30 ರವರೆಗೆ 100 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಅಡ್ವಾಣಿಗೆ ನ್ಯಾಯಾಲಯ ಕೇಳಿದೆ. ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಡ್ವಾಣಿಯನ್ನು ಭೇಟಿಯಾದರು. ಉಭಯ ನಾಯಕರು ಸುಮಾರು 30 ನಿಮಿಷಗಳ ಕಾಲ ಮಾತನಾಡಿದರು.

ಇದನ್ನೂ ಓದಿ: 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಗಡುವು ವಿಸ್ತರಿಸಿದ ಸುಪ್ರೀಂಕೋರ್ಟ್

ನ್ಯಾಯಾಲಯವು ದೈನಂದಿನ ವಿಚಾರಣೆಗಳ ಮೂಲಕ ವಿಚಾರಣೆಯನ್ನು ಪೂರ್ಣಗೊಳಿಸಿ ಆಗಸ್ಟ್ 31 ರೊಳಗೆ ತನ್ನ ತೀರ್ಪನ್ನು ನೀಡಬೇಕಾಗುತ್ತದೆ. ಆಗಸ್ಟ್ 5 ರಂದು ಅಯೋಧ್ಯೆಯ ರಾಮ್ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮವೊಂದಕ್ಕೆ ಕೆಲವೇ ದಿನಗಳ ಮೊದಲು ಬಾಬ್ರಿ ಪ್ರಕರಣದ ವಿಚಾರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಐಪಿಗಳು ಭಾಗವಹಿಸಲಿದ್ದಾರೆ. ಈ ಅಡಿಗಲ್ಲು ಸಮಾರಂಭದ ನಂತರ ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದೆ.ಅಡ್ವಾಣಿ ಮತ್ತು ರಾಮ್ ಮಂದಿರ ಚಳವಳಿಯ ಇತರ ಮುಖಂಡರನ್ನು ಸಹ ಆಹ್ವಾನಿಸಲಾಗುವುದು ಎಂದು ವರದಿಗಳು ಸೂಚಿಸಿವೆ.

16 ನೇ ಶತಮಾನದ ಬಾಬರಿ ಮಸೀದಿಯನ್ನು1992 ರ ಡಿಸೆಂಬರ್ 6 ರಂದು ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದರು, ಇದನ್ನು ಭಗವಾನ್ ರಾಮನ ಜನ್ಮಸ್ಥಳವನ್ನು ಸೂಚಿಸುವ ಪುರಾತನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ನಂಬಿದ್ದರು.ಈ ಪಿತೂರಿ ಆರೋಪ ಹೊತ್ತಿರುವ ಬಿಜೆಪಿ ನಾಯಕರಲ್ಲಿ ಶ್ರೀ ಅಡ್ವಾಣಿ, ಮುರ್ಲಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಸೇರಿದ್ದಾರೆ. 86 ವರ್ಷದ ಶ್ರೀ ಜೋಶಿ ಅವರು ಗುರುವಾರ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಿದ್ದಾರೆ.

 

Trending News