ಬಿಹಾರ ರೈಲು ನಿಲ್ದಾಣದಲ್ಲಿ 16 ತಲೆಬುರುಡೆ, 34 ಅಸ್ಥಿ ಅವಶೇಷಗಳ ಪತ್ತೆ, ಓರ್ವ ಬಂಧನ

ಪೂರ್ವ ಚಂಪಾರಣ್‌ ಜಿಲ್ಲೆಯ ನಿವಾಸಿಯಾಗಿರುವ ಸಂಜಯ್‌ ಪ್ರಸಾದ್‌ (29) ಎಂಬಾತನ ಬಳಿ ಇದ್ದ ಈ ಅಸ್ಥಿ ಅವಶೇಷಗಳನ್ನು ಮೊನ್ನೆ ಸೋಮವಾರ ವಶಪಡಿಸಿಕೊಳ್ಳಲಾಯಿತು. 

Last Updated : Nov 28, 2018, 06:31 PM IST
ಬಿಹಾರ ರೈಲು ನಿಲ್ದಾಣದಲ್ಲಿ 16 ತಲೆಬುರುಡೆ, 34 ಅಸ್ಥಿ ಅವಶೇಷಗಳ ಪತ್ತೆ, ಓರ್ವ ಬಂಧನ title=

ಪಟ್ನಾ: ಬಿಹಾರದ ಛಪ್ರಾದಲ್ಲಿ ರೈಲ್ವೇ ಜಂಕ್ಷನ್ನಿನಲ್ಲಿ ಬೃಹತ್ ಪ್ರಮಾಣದ ಮಾನವ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿರುವ ಪೊಲೀಸರು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಪೂರ್ವ ಚಂಪಾರಣ್‌ ಜಿಲ್ಲೆಯ ನಿವಾಸಿಯಾಗಿರುವ ಸಂಜಯ್‌ ಪ್ರಸಾದ್‌ (29) ಎಂಬಾತನ ಬಳಿ ಇದ್ದ ಈ ಅಸ್ಥಿ ಅವಶೇಷಗಳನ್ನು ಮೊನ್ನೆ ಸೋಮವಾರ ವಶಪಡಿಸಿಕೊಳ್ಳಲಾಯಿತು. ಛಾಪ್ರಾ ಜಂಕ್ಷನ್‌ ನಲ್ಲಿನ ಜಿಆರ್‌ಪಿ ತಂಡದವರು ಆರೋಪಿಯನ್ನು ಸೆರೆ ಹಿಡಿದರು ಎಂದು ಡಿವೈಎಸ್ಪಿ (ರೈಲ್ವೇ) ತನ್ವೀರ್‌ ಅಹ್ಮದ್‌ ತಿಳಿಸಿದ್ದಾರೆ.

ಬರೋಬ್ಬರಿ 16 ಮಾನವ ತಲೆ ಬುರುಡೆಗಳು ಮತ್ತು 34 ಇತರ ಅಸ್ಥಿ ಅವಶೇಷಗಳನ್ನು ಬಂಧಿತ ಆರೋಪಿ ಪ್ರಸಾದ್‌ ನಿಂದ ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಆತನ ಬಳಿ ಇದ್ದ ಭೂತಾನೀ ಕರೆನ್ಸಿ, ವಿವಿಧ ದೇಶಗಳ ಎಟಿಎಂ ಕಾರ್ಡುಗಳು ಮತ್ತು ಒಂದು ವಿದೇಶಿ ಸಿಮ್‌ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಅಹ್ಮದ್‌ ಹೇಳಿದ್ದಾರೆ. 

"ನಾನು ಈ ಅಸ್ಥಿ ಅವಶೇಷಗಳನ್ನು ನೆರೆಯ ಉತ್ತರ ಪ್ರದೇಶದ ಬಲ್ಲಿಯಾದಿಂದ ಪಡೆದಿದ್ದೇನೆ; ನೆರೆಯ ಪಶ್ಚಿಮ ಬಂಗಾಲದ ಜಲಪಾಯ್‌ಗಾರಿಯಾಗಿ ನಾನು ಭೂತಾನಿಗೆ ಹೋಗುತ್ತಿದ್ದೇನೆ' ಎಂದು ಅಸ್ಥಿಗಳ ಸಾಗಣೆ ಬಗ್ಗೆ ವಿಚಾರಣೆ ನಡೆಸಿದಾಗ ಬಂಧಿತ ಪ್ರಸಾದ್‌ ತಿಳಿಸಿದ್ದಾನೆ ಎನ್ನಲಾಗಿದೆ. 

Trending News