Dr. B.R Ambedkar: ವಿಶ್ವ ನಾಯಕ ಡಾ. ಬಿ. ಆರ್‌ ಅಂಬೇಡ್ಕರ್ ರವರ  132ನೇ ಜಯಂತಿ : ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ.. 

Dr. B R Ambedkar Biography: ಡಾ. ಬಿ. ಆರ್‌ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಶ್ರಮಿಸದೇ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು. ಅವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಕಾರಣ ಏನೆಂಬುವುದು ಇಲ್ಲಿದೆ ನೋಡಿ ವಿವರ.. 

Written by - Zee Kannada News Desk | Last Updated : Apr 14, 2023, 01:31 PM IST
  • ಪ್ರತಿ ಜಾತಿ ಜನಾಂಗದ ಏಳಿಗೆಗಾಗಿ ಡಾ. ಬಿ. ಆರ್‌ ಅಂಬೇಡ್ಕರ್ ಕೊಡುಗೆ ಅಪಾರ
  • ಪಿಎಚ್‌ಡಿ ಗಳಿಸಿದ ಮೊದಲ ಭಾರತೀಯ ಬಾಬಾ ಸಾಹೇಬ್ ಅಂಬೇಡ್ಕರ್
  • ಏಪ್ರಿಲ್ 14, 1891 ರಂದು ಭಾರತದ ಮಧ್ಯಪ್ರದೇಶದ ಮೊವ್‌ನಲ್ಲಿ ಜನಿಸಿದರು
Dr. B.R Ambedkar: ವಿಶ್ವ ನಾಯಕ ಡಾ. ಬಿ. ಆರ್‌ ಅಂಬೇಡ್ಕರ್ ರವರ  132ನೇ ಜಯಂತಿ : ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ..  title=

Dr. B R Ambedkar: ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ಕರೆಯಲ್ಪಡುವ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಭಾರತದ ಮಧ್ಯಪ್ರದೇಶದ ಮೊವ್‌ನಲ್ಲಿ ಜನಿಸಿದರು. ಅವರ ತಂದೆ ರಾಮ್‌ಜಿ ಮಕೋಜಿ ಸಕ್ಪಾಲ್, ಅವರು ಬ್ರಿಟಿಷ್ ಇಂಡಿಯಾ ಸೈನ್ಯದಲ್ಲಿ ಸೇನಾ ಅಧಿಕಾರಿಯಾಗಿದ್ದರು. ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವನ್ನು ಅನುಭವಿಸಬೇಕಾಯಿತು.

ಅಂಬೇಡ್ಕರ್ ವಿದ್ಯಾಭ್ಯಾಸಕ್ಕಾಗಿ  ಎಲ್ಫಿನ್‌ಸ್ಟೋನ್ ಹೈಸ್ಕೂಲ್‌ಗೆ ದಾಖಲಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆ ನಿಂದನೆಗೆ ಒಳಗಾದರು.  ತಾನು ಹಾಗೂ ತನ್ನ ಪರಿವಾರದವರೂ ಅಸ್ಪೃಶ್ಯ  ನಿಂದನೆ ಅನುಭವಿಸಿದ್ದರಿಂದ ತಮ್ಮ ವರ್ಗದ ಜನರಿಗೆ ನ್ಯಾಯ ಕೊಡಿಸುವಲ್ಲಿ ಪಣ ತೊಟ್ಟರು. ಜಾತಿ ನಿಂದನೆಗೆ ಒಳಗಾದರೂ ತನ್ನ ಓದಿನ ಛಲ ಬಿಡಲಿಲ್ಲ. ಇದರ 
ಸಲುವಾಗಿ ಉನ್ನತ ಶಿಕ್ಷಣ ಕಡೆ ಗಮನ ಕೊಟ್ಟರು.  ಅವರು ತಮ್ಮ  ಉನ್ನತ ಶಿಕ್ಷಣಕ್ಕಾಗಿ ವಿದೇಶ ಕಡೆ ಮುಖ ಮಾಡಿದರು.  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ  ಪದವಿಗಾಗಿ  ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು..  

ಇದನ್ನೂ ಓದಿ: MP Kumaraswamy: ಕೈ ತಪ್ಪಿದ್ದ ಟಿಕೆಟ್‌ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !

1915 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.  1916 ರಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೋಡಾ ಸಂಸ್ಥಾನದ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ದಲಿತನಾಗಿದ್ದರಿಂದ ಕೆಲಸ ಸುಲಭವಾಗಿರಲಿಲ್ಲ. ಅವರು ಜನರಿಂದ ಅಪಹಾಸ್ಯಕ್ಕೊಳಗಾದರು ಮತ್ತು ಆಗಾಗ್ಗೆ ನಿರ್ಲಕ್ಷಿಸಲ್ಪಟ್ಟರು. ಅದೇ ಸಮಯದಲ್ಲಿ  ಅವರು 'ಪ್ರಾಚೀನ ಭಾರತೀಯ ವಾಣಿಜ್ಯ'  ಪ್ರಬಂಧವನ್ನು  ಬರೆಯಲು ಆರಂಭಿಸಿದರು. ಹಣಕಾಸು ಸಮಸ್ಯೆ ಹಾಗೂ ಪರಿಹಾರವನ್ನು ಒಳಗೊಂಡ ಪ್ರಬಂಧವಾಗಿತ್ತು. ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ತೊರೆದು ಮತ್ತು ಖಾಸಗಿ ಬೋಧಕ ಮತ್ತು ಲೆಕ್ಕಪರಿಶೋಧಕರಾಗಿ ಕೆಲಸ ಮಾಡಿದರು.

ತಾನು ಶಾಲಾ ದಿನಗಳಲ್ಲಿ  ನೀರು ಕುಡಿಯುವುದರಿಂದ ಕೊಠಡಿ ಒಳಗೆ ಅಸ್ಪೃಶ್ಯತೆ ಹಾಗೂ ದೇವಾಲಯಗಳಲ್ಲಿ ಪ್ರವೇಶವನ್ನು ನಿರಾಕರಿಸಿದ್ದರಿಂದ 1927 ರ ಸಮಯದಲ್ಲಿ  ಅವರು ನಿರಂತರವಾಗಿ ಅಸ್ಪೃಶ್ಯತೆಯ ವಿರುದ್ಧ ಕೆಲಸ ಮಾಡಿದರು. ಅವರು ಅಸ್ಪೃಶ್ಯರ ಹಕ್ಕುಗಳಿಗಾಗಿ ಹೋರಾಡಿದರು. ಬಳಿಕ  ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಇಂಗ್ಲೆಂಡ್‌ಗೆ ಹೋಗಿ  ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದರು. 1927 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ  ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ನೀಡಲಾಯಿತು. ಪಿಎಚ್‌ಡಿ ಗಳಿಸಿದ ಮೊದಲ ಭಾರತೀಯ ಎಂಬ ಹೆಗಳಿಕೆ ಪಾತ್ರರಾದರು. 

ಇದನ್ನೂ ಓದಿ: "ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ"

1935 ರಲ್ಲಿ, ಅವರು "ಸ್ವತಂತ್ರ ಕಾರ್ಮಿಕ ಪಕ್ಷ" ವನ್ನು ಸ್ಥಾಪಿಸಿ , ಪ್ರಾದೇಶಿಕ ಶಾಸಕಾಂಗ ಸಭೆ ಮತ್ತು ಕೇಂದ್ರ ಮಂಡಳಿ ರಾಜ್ಯಗಳಲ್ಲಿ ಖಿನ್ನತೆಗೆ ಒಳಗಾದ ವರ್ಗಕ್ಕೆ ಮೀಸಲಾತಿಯನ್ನು ಅನುಮತಿಸುವ "ಪೂನಾ ಒಪ್ಪಂದ" ರಚನೆ ಮಾಡಿದರು. 'ಜಾತಿ ವಿನಾಶ'ದಂತಹ ಪುಸ್ತಕಗಳನ್ನು ಪ್ರಕಟಿಸಿದರು ಮತ್ತು ಮರುವರ್ಷವೇ ಅವರು 'ಶೂದ್ರರು ಯಾರು?' ಅದರಲ್ಲಿ ಅಸ್ಪೃಶ್ಯರು ಹೇಗೆ ರೂಪುಗೊಂಡರು ಎಂಬುದನ್ನು ವಿವರಿಸಿದರು.   ಬಳಿಕ ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಲ್ಲಿ, ಅವರು ರಾಜಕೀಯ ವಿಜ್ಞಾನ ಪ್ರಾಧ್ಯಾಪಕರಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚನೆಯಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು. ನಂತರ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದರು.  1955 ರಲ್ಲಿ, ಉತ್ತಮ ಸರ್ಕಾರಕ್ಕಾಗಿ ಮಧ್ಯಪ್ರದೇಶ ಮತ್ತು ಬಿಹಾರ ವಿಭಜನೆಯನ್ನು ಕುರಿತು  ಪ್ರಸ್ತಾಪಿಸಿದರು. 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚನೆಯಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು. 1955 ರಲ್ಲಿ, ಉತ್ತಮ ಸರ್ಕಾರಕ್ಕಾಗಿ ಮಧ್ಯಪ್ರದೇಶ ಮತ್ತು ಬಿಹಾರ ವಿಭಜನೆಯನ್ನು ಕುರಿತು  ಪ್ರಸ್ತಾಪಿಸಿದರು. ಜನರ ಹಿತಕ್ಕಾಗಿ ಶ್ರಮಿಸುವ ಭರದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ವಹಿಸದೇ  ಸುಮಾರು ಏಳು ವರ್ಷಗಳ ಕಾಲ ಅವರು ಮಧುಮೇಹದಿಂದ ಬಳಲಿ ಅಂಬೇಡ್ಕರ್ ಡಿಸೆಂಬರ್ 6, 1956 ರಂದು  ಕೊನೆಯುಸಿರೆಳೆದರು. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

  
 

Trending News