ಹರಿಯಾಣ: ವಿದ್ಯಾರ್ಥಿನಿಯ ಮೇಲೆ 12 ಯುವಕರಿಂದ ಸಾಮೂಹಿಕ ಅತ್ಯಾಚಾರ

ಗುರುವಾರ ಬೆಳಿಗ್ಗೆ ಮನೆಯಿಂದ ಕೋಚಿಂಗ್ ಗಾಗಿ ಹೊರಟಿದ್ದ ವಿದ್ಯಾರ್ಥಿನಿಯನ್ನು ಕಣಿನಾ ಬಸ್ ನಿಲ್ದಾಣದ ಬಳಿ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಮೂವರು ಯುವಕರು ಅವಳಿಗೆ ಲಿಫ್ಟ್ ನೀಡುವ ನೆಪದಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿದರು.

Last Updated : Sep 14, 2018, 09:10 AM IST
ಹರಿಯಾಣ: ವಿದ್ಯಾರ್ಥಿನಿಯ ಮೇಲೆ 12 ಯುವಕರಿಂದ ಸಾಮೂಹಿಕ ಅತ್ಯಾಚಾರ title=

ನವದೆಹಲಿ: ಹರ್ಯಾಣದ ರೆವಾರಿ ಜಿಲ್ಲೆಯಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಿಗ್ಗೆ ಮನೆಯಿಂದ ಕೋಚಿಂಗ್ ಗಾಗಿ ಹೊರಟಿದ್ದ ವಿದ್ಯಾರ್ಥಿನಿಯನ್ನು ಕಣಿನಾ ಬಸ್ ನಿಲ್ದಾಣದ ಬಳಿ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಮೂವರು ಯುವಕರು ಅವಳಿಗೆ ಲಿಫ್ಟ್ ನೀಡುವ ನೆಪದಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿದರು. ಅಪಹರಣದ ಬಳಿಕ 12 ಹುಡುಗರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಮಾಹಿತಿ ಪ್ರಕಾರ, ಕಾರಿನಲ್ಲಿ ಲಿಫ್ಟ್ ನೀಡಿದ ನಂತರ ಪಂಕಜ್, ಮನೀಶ್ ಮತ್ತು ನೀಸು ಹೆಸರಿನ ಮೂರು ಯುವಕರು ಯುವಕಿಗೆ ನಶೆ ಹತ್ತುವ ನೀರನ್ನು ಕುಡಿಸಿ ಪ್ರಜ್ಞೆ ತಪ್ಪಿಸಿದರು. ನಂತರ ಮೂವರು ಯುವಕರು ಸೇರಿ ಆಕೆಯನ್ನು ಅಪಹರಿಸಿ ಮಹೇಂದರ್ಗಢ್ ಜಿಲ್ಲೆಯ ಗಡಿರೇಖೆಯಿಂದ ಆಚೆಗೆ ಝಾಜ್ಜರ್ ಜಿಲ್ಲೆಯ ಗಡಿ ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿ ಇತರ ಯುವಕರು ಉಪಸ್ಥಿತರಿದ್ದರು. ಮಾದಕ ವ್ಯಸನ ಸೇವಿಸಿ ಮತ್ತಿನಲ್ಲಿದ್ದ ಎಲ್ಲರೂ ಆಕೆಯನ್ನು ಕಾಮದ ಬಲಿಪಶುವಾಗಿ ಬಳಸಿಕೊಂಡರು. ಸಂಜೆ 4 ರ ವೇಳೆಗೆ ಅದೇ  ಬಸ್ ನಿಲ್ದಾಣದಲ್ಲಿ ಅನಾರೋಗ್ಯಕರ ಸ್ಥಿತಿಯಲ್ಲಿ ಆಕೆಯನ್ನು ಎಸೆದು ಅಲ್ಲಿಂದ ಓಡಿಹೋದರು ಎಂದು ತಿಳಿದುಬಂದಿದೆ.

ರೇಪ್ ಮಾಡಿ ಮನೆಗೇ ಕಾಲ್ ಮಾಡಿದರು:
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಯುವಕರಲ್ಲಿ ಒಬ್ಬ ವಿದ್ಯಾರ್ಥಿಯ ಮನೆಗೆ ಕಾಲ್ ಮಾಡಿ ಆಕೆ ಅದೇ ಬಸ್ ನಿಲ್ದಾಣದಲ್ಲಿ ಅನಾರೋಗ್ಯ ಪೀಡಿತಳಾಗಿ ಬಿದ್ದಿರುವುದಾಗಿ ತಿಳಿಸಿದರು. ಫೋನ್ನಲ್ಲಿ ಮಾಹಿತಿಯನ್ನು ಸ್ವೀಕರಿಸಿದ ನಂತರ ಸ್ಥಳಕ್ಕೆ ತಲುಪಿದ ವಿದ್ಯಾರ್ಥಿನಿಯ ಮನೆಯವರು ಆಕೆಯ ಸ್ಥಿತಿ ಕಂಡು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಹುಡುಗಿಯ ಸಂಬಂಧಿಕರಿಂದ ನ್ಯಾಯಕ್ಕಾಗಿ ಹೋರಾಟ:
ಹುಡುಗಿ ರೆವಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಆಕೆಯ ಕುಟುಂಬದ ಸಂಬಂಧಿಗಳು ರೆವಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರೆವಾರಿ ಮಹಿಳಾ ಪೊಲೀಸರು ಶೂನ್ಯ ಎಫ್ಆರ್ಐ ದಾಖಲಿಸಿದ್ದಾರೆ ಮತ್ತು ಅದನ್ನು ಕೈನಾ (ಮಹೇಂದ್ರಗಢ್) ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಕೈನಾ ಪೋಲಿಸ್ ಠಾಣೆ ಕೂಡ ಈ ವಿಷಯ ತಮ್ಮ ಗಡಿಯಿಂದ ಆಚೆಗಿದ್ದು ತಾವು ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಸಂತ್ರಸ್ಥರನ್ನು ವಾಪಸ್ ಕಳುಹಿಸಿದೆ. ಸಂತ್ರಸ್ತೆಯ ಕುಟುಂಬದವರು ಮಗಳೊಡನೆ ನ್ಯಾಯಕ್ಕಾಗಿ ಎಲ್ಲೆಡೆ ಬೇಡಿಕೊಂಡಿದ್ದರೂ ಯಾರೂ ತಮಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
 

Trending News