PM Kisan ಯೋಜನೆಯ 10ನೇ ಕಂತು ಬರಲಿದೆ ಈ ದಿನ : ಪೂರ್ಣಗೊಂಡಿವೆ ಸರ್ಕಾರದ ಸಿದ್ಧತೆಗಳು

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 10 ನೇ ಕಂತು ಬಿಡುಗಡೆ ಮಾಡಲು ಸರ್ಕಾರವು ದಿನಾಂಕವನ್ನು ನಿಗದಿಪಡಿಸಿದೆ. ನಿಮ್ಮ ಖಾತೆಗೆ ಹಣ ಯಾವಾಗ ಬರುತ್ತದೆ ಎಂದು ಇಲ್ಲಿ ತಿಳಿಯಿರಿ.

Written by - Channabasava A Kashinakunti | Last Updated : Nov 5, 2021, 10:00 AM IST
  • ಪಿಎಂ ಕಿಸಾನ್ ನಿಧಿಯ 10 ನೇ ಕಂತು ಬರಲಿದೆ ಈ ದಿನ
  • ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಸರ್ಕಾರ
  • ಮನೆಯಲ್ಲಿ ಕುಳಿತು ನಿಮ್ಮ ಕಂತುಗಳ ಸ್ಟೇಟಸ್ ಪರಿಶೀಲಿಸಬಹುದು
PM Kisan ಯೋಜನೆಯ 10ನೇ ಕಂತು ಬರಲಿದೆ ಈ ದಿನ : ಪೂರ್ಣಗೊಂಡಿವೆ ಸರ್ಕಾರದ ಸಿದ್ಧತೆಗಳು title=

ನವದೆಹಲಿ : ದೀಪಾವಳಿ ಹಬ್ಬದಂದು ರೈತರಿಗೆ ಸಂತಸದ ಸುದ್ದಿಯಿದೆ. ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 10 ನೇ ಕಂತು ಬಿಡುಗಡೆ ಮಾಡಲು ಸರ್ಕಾರವು ದಿನಾಂಕವನ್ನು ನಿಗದಿಪಡಿಸಿದೆ. ನಿಮ್ಮ ಖಾತೆಗೆ ಹಣ ಯಾವಾಗ ಬರುತ್ತದೆ ಎಂದು ಇಲ್ಲಿ ತಿಳಿಯಿರಿ.

ಡಿಸೆಂಬರ್ 15 ರೊಳಗೆ ಕಂತು ಬರಲಿದೆ

ಇಲ್ಲಿಯವರೆಗೆ ಕೇಂದ್ರದ ಮೋದಿ ಸರ್ಕಾರವು ಭಾರತದ 11.37 ಕೋಟಿ ರೈತರಿಗೆ 1.58 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಯ 10 ನೇ ಕಂತನ್ನು 15 ಡಿಸೆಂಬರ್ 2021 ರೊಳಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಕಳೆದ ವರ್ಷ 25 ಡಿಸೆಂಬರ್ 2020 ರಂದು ಸರ್ಕಾರವು ರೈತರಿಗೆ ಹಣವನ್ನು ವರ್ಗಾಯಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ : Earn Money : IRCTC ಯೊಂದಿಗೆ ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು ₹80 ಸಾವಿರ ಆದಾಯ ಗಳಿಸಿ : ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮ ಕಂತಿನ ಸ್ಟೇಟಸ್ ಈ ರೀತಿ ಪರಿಶೀಲಿಸಿ

- ಮೊದಲು pmkisan.gov.in ವೆಬ್‌ಸೈಟ್‌ಗೆ ಹೋಗಿ.
- ನಂತರ ರೈತ ವೆಬ್‌ಸೈಟ್‌ನಲ್ಲಿ 'ಫಾರ್ಮರ್ಸ್ ಕಾರ್ನರ್' ಆಯ್ಕೆಯನ್ನು ಕ್ಲಿಕ್ ಮಾಡಿ.
- ಇಲ್ಲಿ ನೀವು ಫಲಾನುಭವಿಯ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
- ಇದರಲ್ಲಿ ರೈತರು ತಮ್ಮ ಪ್ರದೇಶ, ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ವಿಭಾಗದಲ್ಲಿ ಭಾರ್ತಿ ಮಾಡಿ.
-ಇದಾದ ನಂತರ 'Get Report' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಬರುತ್ತದೆ.
- ಇದರ ನಂತರ, ಈ ಪಟ್ಟಿಯಲ್ಲಿ ನಿಮ್ಮ ಕಂತಿನ ಸ್ಥಿತಿಯನ್ನು ನೀವು ನೋಡಬಹುದು.

ರೈತರಿಗೆ ಸಿಗಲಿದೆ ವಾರ್ಷಿಕ 6000 ರೂ.

ಗಮನಾರ್ಹವಾಗಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ದೇಶಾದ್ಯಂತ ಕೋಟಿಗಟ್ಟಲೆ ರೈತರು(Farmers) ವಾರ್ಷಿಕವಾಗಿ 6 ​​ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಸರ್ಕಾರ ಈ ಮೊತ್ತವನ್ನು ಆನ್‌ಲೈನ್‌ನಲ್ಲಿ ರೈತರ ಖಾತೆಗೆ ವರ್ಗಾಯಿಸುತ್ತದೆ. ನೀವೂ ಸಹ ರೈತರಾಗಿದ್ದರೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ನೀವು ನಿಗದಿತ ದಿನಾಂಕದಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ನೋಂದಾಯಿಸುವುದು ಹೇಗೆ?

ಮೊದಲಿಗೆ ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- ನಂತರ ರೈತರ ಕಾರ್ನರ್ಗೆ ಹೋಗಿ.
ಇಲ್ಲಿ 'ಹೊಸ ರೈತ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ.
ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸ್ಥಿತಿಯನ್ನು ಆಯ್ಕೆ ಮಾಡಿ ಮತ್ತು ನಂತರ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ.
ಈ ಫಾರ್ಮ್‌ನಲ್ಲಿ, ನಿಮ್ಮ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.
ಬ್ಯಾಂಕ್ ಖಾತೆಯ ವಿವರಗಳು ಮತ್ತು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಭರ್ತಿ ಮಾಡಿ.
ಅದರ ನಂತರ ನೀವು ಫಾರ್ಮ್ ಅನ್ನು ಸಲ್ಲಿಸಬಹುದು.

ಇದನ್ನೂ ಓದಿ : Petrol-Diesel Prices : ಅನೇಕ ರಾಜ್ಯಗಳಲ್ಲಿ ವ್ಯಾಟ್ ಕಡಿತ ಪರಿಣಾಮ ಭಾರಿ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!

ಇದರ ಲಾಭವನ್ನು ಯಾರು ಪಡೆಯಬಹುದು

ಈ ಯೋಜನೆ(PM Kisan)ಯ ಲಾಭ ಪಡೆಯಲು 18 ರಿಂದ 40 ವರ್ಷದೊಳಗಿನ ಯಾವುದೇ ರೈತರು ಪ್ರಯೋಜನ ಪಡೆಯಬಹುದು. ಇದರ ಅಡಿಯಲ್ಲಿ, ರೈತರು ಗರಿಷ್ಠ 2 ಹೆಕ್ಟೇರ್ ಕೃಷಿಯೋಗ್ಯ ಭೂಮಿಯನ್ನು ಹೊಂದಿರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News