ನವದೆಹಲಿ: ಛತ್ತೀಸ್ ಗಡ್ ನ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 10 ನಕ್ಸಲರು ಭದ್ರತಾ ಪಡೆಗಳ ಎನ್ಕೌಂಟರ್ ದಾಳಿಯಲ್ಲಿ 10 ನಕ್ಸಲರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರದಂದು ಬೆಳಗ್ಗೆ 11 ಗಂಟೆಗೆ ಭೈರಾಮ್ ಘಡ್ ಪೋಲಿಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಎಸ್ಟಿಪಿ ಹಾಗೂ ಡಿಆರ್ಜಿ ಪಡೆಗಳು ನಕ್ಸಲರ ಮೇಲೆ ಎನ್ಕೌಂಟರ್ ದಾಳಿಯನ್ನು ನಡೆಸಿವೆ ಎಂದು ಬಿಜಾಪುರ್ ಎಸ್ಪಿ ಮೋಹಿತ್ ಗಾರ್ಗ್ ಪಿಟಿಐ ಗೆ ತಿಳಿಸಿದ್ದಾರೆ.
SP Bijapur Mohit Garg: 10 Naxals neutralised in an encounter with STF & DRG in Bijapur, 11 weapons recovered #Chhattisgarh pic.twitter.com/OxmHGGpcmL
— ANI (@ANI) February 7, 2019
"ಇಲ್ಲಿಯವರೆಗೆ, 10 ನಕ್ಸಲರ ಮೃತದೇಹಗಳ ಜೊತೆಗೆ 11 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅವರು ಹೇಳಿದರು.ಈ ಪ್ರದೇಶದಲ್ಲಿ ಹುಡುಕಾಟದ ಕಾರ್ಯಾಚರಣೆಗಳು ಇನ್ನು ಮುಂದುವರೆದಿದೆ ಎಂದು ತಿಳಿಸಿದ್ದಾರೆ.