ಸೆ.7 ರಂದು ಪಿಡಿಪಿ ಪಕ್ಷದ 10 ಸದಸ್ಯರ ನಿಯೋಗದಿಂದ ಮೆಹಬೂಬಾ ಮುಫ್ತಿ ಭೇಟಿ

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ 10 ಸದಸ್ಯರ ನಿಯೋಗ ಸೋಮವಾರದಂದು ಶ್ರೀನಗರದಲ್ಲಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲಿದೆ. 

Last Updated : Oct 6, 2019, 06:44 PM IST
 ಸೆ.7 ರಂದು ಪಿಡಿಪಿ ಪಕ್ಷದ 10 ಸದಸ್ಯರ ನಿಯೋಗದಿಂದ ಮೆಹಬೂಬಾ ಮುಫ್ತಿ ಭೇಟಿ   title=
file photo

ನವದೆಹಲಿ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ 10 ಸದಸ್ಯರ ನಿಯೋಗ ಸೋಮವಾರದಂದು ಶ್ರೀನಗರದಲ್ಲಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲಿದೆ. 

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದ ಒಂದು ದಿನ ಮೊದಲು ಆಗಸ್ಟ್ 4 ರಿಂದ ಮೆಹಬೂಬಾ ಮುಫ್ತಿ ಅವರನ್ನು ಮುಫ್ತಿ ಹರಿ ನಗರ ಅರಮನೆ ಅತಿಥಿ ಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ.

ಭಾನುವಾರದಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 15 ಸದಸ್ಯರ ನಿಯೋಗ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ಗವರ್ನರ್ ಸತ್ಯ ಪಾಲ್ ಮಲಿಕ್ ಅವರಿಂದ ಅನುಮತಿ ಪಡೆದ ಒಂದು ದಿನದ ನಂತರ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧನಕ್ಕೊಳಗಾದ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ನಿಯೋಗ ತೆರಳಿತು.

ಫಾರೂಕ್ ಅಬ್ದುಲ್ಲಾ  ಅವರನ್ನು ಭೇಟಿ ಮಾಡಿದ ನಿಯೋಗದ ನೇತೃತ್ವವನ್ನು ಪಕ್ಷದ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣಾ ನೇತೃತ್ವ ವಹಿಸಿದ್ದರು ಮತ್ತು ಎನ್‌ಸಿಯ ಇತರ ಕೆಲವು ಹಿರಿಯ ನಾಯಕರು ಅವರಿಗೆ ಸಾಥ್ ನೀಡಿದರು. ಎನ್‌ಸಿ ನಾಯಕರಾದ ಹಸ್ನೈನ್ ಮಸೂಡಿ ಮತ್ತು ಅಕ್ಬರ್ ಲೋನ್ ಅವರು ಫಾರೂಕ್ ಮತ್ತು ಅವರ ಪತ್ನಿ ಮೊಲಿಯನ್ನು ಶ್ರೀನಗರದ ತಮ್ಮ ನಿವಾಸದಲ್ಲಿ ಭೇಟಿಯಾದ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.

ಕೇಂದ್ರ ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಜಮ್ಮು ಮತ್ತು ಕಾಶ್ಮೀರದ ಹಲವಾರು ಮುಖ್ಯವಾಹಿನಿಯ ನಾಯಕರನ್ನು ಗೃಹಬಂಧನದಲ್ಲಿರಿಸಿತ್ತು.

ಏತನ್ಮಧ್ಯೆ, ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಅಥವಾ ಮೂರು ಹಂತದ ಪಂಚಾಯತ್ ಚುನಾವಣೆ ಅಕ್ಟೋಬರ್ 24 ರಂದು ನಡೆಯಲಿದ್ದು, ಮತಗಳ ಎಣಿಕೆ ಅದೇ ದಿನ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದ ಒಟ್ಟು 316 ಬ್ಲಾಕ್‌ಗಳಲ್ಲಿ 310 ಬ್ಲಾಕ್‌ಗಳಲ್ಲಿ ತಹಸಿಲ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ. 

Trending News