ಸರ್ಕಾರದ ಈ ಯೋಜನೆಯಿಂದ 1 ಕೋಟಿ ಬಡ ಜನರಿಗೆ ಲಾಭ

ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojna) ಅಡಿಯಲ್ಲಿ ದೇಶದ ಬಡ ಜನರಿಗೆ ಉತ್ತಮ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ.  

Last Updated : May 20, 2020, 11:20 AM IST
ಸರ್ಕಾರದ ಈ ಯೋಜನೆಯಿಂದ 1 ಕೋಟಿ ಬಡ ಜನರಿಗೆ ಲಾಭ title=

ನವದೆಹಲಿ:  ಕರೋನಾವೈರಸ್ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮೂಲಕ ಬಡವರಿಗೆ ಸಹಾಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಈವರೆಗೆ 1 ಕೋಟಿ ಬಡವರಿಗೆ ಲಾಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojna) ಅಡಿಯಲ್ಲಿ ದೇಶದ ಬಡವರಿಗೆ ಉತ್ತಮ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಆಯುಷ್ಮಾನ್ ಭಾರತ್‌ನ ಫಲಾನುಭವಿಗಳ ಸಂಖ್ಯೆ 1 ಕೋಟಿ ದಾಟಿದೆ ಎಂದು ತಿಳಿದರೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯಾಗುತ್ತದೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಉಪಕ್ರಮವು ಎಷ್ಟೋ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಎಲ್ಲಾ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ನಮ್ಮ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಆಯುಷ್ಮಾನ್ ಭಾರತ್‌ಗೆ ಸಂಬಂಧಿಸಿದ ಎಲ್ಲರನ್ನು ನಾನು ಪ್ರಶಂಸಿಸುತ್ತೇನೆ. ಅವರ ಪ್ರಯತ್ನಗಳು ಇದನ್ನು ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮವನ್ನಾಗಿ ಮಾಡಿವೆ. ಈ ಯೋಜನೆಯು ಅನೇಕ ಭಾರತೀಯರ, ವಿಶೇಷವಾಗಿ ಬಡವರ ಮತ್ತು ದಲಿತರ ವಿಶ್ವಾಸವನ್ನು ಗೆದ್ದಿದೆ.

ಆಯುಷ್ಮಾನ್ ಭಾರತದ ಅತಿದೊಡ್ಡ ಲಾಭದ ಪೋರ್ಟಬಿಲಿಟಿ. ಫಲಾನುಭವಿಗಳು ಉತ್ತಮ ಮತ್ತು ಕೈಗೆಟುಕುವ ವೈದ್ಯಕೀಯ ಸೇವೆಗಳನ್ನು ನೋಂದಾಯಿಸಿದ ಸ್ಥಳದಲ್ಲಿ ಮಾತ್ರವಲ್ಲ, ಭಾರತದ ಇತರ ಭಾಗಗಳಲ್ಲಿಯೂ ಪಡೆಯಬಹುದು. ಮನೆಯಿಂದ ದೂರ ಕೆಲಸ ಮಾಡುವವರಿಗೆ ಇದು ಸಹಾಯ ಮಾಡುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ ಈ ಯೋಜನೆಯ ಲಾಭ ಪಡೆಯುವ ಬಗ್ಗೆ ಜನರೊಂದಿಗೆ ಮಾತನಾದುವುದಾಗಿ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ನನ್ನ ಅಧಿಕೃತ ಭೇಟಿಗಳ ಸಮಯದಲ್ಲಿ ನಾನು ಆಯುಷ್ಮಾನ್ ಭಾರತ್ ಫಲಾನುಭವಿಗಳೊಂದಿಗೆ ಸಂವಹನ ನಡೆಸುತ್ತೇನೆ. ದುಃಖಕರವೆಂದರೆ ಈ ದಿನಗಳಲ್ಲಿ ಅದು ಸಾಧ್ಯವಿಲ್ಲ, ಆದರೆ 1 ಕೋಟಿ ಫಲಾನುಭವಿಗಳಲ್ಲಿ ಒಬ್ಬರಾದ ಮೇಘಾಲಯದ ಪೂಜಾ ಥಾಪಾ ಅವರೊಂದಿಗೆ ನಾನು ದೂರವಾಣಿ ಸಂಭಾಷಣೆ ನಡೆಸಿದೆ ಎಂದವರು ತಿಳಿಸಿದ್ದಾರೆ.

Trending News