ನವದೆಹಲಿ : ನರೇಂದ್ರ ಮೋದಿ ಸರ್ಕಾರವು 'ಸಾರ್ವತ್ರಿಕ ಕುಟುಂಬ ಐಡಿ' ಯನ್ನು ಅಭಿವೃದ್ಧಿಪಡಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.
ಈ ಫ್ಯಾಮಿಲಿ ಕಾರ್ಡ್ ಆಧಾರ್(Aadhar Card) ಕಾರ್ಡ್ನ ರೀತಿಯಲ್ಲೇ ಇರಲಿದ್ದು, ಇದು ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟವಾದ ಗುರುತಿನ ಸಂಖ್ಯೆಯೊಂದಿಗೆ ಬರುತ್ತದೆ ಎನ್ನಲಾಗಿದೆ. ಪ್ರತಿ ಕುಟುಂಬವನ್ನು 'ಗುರುತಿಸುವ ಘಟಕ' ವನ್ನಾಗಿ ಮಾಡುವ ಮೂಲಕ ಕೇಂದ್ರ ಆಡಳಿತ ಮತ್ತು ರಾಜ್ಯಗಳ ಪ್ರಮುಖ ಯೋಜನೆಗಳ ಫಲಾನುಭವಿಗಳ ಬಗ್ಗೆ ಟ್ಯಾಬ್ ಇರಿಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ ಅಂತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ : PM Kisan ಯೋಜನೆಯ 8ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ಈ ನಂಬರ್ ಗೆ ಕರೆ ಮಾಡಿ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeiTY) ಜೊತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ಸೇವೆಗಳ ಇಂಕ್ (NICSI) ಈ ಯೋಜನೆಯನ್ನು ಅಧ್ಯಯನ ಮಾಡುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಕಾರ್ಯಗತಗೊಳಿಸಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Prepaid Recharge Plan: ನೀವು ಕೇವಲ 39 ರೂ.ಗಳಲ್ಲಿ ಒಂದು ತಿಂಗಳು ಮಾತನಾಡಲು ಸಾಧ್ಯವಾಗುತ್ತೆ
ಹರಿಯಾಣ ಸರ್ಕಾರದ ಕುಟುಂಬ ಐಡಿ ಯೋಜನೆಯ ಪ್ರಕಾರ ಜುಲೈ 2019 ರಲ್ಲಿ ಪ್ರಾರಂಭವಾದ ಹರಿಯಾಣ ಕುಟುಂಬ ಐಡಿ ಯೋಜನೆಯನ್ನು 'ಪರಿವಾರ್ ಪೆಹ್ಚನ್ ಪತ್ರ'(Parivar Pehchan Patra) ಎಂದು ಕರೆಯಲಾಗುತ್ತದೆ. ಹರಿಯಾಣದಲ್ಲಿನ ಎಲ್ಲಾ ಕುಟುಂಬಗಳ ಅಧಿಕೃತ, ಪರಿಶೀಲಿಸಿದ ಮತ್ತು ವಿಶ್ವಾಸಾರ್ಹ ಡೇಟಾವನ್ನು ರಚಿಸುವುದು ಇದರ ಉದ್ದೇಶ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕುಟುಂಬ ಸದಸ್ಯರ ಅನುಮತಿ ಪಡೆದುಕೊಂಡೇ ಅವರ ಪ್ರಾಥಮಿಕ ವಿವರಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ : RBI Alert: ಬ್ಯಾಂಕ್ ಖಾತೆಯಲ್ಲಿ ವಂಚನೆ ನಡೆದಿದೆಯೇ? 10 ದಿನಗಳಲ್ಲಿ ನಿಮ್ಮ ಹಣ ಹಿಂಪಡೆಯುವುದು ಹೇಗೆಂದು ತಿಳಿಯಿರಿ
ಐಡಿ ಅಸ್ತಿತ್ವದಲ್ಲಿರುವ, ಸ್ವತಂತ್ರ ಯೋಜನೆಗಳಾದ ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು ಮತ್ತು ಪಿಂಚಣಿ(Pension)ಗಳನ್ನು ಸಂಪರ್ಕಿಸುತ್ತದೆ, ಇದರಿಂದಾಗಿ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ ಮತ್ತು ಅದೇ ಸಮಯದಲ್ಲಿ ವಿವಿಧ ಯೋಜನೆಗಳು, ಸಬ್ಸಿಡಿಗಳು ಮತ್ತು ಪಿಂಚಣಿಗಳ ಫಲಾನುಭವಿಗಳ ಸ್ವಯಂಚಾಲಿತ ಆಯ್ಕೆಯನ್ನು ಸಕ್ರಿಯಗೊಳಿಸುತ್ತದೆ' ಎಂದು ರಾಜ್ಯ ಸರ್ಕಾರದ ವೆಬ್ಸೈಟ್ ಹೇಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ