ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಹುಮತ ಬಾರದಿದ್ದರೂ ಪ್ರಧಾನಿ ಮೋದಿಯವರು NDA ಮೈತ್ರಿಪಕ್ಷಗಳ ಸಹಾಯದೊಂದಿಗೆ ಕೇಂದ್ರದಲ್ಲಿ ೩ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮವರ್ಗದ ಜನರಂತೂ ರೋಸಿ ಹೋಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಪ್ರಗತಿಯಲ್ಲಿದ್ದರೂ ಸಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನೆರೆಯ ದೇಶಗಳೊಂದಿಗೆ ಭಾರತದ ಅಂತಾರಾಷ್ಟ್ರೀಯ ಸಂಬಂಧ ಹಳಸುತ್ತಿದೆ. ಭಾರತವು ಮಿತ್ರರಾಷ್ಟ್ರಗಳ ಗೆಳೆತನವನ್ನು ಕಳೆದುಕೊಳ್ಳುತ್ತಿದೆ.
ಹೌದು, ವಿದೇಶಾಂಗ ಸಚಿವರಾಗಿ ಐದು ವರ್ಷ ಸೇವೆ ಸಲ್ಲಿಸಿರುವ ಎಸ್.ಜೈಶಂಕರ್ ೨ನೇ ಅವಧಿಗೂ ಮುಂದುವರೆದಿದ್ದಾರೆ. ಆದರೆ ಕಳೆದ ಐದು ವರ್ಷದ ಜೈಶಂಕರ್ ಆಡಳಿತದಲ್ಲಿ ಭಾರತ ತನ್ನ ಐದು ಮಿತ್ರರಾಷ್ಟ್ರಗಳನ್ನು ಕಳೆದುಕೊಂಡಿದೆ. ನೆರೆಯ ಬಾಂಗ್ಲಾದೇಶದಲ್ಲಿ ಉಗ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದೇ ಇದಕ್ಕೆ ನಿದರ್ಶನ. ಶೇಖ್ ಹಸೀರಾ ನೇತೃತ್ವದ ಬಾಂಗ್ಲಾ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೀಡಿದ್ದ ಮೀಸಲಾತಿಯನ್ನು ವಿರೋಧಿಸಿ ತಿಂಗಳಿಗೂ ಹೆಚ್ಚು ಕಾಲ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಚಳವಳಿ ಹಾಗೂ ಬಾಂಗ್ಲಾ ಜನರ ಆಕ್ರೋಶಕ್ಕೆ ಸಿಲುಕಿದ ಶೇಖ್ ಹಸೀನಾ ರಾಜೀನಾಮೆ ನೀಡಿ ತಮ್ಮ ದೇಶದಿಂದಲೇ ಎಸ್ಕೇಪ್ ಆಗಿ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಶೇಖ್ ಹಸೀನಾರ ವಿರುದ್ಧ ಸರ್ವಾಧಿಕಾರಿ ಆರೋಪ ಕೇಳಿಬಂದಿತ್ತು. ಇಷ್ಟುದಿನ ತಮ್ಮ ವಿರೋಧಿಗಳನ್ನು ಮಟ್ಟ ಹಾಕುತ್ತಲೇ ಬಂದಿದ್ದ ಅವರು ಅಂತಿಮವಾಗಿ ಸೋಲೊಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬಾಂಗ್ಲಾದೇಶವು ಭಾರತಕ್ಕೆ ಮಗ್ಗುಲ ಮುಳ್ಳು ಆಗತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಪಾಕಿಸ್ತಾನದಂತೆಯೇ ಬಾಂಗ್ಲಾ ಸಹ ಉಗ್ರರ ಅಡಗು ತಾಣವಾಗಬಹುದು ಹಾಗೂ ಈಶಾನ್ಯ ರಾಜ್ಯಗಳಿಗೆ ಒಳನುಸುಳುವಿಕೆ ಸಮಸ್ಯೆ ಎದುರಾಗಬಹುದು ಅನ್ನೋ ಆತಂಕ ಹುಟ್ಟಿಕೊಂಡಿದೆ.
ಹೆಚ್ಚಾಗುತ್ತಾ ಚೀನಾದ ಪ್ರಭಾವ?
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾರ ಸರ್ಕಾರ ಪತನದಿಂದ ಭಾರತಕ್ಕೆ ಅನೇಕ ರೀತಿಯ ಸಮಸ್ಯೆ ಉಂಟಾಗಲಿದೆ. ಉಭಯ ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೂ ಕುತ್ತುಂಟಾಗಲಿದೆ. ಮೊದಲನಿಂದಲೂ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿಲ್ಲ. ಭಾರತದ ವಿರುದ್ಧ ಪಾಕ್ ಯಾವಾಗಲೂ ಕತ್ತಿ ಮಸಿಯುತ್ತಿರುತ್ತದೆ. ದ್ವೀಪರಾಷ್ಟ್ರ ಶ್ರೀಲಂಕಾ ಜೊತೆಗಿನ ಸಂಬಂಧ ಅಷ್ಟಕ್ಕಷ್ಟೇ ಎನ್ನಬಹುದು. ಕೆಲವು ತಿಂಗಳ ಹಿಂದಷ್ಟೇ ಚೆನ್ನಾಗಿದ್ದ ಮಾಲ್ಡೀವ್ಸ್ ಜೊತೆಗಿನ ಸಂಬಂಧವೂ ಹಳಸಿದೆ. ನೇಪಾಳದೊಂದಿಗೆ ಆರಂಭದಲ್ಲಿ ಇದ್ದಂತಹ ಉತ್ತಮ ಸಂಬಂಧ ಈಗಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಆ ದೇಶದೊಂದಿಗಿನ ಸಂಬಂಧದ ಮೇಲೂ ಪರಿಣಾಮ ಉಂಟಾಗಿದೆ. ಭೂತಾನ್ನೊಂದಿಗೆ ತಕ್ಕಮಟ್ಟಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ ತನ್ನ ಮಿತ್ರರಾಷ್ಟ್ರಗಳನ್ನು ಒಂದೊಂದೆ ಕಳೆದುಕೊಳ್ಳುತ್ತಿದೆ.
ಇದನ್ನೂ ಓದಿ: ಏಕಾಏಕಿ 10 ದಿನಗಳ ಕಾಲ ರಜೆ ಘೋಷಿಸಿದ ವಿಶ್ವದ ಅತಿದೊಡ್ಡ ವಜ್ರಾಭರಣಗಳ ತಯಾರಕ ಕಂಪನಿ..!
ತನ್ನ ಮಿತ್ರರಾಷ್ಟ್ರಗಳನ್ನು ಕಳೆದುಕೊಳ್ಳುತ್ತಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮಿತ್ರರಾಷ್ಟ್ರಗಳು ಇದೀಗ ಡ್ರ್ಯಾಗನ್ ದೇಶ ಚೀನಾದೊಂದಿಗೆ ದೋಸ್ತಿ ಮಾಡುತ್ತಿವೆ. ಚೀನಾಗೆ ಈ ದೇಶಗಳು ಹತ್ತಿರವಾಗುತ್ತಿರುವುದು ಭಾರತಕ್ಕೆ ದೊಡ್ಡ ಆತಂಕವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಚೀನಾದೊಂದಿಗೆ ಸೇರಿಕೊಂಡು ಎಲ್ಲಾ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಿದರೆ ಏನು ಕಥೆ ಅನ್ನೋ ಪ್ರಶ್ನೆ ಎದುರಾಗಿದೆ. ವಿದೇಶಾಂಗ ಸಚಿವರಾಗಿ ಎಸ್.ಜೈಶಂಕರ್ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ವೈಫಲ್ಯ ಅನುಭವಸಿದ್ದಾರೆ. ಭಾರತದ ಜೊತೆಗೆ ನೆರೆಯ ದೇಶಗಳೇ ಚೆನ್ನಾಗಿಲ್ಲ ಎಂದ ಮೇಲೆ ಇನ್ನು ಬೇರೆ ಬೇರೆ ದೇಶಗಳು ಭಾರತಕ್ಕೆ ಯಾವ ರೀತಿಯ ಸಹಕಾರ ನೀಡುತ್ತವೆ ಅನ್ನೋ ಪ್ರಶ್ನೆ ಮೂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.