20 ವರ್ಷದ ನಂತರ ಹುಡುಗಿಯರು ಈ ಟೆಸ್ಟ್ ಮಾಡಿಸಿಕೊಂಡರೆ ಅಪಾಯಕಾರಿ ರೋಗಗಳ ಭಯ ಇರುವುದಿಲ್ಲ

ಮಹಿಳೆಯ ರೋಗನಿರೋಧಕ ಶಕ್ತಿಯು 30 ವರ್ಷದಿಂದ ಕ್ಷೀಣಿಸಲು ಪ್ರಾರಂಭಿಸುತ್ತದೆ. ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು  ಆರಂಭಿಕ ರೋಗನಿರ್ಣಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. 

Written by - Ranjitha R K | Last Updated : Jul 12, 2023, 01:01 PM IST
  • ಮಹಿಳೆಯರು ಜೀವನದ ಆರಂಭಿಕ ಹಂತಗಳಲ್ಲಿ ಅನೇಕ ರೋಗಗಳಿಗೆ ಗುರಿಯಾಗುತ್ತಾರೆ.
  • ಜವಾಬ್ದಾರಿಗಳನ್ನು ಪೂರೈಸುವ ಭರದಲ್ಲಿ ಮಹಿಳೆಯರು ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತಾರೆ.
  • ಮಹಿಳೆಯರು ಕೆಲವು ನಿಯಮಿತ ತಪಾಸಣೆಗೆ ಒಳಗಾಗಬೇಕು.
20 ವರ್ಷದ ನಂತರ ಹುಡುಗಿಯರು ಈ ಟೆಸ್ಟ್ ಮಾಡಿಸಿಕೊಂಡರೆ ಅಪಾಯಕಾರಿ ರೋಗಗಳ ಭಯ ಇರುವುದಿಲ್ಲ  title=

ಬೆಂಗಳೂರು : ಹಾರ್ಮೋನ ಏರುಪೇರು, ಮುಟ್ಟಿನ ಸಮಸ್ಯೆಗಳು, ಹೆರಿಗೆ ಮತ್ತು ಮತ್ತು ಒಂದೇ ಸಮನೆ ಅನೇಕ ಕೆಲಸಗಳನ್ನು ಮಾಡುತ್ತಿರುವ ಕಾರಣದಿಂದಾಗಿ ಮಹಿಳೆಯರು ಜೀವನದ ಆರಂಭಿಕ ಹಂತಗಳಲ್ಲಿ ಅನೇಕ ರೋಗಗಳಿಗೆ ಗುರಿಯಾಗುತ್ತಾರೆ. ಸಮಯ, ಅರಿವು ಮತ್ತು ತಮಗಿರುವ ಜವಾಬ್ದಾರಿಗಳನ್ನು ಪೂರೈಸುವ ಭರದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. ಅಲ್ಲದೆ, ನಿಯಮಿತ ತಪಾಸಣೆಗಳಿಗೆ ಕೂಡಾ ಆದ್ಯತೆ ನೀಡುವುದಿಲ್ಲ. 

ಮಹಿಳೆಯ ರೋಗನಿರೋಧಕ ಶಕ್ತಿಯು 30 ವರ್ಷದಿಂದ ಕ್ಷೀಣಿಸಲು ಪ್ರಾರಂಭಿಸುತ್ತದೆ. ಮೂಳೆ ಸಾಂದ್ರತೆ, ರಕ್ತಹೀನತೆ, ಥೈರಾಯ್ಡ್ ಸಮಸ್ಯೆಗಳು, ಅಪೌಷ್ಟಿಕತೆ, ಮಧುಮೇಹ, ಅಧಿಕ ರಕ್ತದೊತ್ತಡ ಹೀಗೆ ಅನೇಕ ರೋಗಗಳು ಬಾಧಿಸಲು ಆರಂಭಿಸುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕೆಲವು ಕಾಯಿಲೆಗಳು ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆಯೇ ಪರಿಣಾಮ ಬೀರುತ್ತದೆ. ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಆರಂಭಿಕ ರೋಗನಿರ್ಣಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಇದಕ್ಕಾಗಿ, ನಿಯಮಿತ ತಪಾಸಣೆ ಮತ್ತು ಸ್ಕ್ರೀನಿಂಗ್ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಆರೋಗ್ಯ ಅಪಾಯಗಳು ಜೀವನದುದ್ದಕ್ಕೂ ಇದ್ದರೂ, 20 ವರ್ಷ ವಯಸ್ಸಿನ ನಂತರ ಮಹಿಳೆಯರು ಕೆಲವು ನಿಯಮಿತ ತಪಾಸಣೆಗೆ ಒಳಗಾಗಬೇಕು.

ಇದನ್ನೂ ಓದಿ : ನೀವೂ ಮಕ್ಕಳಿಗೆ ಈ ಆಹಾರ ನೀಡುತ್ತಿದ್ದರೆ ತಕ್ಷಣ ನಿಲ್ಲಿಸಿ ಬಿಡಿ ! ಹೆಚ್ಚುವುದು ಕಿಡ್ನಿ ಸ್ಟೋನ್ ಅಪಾಯ

ಪ್ಯಾಪ್ ಸ್ಮೀಯರ್ ಪರೀಕ್ಷೆ  : 
ಮಹಿಳೆಯರು ನಿಯಮಿತವಾಗಿ ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದು ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಪರೀಕ್ಷಿಸಲು  ಮತ್ತೆ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. 

PCOD/PCOS ಸ್ಕ್ರೀನಿಂಗ್ : 
ಈ ಅಂಡಾಶಯದ ಸ್ಥಿತಿಯು ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಪಾಲಿಸಿಸ್ಟಿಕ್ ಓವರಿ ಕಾಯಿಲೆ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎರಡೂ ಬೇರೆ ಬೇರೆ ಸಮಸ್ಯೆ ಎನ್ನುವುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಪಿಸಿಓಡಿಯಲ್ಲಿ ಅಂಡಾಶಯಗಳು ಅಪಕ್ವವಾದ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ. ಇದು ಹಾರ್ಮೋನ್ ಅಸಮತೋಲನ ಮತ್ತು ಅಂಡಾಶಯದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಮತ್ತೊಂದೆಡೆ, ಪಿಸಿಓಎಸ್‌ನಲ್ಲಿನ ಹೆಚ್ಚುವರಿ ಆಂಡ್ರೊಜೆನ್ (ಪುರುಷ ಲೈಂಗಿಕ ಹಾರ್ಮೋನ್) ಅಂಡಾಶಯದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಮೊಟ್ಟೆಗಳಲ್ಲಿ ಚೀಲ ರಚನೆಯ ಅಪಾಯವಿರುತ್ತದೆ. 

ಇದನ್ನೂ ಓದಿ : ಅಡುಗೆಗೆ ಮಾತ್ರವಲ್ಲ… ದಟ್ಟವಾದ, ಗಾಢ ಕಪ್ಪು, ಸಮೃದ್ಧ-ಉದ್ದವಾಗಿ ಕೂದಲು ಬೆಳೆಯಲು ಬಳಸಿ ಶುಂಠಿ ಹೇರ್ ಪ್ಯಾಕ್!

ಮ್ಯಾಮೊಗ್ರಫಿ ಪರೀಕ್ಷೆ : 
ಮಹಿಳೆಯರ ಸ್ತನಗಳನ್ನು ಪರೀಕ್ಷಿಸಲು ಮ್ಯಾಮೊಗ್ರಫಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಿಂದ ಸ್ತನ ಕ್ಯಾನ್ಸರ್ ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಬಹುದು. ಮಹಿಳೆಯರು ನಿಯಮಿತವಾಗಿ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

ರಕ್ತ ಪರೀಕ್ಷೆಗಳು : 
ಮಹಿಳೆಯರು ನಿಯಮಿತ ಮಧ್ಯಂತರಗಳಲ್ಲಿ ರಕ್ತ ಪರೀಕ್ಷೆಗಳನ್ನು ಮಾಡಬೇಕು. ಈ ಮೂಲಕ ಆರೋಗ್ಯದ ಮೇಲ್ವಿಚಾರಣೆ ಮಾಡುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Diabetes Remedies: ಬೇವು, ತುಳಸಿ, ಈರುಳ್ಳಿ, ಆಮ್ಲಾ.. ಒಂದೇ ದಿನದಲ್ಲಿ ಮಧುಮೇಹ ಕಡಿಮೆ ಮಾಡುತ್ತೆ ಈ ಮನೆಮದ್ದು.!

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News