ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ!

ಆರಿಫಾ ಸುಲ್ತಾನಾ(20) ಎಂಬ ಮಹಿಳೆ ಕಳೆದ ತಿಂಗಳು ಸಹಜ ಹೆರಿಗೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. 

Last Updated : Mar 28, 2019, 01:37 PM IST
ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ! title=

ಢಾಕಾ: ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಆರಿಫಾ ಸುಲ್ತಾನಾ(20) ಎಂಬ ಮಹಿಳೆ ಕಳೆದ ತಿಂಗಳು ಸಹಜ ಹೆರಿಗೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆಕೆಯ ಹೊಟ್ಟೆಯಲ್ಲಿ ಮತ್ತೊಂದು ಗರ್ಭ ಇರುವುದನ್ನು ವೈದ್ಯರು ಗಮನಿಸಿರಲಿಲ್ಲ ಎನ್ನಲಾಗಿದೆ. "ಮಹಿಳೆಗೂ ಕೂಡ ತನ್ನ ಹೊಟ್ಟೆಯಲ್ಲಿ ಮತ್ತೊಂದು ಗರ್ಭ ಇರುವುದು ಅರಿವಿಗೆ ಬಂದಿಲ್ಲ. ಆದರೆ ಮೊದಲ ಮಗುವಿನ ಹೆರಿಗೆಯಾದ ಒಂದು ತಿಂಗಳ ಬಳಿಕ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಾಗ ಮಹಿಳೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಗ ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದು ತಿಳಿದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿ, ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾಳೆ. " ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಶೈಲಾ ಪೊದ್ದಾರ್ ಹೇಳಿರುವುದಾಗಿ AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೈಋತ್ಯ ಬಾಂಗ್ಲಾದೇಶದ ಜೆಸ್ಸೂರ್​ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆಯನ್ನು, ಮೂವರು ಆರೋಗ್ಯಕರವಾದ ಮಕ್ಕಳೊಂದಿಗೆ ಮಂಗಳವಾರ ಡಿಸ್ಚಾರ್ಜ್​ ಮಾಡಿ ಕಳುಹಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ಸೂರು ಆಸ್ಪತ್ರೆ ವೈದ್ಯಾಧಿಕಾರಿ ದಿಲೀಪ್​ ರಾಯ್​, 30 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ಎಂದೂ ನೋಡಿಲ್ಲ. ನನಗೂ ಆಶ್ಚರ್ಯವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

Trending News