ಅತಿಯಾದ ಕೊಬ್ಬು ಕರಗಿಸಲು ಚಳಿಗಾಲವೇ ಬೆಸ್ಟ್ ! ಚಳಿಗಾಲದ ಈ ಹಣ್ಣಿನ ಮೂಲಕ ಫ್ಯಾಟ್ ಬರ್ನ್ ಬಲು ಸುಲಭ!

Winter Fruits to lose weight:ಆಹಾರ ಕ್ರಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ,  ಕೆಲವು ಕಾಲೋಚಿತ ಹಣ್ಣುಗಳನ್ನು ಸೇರಿಸುವ ಮೂಲಕ, ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. 

Written by - Ranjitha R K | Last Updated : Dec 27, 2023, 11:24 AM IST
  • ಚಳಿಗಾಲ ಬಂದರೆ ಸಾಕು ದೇಹಕ್ಕೆ ಜಡತ್ವ ಆವರಿಸಿ ಬಿಡುತ್ತದೆ
  • ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಸೇಬು ಬಹುತೇಕ ಎಲ್ಲಾ ಕಾಯಿಲೆಗಳಲ್ಲಿ ತಿನ್ನಬಹುದಾದ ಹಣ್ಣು.
ಅತಿಯಾದ ಕೊಬ್ಬು ಕರಗಿಸಲು ಚಳಿಗಾಲವೇ ಬೆಸ್ಟ್ ! ಚಳಿಗಾಲದ ಈ ಹಣ್ಣಿನ ಮೂಲಕ ಫ್ಯಾಟ್ ಬರ್ನ್ ಬಲು ಸುಲಭ!  title=

Winter Fruits to lose weight : ಚಳಿಗಾಲ ಬಂದರೆ ಸಾಕು ದೇಹಕ್ಕೆ ಜಡತ್ವ ಆವರಿಸಿ ಬಿಡುತ್ತದೆ. ಸೋಮಾರಿತನ ಅತಿಯಾಗಿ ಕಾಡುತ್ತದೆ. ಸುಮ್ಮನೆ ಕುಳಿತುಕೊಂಡು ಏನನ್ನಾದರೂ ತಿನ್ನಬೇಕು ಕುಡಿಯಬೇಕು ಎಂದೆನಿಸುತ್ತಿರುತ್ತದೆ. ಈ ಋತುವಿನಲ್ಲಿ ನೆಗಡಿ, ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಬಾಧಿಸುತ್ತದೆ. ಇದರ ಜೊತೆ ಅತಿಯಾದ ಚಳಿಯಿಂದಾಗಿ ಕೀಲು ನೋವಿನ ಸಮಸ್ಯೆ ಉಲ್ಬಣಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ  ದೇಹ ತೂಕ ಕಳೆದುಕೊಳ್ಳುವತ್ತ ಗಮನ ಹರಿಸಬೇಕು. ಚಳಿಗಾಲದಲ್ಲಿ ದೇಹ ತೂಕ ಕಳೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವುದು ಅಷ್ಟು ಸುಲಭವಲ್ಲ. ಆದರೂ ಆಹಾರ ಕ್ರಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಕೆಲವು ಕಾಲೋಚಿತ ಹಣ್ಣುಗಳನ್ನು ಸೇರಿಸುವ ಮೂಲಕ, ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.  

ನಿತ್ಯದ ಆಹಾರದಲ್ಲಿ ಉತ್ತಮ ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ಚಳಿಗಾಲದಲ್ಲಿ ಚೈತನ್ಯಭರಿತ ಜೀವನ ಸಾಗಿಸಬಹುದು. ಆಹಾರದಲ್ಲಿ ಅಗತ್ಯವಾದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸಲು ಹೆಚ್ಚು ಹೆಚ್ಚು ಹಣ್ಣುಗಳನ್ನು ತಿನ್ನಬಹುದು. ತಜ್ಞರ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣುಗಳನ್ನು ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. 

ಇದನ್ನೂ ಓದಿ : ಕಪ್ಪು ದ್ರಾಕ್ಷಿಯನ್ನು ಈ ರೀತಿ ತಿಂದರೆ ಮುಟ್ಟಿನ ಸಮಯದ ನೋವು ಮಾಯವಾಗುವುದು!

1- ಕಿತ್ತಳೆ :
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ದೇಹವನ್ನು ನಿರ್ವಿಷಗೊಳಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಇದು  ಸಹಕಾರಿ. ಕಿತ್ತಳೆ ಹೆಚ್ಚಿನ ಪ್ರಮಾಣದ ಫೈಬರ್, ಪೊಟ್ಯಾಸಿಯಮ್ ಮತ್ತು ಖನಿಜಗಳನ್ನು ಹೊಂದಿರುವುದಲ್ಲದೆ, ಇದರಲ್ಲಿರುವ ಕ್ಯಾಲೋರಿ ಪ್ರಮಾಣ ಕೂಡಾ ಕಡಿಮೆ. ಕಿತ್ತಳೆ ಹಣ್ಣಿನಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ, ಈ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  

2- ದಾಳಿಂಬೆ :
ದಾಳಿಂಬೆಯು ಅಧಿಕ ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಫೈಬರ್ ಹೊಂದಿರುವ ಹಣ್ಣು. ಇದು ಕೂಡಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ದಾಳಿಂಬೆ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ವ್ಯಾಯಾಮದ ಮೊದಲು ಈ ಹಣ್ಣನ್ನು  ಸೇವಿಸಬಹುದು. ದಾಳಿಂಬೆಯನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿನ  ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ.

3- ಸೇಬು : 
ಸೇಬು ಬಹುತೇಕ ಎಲ್ಲಾ ಕಾಯಿಲೆಗಳಲ್ಲಿ ತಿನ್ನಬಹುದಾದ ಹಣ್ಣು. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಡಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಳಗಿನ ಉಪಾಹಾರಕ್ಕೆ ಸೇಬು ಉತ್ತಮ ಆಯ್ಕೆಯಾಗಿದೆ. 

ಇದನ್ನೂ ಓದಿ : ಕಿತ್ತಳೆ ಜ್ಯೂಸ್ ಕುಡಿದರೆ ದೂರವಾಗುತ್ತೆ ಈ ಕಾಯಿಲೆಗಳು… ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು

4- ಕಿವಿ :
ಕಿವಿ ವಿಶ್ವದ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಹೆಚ್ಚಿನ ನಾರಿನಂಶವಿರುತ್ತದೆ. ಕಿವಿ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ತೂಕವನ್ನು ಕಳೆದುಕೊಳ್ಳಲು, ದೈನಂದಿನ ಆಹಾರದಲ್ಲಿ ಈ ಹಣ್ಣನ್ನು ಸೇರಿಸಿಕೊಳ್ಳಬಹುದು.

5- ಪೇರಳೆ :
ಪೇರಳೆ ಹಣ್ಣಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಅತಿಯಾಗಿ ತಿನ್ನುವುದು ದೇಹದ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಪೇರಳೆ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಇದು ತುಂಬಾ ಸಹಾಯ ಮಾಡುತ್ತದೆ. 

6- ಸೀತಾಫಲ : 
ಸೀತಾಫಲ ಹಣ್ಣು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ದೇಹದ ಚಯಾಪಚಯ ಕ್ರಿಯೆಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಎ ಮತ್ತು ಸಿ ಜೊತೆಗೆ, ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರವನ್ನು ಹೇರಳವಾಗಿರುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.   

ಇದನ್ನೂ ಓದಿ : Anjeer Benefits: ಅಂಜೂರ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News