Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ

ನಿಮ್ಮ ದಿನವನ್ನು ಆರೋಗ್ಯಕರ ಪಾನೀಯದೊಂದಿಗೆ ಪ್ರಾರಂಭಿಸಲು ನೀವು ಬಯಸಿದರೆ, ಮೆಂತ್ಯ ನೀರು ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮೆಂತ್ಯದ ನೀರನ್ನು ಕುಡಿಯುವುದರಿಂದ ತೂಕ ನಷ್ಟದ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Written by - Yashaswini V | Last Updated : Apr 1, 2021, 02:36 PM IST
  • ಮೆಂತ್ಯ ನೀರು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ
  • ಬೆಳಿಗ್ಗೆ ಮೆಂತ್ಯ ಬೀಜಗಳನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಮರೆಯದಿರಿ
  • ಮೆಂತ್ಯ ನೀರಿನಿಂದ ಜೀರ್ಣಕ್ರಿಯೆ ಸಹ ಸುಧಾರಿಸುತ್ತದೆ
Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ title=
Health benefits of fenugreek seeds

ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಸೇವಿಸುವುದು ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಹೆಚ್ಚಿನ ಜನರು ಕೆಫೀನ್ ಭರಿತ ಕಾಫಿ ಅಥವಾ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದಿನವನ್ನು ಆರೋಗ್ಯಕರ ಪಾನೀಯದಿಂದ ಪ್ರಾರಂಭಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಮೆಂತ್ಯದ ನೀರು ನಿಮಗೆ ಉತ್ತಮ ಆಯ್ಕೆಯಾಗಿದೆ. ಅದು ನಿಮಗೆ ದಿನವಿಡೀ ಶಕ್ತಿಯನ್ನು ನೀಡುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿರಿಸುತ್ತದೆ.  ತೂಕ ನಷ್ಟದ ಜೊತೆಗೆ, ಮೆಂತ್ಯ ಬೀಜಗಳು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.  ಅಷ್ಟೇ ಅಲ್ಲದೆ ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಸೇವಿಸಿದರೆ, ನೀವು ಅನೇಕ ರೋಗಗಳನ್ನು ತಪ್ಪಿಸಬಹುದು.

ಮೆಂತ್ಯ ನೀರನ್ನು ತಯಾರಿಸುವುದು ಹೀಗೆ?
ನೀವು ಮೆಂತ್ಯ ನೀರನ್ನು ಎರಡು ರೀತಿಯಲ್ಲಿ ಮಾಡಬಹುದು:

1. 1 ಟೀಸ್ಪೂನ್ ಮೆಂತ್ಯ ಬೀಜಗಳನ್ನು 1 ಗ್ಲಾಸ್ ಕುದಿಯುವ ಬಿಸಿ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ಮುಚ್ಚಿಡಿ. ಇದನ್ನು ಮಾಡುವುದರಿಂದ, ಮೆಂತ್ಯದ ಸಾರಗಳು ನೀರಿನಲ್ಲಿ ಬರುತ್ತವೆ. 10 ನಿಮಿಷಗಳ ನಂತರ ನೀರನ್ನು (Water)  ಸೋಸಿ, ಅದರೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ.

ಇದನ್ನೂ ಓದಿ - Watermelon Seeds Benefits:ಕಲ್ಲಂಗಡಿ ಬೀಜಗಳ ಪ್ರಯೋಜನಗಳನ್ನು ತಿಳಿದರೆ ನೀವು ಎಂದಿಗೂ ಅದನ್ನು ಎಸೆಯುವುದಿಲ್ಲ

2. ಮೆಂತ್ಯವನ್ನು ಬಾಣಲೆಯಲ್ಲಿ ಹುರಿಯಿರಿ ಮತ್ತು ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. 1 ಗ್ಲಾಸ್ ಬೆಚ್ಚಗಿನ ನೀರಿಗೆ 1 ಟೀಸ್ಪೂನ್ ಪುಡಿಯನ್ನು ಸೇರಿಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಮೆಂತ್ಯ ನೀರು ಕುಡಿಯುವುದರಿಂದ ಆಗುವ ಲಾಭಗಳು :
- ಟೈಪ್ 2 ಡಯಾಬಿಟಿಸ್ ರೋಗಿಗಳು ಮೆಂತ್ಯ ನೀರು ಕುಡಿದರೆ, ದೇಹದಲ್ಲಿ ಇನ್ಸುಲಿನ್ ಸಿಕ್ರಿಯೇಶನ್ ಉತ್ತಮವಾಗುತ್ತದೆ. ಇದು ಫೈಬರ್ ಅನ್ನು ಸಹ ಹೊಂದಿರುತ್ತದೆ. ಆದ್ದರಿಂದ ಇದು ಬಿಡುಗಡೆಯಾದ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ದೇಹದಿಂದ ಸಕ್ಕರೆ ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

- ಯಾರಿಗಾದರೂ ಅಜೀರ್ಣ ಸಮಸ್ಯೆ ಇದ್ದರೆ, ಮಲಬದ್ಧತೆ ಸಮಸ್ಯೆ ಇದ್ದರೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯ ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

ಇದನ್ನೂ ಓದಿ- Kidney Stone : ಕಿಡ್ನಿ ಸಮಸ್ಯೆ ಇದೆಯಾ..? ಈ ಐದು ವಸ್ತುಗಳಿಂದ ದೂರ ಇರಿ.!

- ಯಾರಿಗಾದರೂ ಮೂತ್ರಪಿಂಡದ ಸಮಸ್ಯೆ ಇದ್ದರೆ, ಅಂತಹವರು ಸಹ ಮೆಂತ್ಯ ನೀರನ್ನು ಕುಡಿಯಬೇಕು. ಕಿಡ್ನಿ ಸ್ಟೋನ್ (Kidney Stone) ಕರಗಿಸಲು ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಆದಾಗ್ಯೂ, ದಯವಿಟ್ಟು ಅದನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

- ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಮೆಂತ್ಯ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ. 

- ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕಾರಣ ಬಾಣಂತಿಯರಿಗೆ ಮೆಂತ್ಯ ನೀರು ಬಹಳ ಪ್ರಯೋಜನಕಾರಿಯಾಗಿದೆ. ನೀವು ಬಯಸಿದರೆ, ನೀವು ಮೆಂತ್ಯ ಬೀಜಗಳಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಸಹ ಕುಡಿಯಬಹುದು.

(ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ  ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News