ಶ್ರಾವಣ ಮಾಸದಲ್ಲಿ ನಾನ್ ವೆಜ್ ಯಾಕೆ ತಿನ್ನಬಾರದು? ಇದರ ಹಿಂದಿದೆ ವೈಜ್ಞಾನಿಕ ಕಾರಣ!

Shravan month 2022: ಈ ವರ್ಷದ ಶ್ರಾವಣ ತಿಂಗಳು ಜುಲೈ 29 ರಿಂದ ಪ್ರಾರಂಭವಾಗುತ್ತದೆ. ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. 

Written by - Chetana Devarmani | Last Updated : Jul 16, 2022, 01:22 PM IST
  • ಈ ವರ್ಷದ ಶ್ರಾವಣ ತಿಂಗಳು ಜುಲೈ 29 ರಿಂದ ಪ್ರಾರಂಭವಾಗುತ್ತದೆ.
  • ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ
  • ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ
ಶ್ರಾವಣ ಮಾಸದಲ್ಲಿ ನಾನ್ ವೆಜ್ ಯಾಕೆ ತಿನ್ನಬಾರದು? ಇದರ ಹಿಂದಿದೆ ವೈಜ್ಞಾನಿಕ ಕಾರಣ!  title=
ಮಾಂಸಾಹಾರ

Shravan month 2022: ಈ ವರ್ಷದ ಶ್ರಾವಣ ತಿಂಗಳು ಜುಲೈ 29 ರಿಂದ ಪ್ರಾರಂಭವಾಗುತ್ತದೆ. ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್‌ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ. ಆದರೆ, ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣಗಳಿವೆ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಹಾಗಾದರೆ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಏಕೆ ಸೇವಿಸಬಾರದು ಮತ್ತು ಅದನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಇಲ್ಲಿ ತಿಳಿಯಿರಿ.

ಇದನ್ನೂ ಓದಿ: DGCA Latest Rule: ಇನ್ನು ವೈದ್ಯರ ಸರ್ಟಿಫಿಕೆಟ್ ಇದ್ದರೆ ಇವರು ವಿಮಾನ ಹತ್ತಬಹುದು

ಮಳೆಗಾಲದಲ್ಲಿ ಜೀರ್ಣ ಶಕ್ತಿ ಕುಂದುತ್ತದೆ : ಶ್ರಾವಣ ಮಾಸದಲ್ಲಿ ಬೀಳುವ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಉಳಿಯುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ದುರ್ಬಲವಾದ ಜೀರ್ಣಕಾರಿ ಶಕ್ತಿಯಿಂದ, ಮಾಂಸಾಹಾರವು ಕರುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆಹಾರ ಪದಾರ್ಥಗಳು ಬೇಗ ಕೆಡುತ್ತವೆ : ಶ್ರಾವಣ ಮಾಸದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುತ್ತದೆ. ಇದರಿಂದ ಪರಿಸರದಲ್ಲಿ ಶಿಲೀಂಧ್ರ ಸೇರಿದಂತೆ ಇತರ ಸೋಂಕುಗಳು ಬೆಳೆಯಲಾರಂಭಿಸುತ್ತವೆ. ಮಳೆಗಾಲದಲ್ಲಿ ಆಹಾರ ಪದಾರ್ಥಗಳು ಬೇಗನೆ ಕೆಡಲು ಪ್ರಾರಂಭಿಸುತ್ತವೆ. ಅದರ ದೊಡ್ಡ ಪರಿಣಾಮವು ಮಾಂಸಾಹಾರದ ಮೇಲೆ ಇರುತ್ತದೆ. ಸೂರ್ಯನ ಬೆಳಕಿನ ಕೊರತೆ ಮತ್ತು ತೇವಾಂಶವು ತುಂಬಾ ಹೆಚ್ಚಾಗಿರುತ್ತದೆ, ಇದರಿಂದಾಗಿ ಆಹಾರ ಪದಾರ್ಥಗಳು ಬೇಗನೆ ಸೋಂಕಿಗೆ ಒಳಗಾಗುತ್ತವೆ.

ಮಳೆಗಾಲದಲ್ಲಿ ಪ್ರಾಣಿಗಳಿಗೂ ಕಾಯಿಲೆ : ಮಳೆಗಾಲದಲ್ಲಿ ಕ್ರಿಮಿ-ಕೀಟಗಳ ಕಾಟ ಹೆಚ್ಚುತ್ತಿದ್ದು, ಇದರಿಂದ ಹಲವಾರು ರೋಗಗಳು ಬರುತ್ತವೆ. ಮಳೆಗಾಲದಲ್ಲಿ ಕೋಳಿಗಳು ಹಲವಾರು ರೀತಿಯ ಕೀಟಗಳನ್ನು ಸಹ ಸೇವಿಸುತ್ತವೆ. ಇದರಿಂದಾಗಿ ಅವು ಅನಾರೋಗ್ಯಕ್ಕೆ ಒಳಗಾಗುತ್ತವೆ ಮತ್ತು ಮಾಂಸಾಹಾರವನ್ನು ಸೇವಿಸುವುದರಿಂದ ಸೋಂಕು ಮನುಷ್ಯರನ್ನು ತಲುಪುತ್ತದೆ.

ಮಳೆಗಾಲದಲ್ಲಿ ಮೀನುಗಳು ಮೊಟ್ಟೆ ಇಡುತ್ತವೆ : ಶ್ರಾವಣದಲ್ಲಿ ಸಮುದ್ರಾಹಾರವನ್ನು ತಿನ್ನುವುದು ಸಹ  ಹಾನಿಕಾರಕವಾಗಿದೆ. ಏಕೆಂದರೆ ಈ ಸಮಯದಲ್ಲಿ ಮೀನುಗಳು ಮೊಟ್ಟೆಗಳನ್ನು ಇಡುತ್ತವೆ ಮತ್ತು ಇದರಿಂದಾಗಿ ಅವುಗಳ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳು ಸಂಭವಿಸುತ್ತವೆ. ಈ ಸಮಯದಲ್ಲಿ ಸಮುದ್ರಾಹಾರವನ್ನು ತಿನ್ನುವುದು ಸರಿಯಲ್ಲ, ಏಕೆಂದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Numerology: ಈ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ತಂದೆಗೆ ಅದೃಷ್ಟವಂತರು..!

ಬೇಗ ಜೀರ್ಣವಾಗುವ ಆಹಾರವನ್ನು ಸೇವಿಸಿ‌ : ತಡವಾಗಿ ಜೀರ್ಣವಾಗುವ ಆಹಾರವನ್ನು ಮಳೆಗಾಲದಲ್ಲಿ ಸೇವಿಸಬಾರದು. ಏಕೆಂದರೆ ಈ ಆಹಾರವು ನಿಮ್ಮ ಹೊಟ್ಟೆಯಲ್ಲಿ ಬೇಗನೆ ಜೀರ್ಣವಾಗದಿದ್ದರೆ, ಅದು ಕರುಳಿನಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ ಮತ್ತು ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಋತುವಿನಲ್ಲಿ ವೇಗವಾಗಿ ಜೀರ್ಣವಾಗುವ ಆಹಾರವನ್ನು ತಿನ್ನಲು ಪ್ರಯತ್ನಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News