Who Should Not Take Vaccine: ಇಂತಹ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ

Who Should Not Take Vaccine - ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕರೋನಾ ಲಸಿಕೆ ನೀಡುವ ಅಭಿಯಾನ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಕೆಲ ಆರೋಗ್ಯ ಸಮಸ್ಯೆಗಳಿರುವ ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬಾರದು ಎನ್ನಲಾಗಿದೆ.  ಯಾರು ಈ ಲಸಿಕೆಯನ್ನು ಹಾಕಿಸಿಕೊಳ್ಳಬಾರದು ಎಂಬ ಮಾಹಿತಿ ಇಲ್ಲಿದೆ.

Written by - Nitin Tabib | Last Updated : Apr 29, 2021, 01:30 PM IST
  • ಯಾವ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬಾರದು?
  • ನೀವು ಹಾಕಿಸಿಕೊಳ್ಳುವ ವ್ಯಾಕ್ಸಿನ್ ಡೋಸ್ ಒಂದೇ ವ್ಯಾಕ್ಸಿನದ್ದಾಗಿರಲಿ.
  • ಯಾವುದೇ ರೀತಿಯ ಅಲರ್ಜಿಯ ಸಮಸ್ಯೆ ಇದ್ದರೆ ವ್ಯಾಕ್ಸಿನ್ ಹಾಕಿಸಿಕೊಳ್ಳಬಾರದು.
Who Should Not Take Vaccine: ಇಂತಹ  ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ title=
Who Should Not Take Vaccine (File Photo)

ನವದೆಹಲಿ: Who Should Not Take Vaccine - ವೇಗವಾಗಿ ಹರಡುತ್ತಿರುವ ಕೊರೊನಾ (Coronavirus) ಎರಡನೆಯ ಅಲೆಯ ಹಿನ್ನೆಲೆ  ಭಾರತ ಸರ್ಕಾರ ತನ್ನ ವ್ಯಾಕ್ಸಿನೇಷನ್ ಅಭಿಯಾನವನ್ನು (Vaccination Drive)  ಮತ್ತಷ್ಟು ಚುರುಕುಗೊಳಿಸಿದೆ. ದೆ. ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದೆ. ಆದರೆ, ಲಸಿಕೆಗೆ ಸಂಬಂಧಿಸಿದಂತೆ ಕೆಲವು ಜನರಲ್ಲಿ ಅನುಮಾನ ಮತ್ತು ಭಯದ ವಾತಾವರಣವಿದೆ. ಇದಕ್ಕೆ ಕಾರಣವೆಂದರೆ, ಇಲ್ಲಿಯವರೆಗೆ ವ್ಯಾಕ್ಸಿನೇಷನ್ ಪಡೆದ ನಂತರ, ಅನೇಕ ಜನರಲ್ಲಿ ಲಸಿಕೆಯ ಅಡ್ಡಪರಿಣಾಮಗಳನ್ನು (Vaccine side effects ಗಮನಿಸಲಾಗಿದೆ. ಅಷ್ಟೇ ಅಲ್ಲ ಲಸಿಕೆ ಪಡೆದ ಕೆಲವರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಈ ಲಸಿಕೆಯನ್ನು ಪಡೆಯಬಾರದು ಎಂಬುದರ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಲಸಿಕೆಯ ಡೋಸ್ ಗಳನ್ನು ಇಂಟರ್ ಚೇಂಜ್ ಮಾಡಬೇಡಿ 
ಪ್ರಸ್ತುತ ದೇಶಾದ್ಯಂತ ಒಟ್ಟು ಎರಡು ವ್ಯಾಕ್ಸಿನ್ ಗಳು ಬಳಕೆಯಾಗುತ್ತಿವೆ. ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ (Covaxin) ಹಾಗೂ ಸಿರಮ್ ಇನ್ಸ್ಟಿಟ್ಯೂಟ್ ನ ಕೋವಿ ಶಿಲ್ದ್ (Covishield) ಲಸಿಕೆಗಳು ದೇಶಾದ್ಯಂತ ಜನರಿಗೆ ನೀಡಲಾಗುತ್ತಿದೆ. ಈ ವ್ಯಾಕ್ಸಿನೆಶನ್ (Vaccination) ಅಭಿಯಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈ ಗೈಡ್ ಲೈನ್ಸ್ ಗಳಲ್ಲಿ ವ್ಯಾಕ್ಸಿನ್ ಪ್ರಮಾಣಗಳನ್ನು ಬದಲಾಯಿಸಬಾರದು ಎಂದು ಸಲಹೆ ನೀಡಲಾಗಿದೆ. ಅಂದರೆ, ನೀವು ಕೊವಿಶಿಎಲ್ದ ಅಥವಾ ಕೊವ್ಯಾಕ್ಸಿನ್ ಯಾವುದೇ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಮೊದಲ ಹಾಗೂ ಎರಡನೇಯ ಒಂದೇ ವ್ಯಾಕ್ಸಿನ್ ಆಗಿರಬೇಕು ಎಂದು ಹೇಳಲಾಗಿದೆ.

ಯಾರು ಈ ವ್ಯಾಕ್ಸಿನ್ ಹಾಕಿಸಿಕೊಳ್ಳಬಾರದು?
>> 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಈ ವ್ಯಾಕ್ಸಿನ್ ಬಳಸಬಾರದು.
>> ಗರ್ಭವತಿ ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರರು (Pregnant ladies and lactating women) ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬಾರದು. ಏಕೆಂದರೆ, ಗರ್ಭವತಿ ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರರ ಮೇಲೆ ವ್ಯಾಕ್ಸಿನ್ ಇದುವರೆಗೆ ಪರೀಕ್ಸಿಸಲಾಗಿಲ್ಲ
>> ಟ್ರಯಲ್ ನಲ್ಲಿ ಶಾಮೀಲಾಗಿರುವ ಯಾವುದೇ ವ್ಯಕ್ತಿಯ ಮೇಲೆ ಕೊವಿಡ್ 19 ವ್ಯಾಕಿನ್ ಬಳಕೆಯಿಂದ ಅಲರ್ಜಿ  (Any allergy) ಉಂಟಾಗಿದ್ದರೆ, ಅವರೂ ಕೂಡ ವ್ಯಾಕ್ಸಿನ್ ಪಡೆಯಬಾರದು. ಅಂದರೆ, ಮೊದಲ ಡೋಸ್ ಪಡೆದ ಮೇಲೆ ಯಾರಿಗಾದರು ಅಲರ್ಜಿ/ರಿಯಾಕ್ಷನ್ ಬಂದಿದ್ದರೆ ಅಂತವರು ಎರಡನೇ ಡೋಸ್ ತೆಗೆದುಕೊಳ್ಳಬಾರದು.
>>ಕೊವಿಡ್-19 ಸಕ್ರೀಯ ಲಕ್ಷಣಗಳು ಇರುವ ವ್ಯಕ್ತಿಗಳು, ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡ 4 ರಿಂದ 8 ವಾರಗಳ ಬಳಿಕ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು.
>>ಯಾವುದೇ ಓರ್ವ ವ್ಯಕ್ತಿ ಜ್ವರ, ಬ್ಲೀಡಿಂಗ್ ಡಿಸಾರ್ಡರ್ ನಿಂದ ಬಳಲುತ್ತಿದ್ದರೆ, ಅವರೂ ಕೂಡ ಚೇತರಿಸಿಕೊಂಡ 4 ರಿಂದ 8 ವಾರಗಳ ಬಳಿಕ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು.
>>ಪ್ಲಾಸ್ಮಾ ಥೆರಪಿ (Plasma therapy) ಅಥವಾ ಪ್ರತಿಕಾಯಗಳ ಸಹಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೂ ಕೂಡ ಅವರು ಸಂಪೂರ್ಣ ಚೇತರಿಸಿಕೊಂಡ 4 ರಿಂದ 8 ವಾರಗಳ ಬಳಿಕ ಲಸಿಕೆ ಹಾಕಿಸಿಕೊಳ್ಳಬೇಕು.
>> ಪ್ಲೇಟ್ ಲೆಟ್ಸ್ ಕಾಯಿಲೆ ಇರುವ ವ್ಯಕ್ತಿಗಳು ಅಥವಾ ಇಮ್ಯೂನ್ ಸಿಸ್ಟಮ್ ವೀಕ್ (Immunocompromised) ಇರುವ ಹಾಗೂ ಇದಕ್ಕಾಗಿ ಔಷಧಿ ಪಡೆದು ಕೊಳ್ಳುತ್ತಿರುವವರು ಕೂಡ ಸದ್ಯಕ್ಕೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ- ಕರ್ನಾಟಕದಲ್ಲಿ ಒಂದೇ ದಿನದಲ್ಲಿ 39,047 ಕೊರೊನಾ ಪ್ರಕರಣಗಳು ದಾಖಲು

ವ್ಯಾಕ್ಸಿನ್ ನ ಸಾಮಾನ್ಯ ಅಡ್ಡಪರಿಣಾಮಗಳು 
ಇದಲ್ಲದೆ ಆರೋಗ್ಯ ತಜ್ಞರು ನೀಡಿರುವ ಸಲಹೆಯ ಪ್ರಕಾರ, ಯಾವುದೇ ವ್ಯಕ್ತಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ತಮ್ಮ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ. ಒಂದು ವೇಳೆ ನಿಮಗೆ ಜ್ವರ ಅಥವಾ ಯಾವುದೇ ರೀತಿಯ ಅಲರ್ಜಿಯ ಸಮಸ್ಯೆ ಇದ್ದರೆ ಅಥವಾ ನೀವು ಯಾವುದೇ ಒಂದು ಕಾಯಿಲೆಯಿಂದ ಬಳಲುತ್ತಿದ್ದರೆ, ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದರ ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಇಂಜೆಕ್ಷನ್ ಹಾಕಿಸಿಕೊಂಡ ಜಾಗದಲ್ಲಿ ನೋವು, ಸಣ್ಣ ಪ್ರಮಾಣದ ಜ್ವರ, ತಲೆನೋವು, ಆಯಾಸದಂತಹ ಅಡ್ಡಪರಿಣಾಮಗಳು ಲಸಿಕೆ ಹಾಕಿಸಿಕೊಂಡ ಬಳಿಕ ಸಾಮನ್ಯವಾಗಿ ಕಂಡುಬರುತ್ತವೆ.

ಇದನ್ನೂ ಓದಿ- Coronavirus: ದೇಶದಲ್ಲಿ ಕರೋನಾ ಸೋಂಕಿನ ಸುನಾಮಿ 24 ಗಂಟೆಗಳಲ್ಲಿ 3.79 ಲಕ್ಷ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ದಾಖಲೆ

(ಸೂಚನೆ - ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ. ಝೀ ಹಿಂದೂಸ್ತಾನ ಯಾವುದೇ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ )

ಇದನ್ನೂ ಓದಿ-ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ, ಒಂದೇ ದಿನದಲ್ಲಿ ಕೋಟಿಗೂ ಹೆಚ್ಚು ನೋಂದಣಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News