White Hair : ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಸಮಸ್ಯೆಯೆ? ಇಲ್ಲಿದೆ ಮನೆ ನೋಡಿ ಮದ್ದು!

ಇಂದು ನಾವು ನಿಮಗೆ ನಿಮ್ಮ ಬಿಳಿ ಕೂದಲು ಸಮಸ್ಯೆಗೆ ಪರಿಹವನ್ನು ತಂದಿದ್ದವೆ. ಅದು ನೈಸರ್ಗಿಕವಾಗಿ ಮತ್ತು ಮನೆ ಮದ್ದು ಕೂಡ..

Written by - Channabasava A Kashinakunti | Last Updated : Oct 4, 2022, 05:47 AM IST
  • ಬಿಳಿ ಕೂದಲು ಸಮಸ್ಯೆಯಿಂದ ನಿರಾಶರಾಗಬೇಡಿ
  • ಎಣ್ಣೆ ತಯಾರಿಸಲು ಬೇಕಾದ ಪದಾರ್ಥಗಳು
  • ಮ್ಯಾಜಿಕ್ ಎಣ್ಣೆಯನ್ನು ಈ ರೀತಿ ತಯಾರಿಸಿ
White Hair : ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಸಮಸ್ಯೆಯೆ? ಇಲ್ಲಿದೆ ಮನೆ ನೋಡಿ ಮದ್ದು! title=

Premature White Hair​ : ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದರಿಂದ ಬಳಲುತ್ತಿರುವವರು ಮಾನಸಿಕ ಸಮಸ್ಯೆಗೆ ಕೂಡ ಬಲಿಯಾಗುತ್ತಿದ್ದಾರೆ. ಅದಕ್ಕೆ ಮಾತುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಚಿಕಿತ್ಸೆ, ಎಣ್ಣೆ ಬಳಸಲಾಗುತ್ತಿದೆ. ಆದ್ರೆ, ಯಾವುದೇ ರೀತಿಯ ಪ್ರಯೋಜನವಿಲ್ಲ, ಆದ್ದರಿಂದ ಇಂದು ನಾವು ನಿಮಗೆ ನಿಮ್ಮ ಬಿಳಿ ಕೂದಲು ಸಮಸ್ಯೆಗೆ ಪರಿಹವನ್ನು ತಂದಿದ್ದವೆ. ಅದು ನೈಸರ್ಗಿಕವಾಗಿ ಮತ್ತು ಮನೆ ಮದ್ದು ಕೂಡ..

ಬಿಳಿ ಕೂದಲು ಸಮಸ್ಯೆಯಿಂದ ನಿರಾಶರಾಗಬೇಡಿ

ಕೂದಲು ಬಿಳಿಯಾಗಲು ನಿಜವಾದ ಕಾರಣವೆಂದರೆ ಕಳಪೆ ಆಹಾರ ಮಾತ್ರವಲ್ಲ, ಅನೇಕ ರೋಗಗಳ ಪರಿಣಾಮದಿಂದಾಗಿ, ಕೂದಲು ಅಕಾಲಿಕವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಕೂದಲನ್ನು ಕಪ್ಪಾಗಿಡಲು, ನೀವು ಹೆಚ್ಚು ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ ಏಕೆಂದರೆ ಅದನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು ಮತ್ತು ದುಬಾರಿ ಉತ್ಪನ್ನಗಳ ಅಗತ್ಯವಿರುವುದಿಲ್ಲ.

ಇದನ್ನೂ ಓದಿ : ಮಲಬದ್ದತೆಯನ್ನು ನೀವು ಎಂದಿಗೂ ಸುಲಭವಾಗಿ ಪರಿಗಣಿಸಬೇಡಿ..!

ಎಣ್ಣೆ ತಯಾರಿಸಲು ಬೇಕಾದ ಪದಾರ್ಥಗಳು

ಮೊದಲನೆಯದಾಗಿ, ಒಂದು ಕಪ್ ಸಾಸಿವೆ ಎಣ್ಣೆ ಮತ್ತು ಅದರೊಂದಿಗೆ ಒಂದು ಲೋಟ ನೀರು, ಕರಿಬೇವು, ಅಲೋವೆರಾ ತುಂಡು, ಕಲೋಂಜಿ (ನಿಗೆಲ್ಲ), ಫ್ಲಾಕ್ಸ್ ಸೀಡ್ (ಅಗಸೆ ಬೀಜ) ಮತ್ತು ಕಪ್ಪು ಜೀರಿಗೆ (ಕ್ಯಾರೆವೇ ಸೀಡ್ಸ್) ಅನ್ನು ಇಟ್ಟುಕೊಳ್ಳಿ.

ಮ್ಯಾಜಿಕ್ ಎಣ್ಣೆಯನ್ನು ಈ ರೀತಿ ತಯಾರಿಸಿ

ಮೊದಲನೆಯದಾಗಿ, ಒಂದು ಲೋಟ ನೀರನ್ನು ಕುದಿಸಿ, ಕುದಿಯುತ್ತಿರುವಾಗಲೇ ಅದಕ್ಕೆ ಕರಿಬೇವಿನ ಎಲೆಗಳನ್ನು, ಅಲೋವೆರಾ ತುಂಡು ಹಾಕಿ ಮತ್ತು ಒಂದು ಚಮಚ ಅಗಸೆ ಬೀಜಗಳ ಜೊತೆಗೆ ಕಪ್ಪು ಜೀರಿಗೆ ಮತ್ತು ಫೆನ್ನೆಲ್ ಬೀಜಗಳನ್ನು ನೀರಿನಲ್ಲಿ ಹಾಕಿ. ನೀರು ಅರ್ಧಕಿಂತ ಕಡಿಮೆ ಇರುವಾಗ, ಆ ನೀರಿಗೆ ಒಂದು ಕಪ್ ಸಾಸಿವೆ ಎಣ್ಣೆಯನ್ನು ಸೇರಿಸಿ ಮತ್ತೊಮ್ಮೆ ಬಿಸಿ ಮಾಡಿ. ಅದರ ನಂತರ ಅದು ಎಣ್ಣೆಯಂತೆ ಆಗುತ್ತದೆ. ನಂತರ ವಾರಕ್ಕೆ ಎರಡು ಬಾರಿಯಾದರೂ ಈ ಎಣ್ಣೆಯನ್ನು ತಲೆಗೆ ಹಚ್ಚಿ. ಇದರಿಂದ ನೀವು ಶೀಘ್ರದಲ್ಲೇ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತರಾಗುತ್ತೀರಿ.

ಇದನ್ನೂ ಓದಿ : ಒಂದೇ ವಾರದಲ್ಲಿ ಕೂದಲು ದಟ್ಟನೆ ಬೆಳೆಯಲು ಈ ಒಣಹಣ್ಣು ತಿನ್ನಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News