Kidney ರೋಗಿಗಳಿಗೆ ಯಾವ ಉಪ್ಪು ಆರೋಗ್ಯಕರ? ಬಿಳಿ ಉಪ್ಪು ಪ್ರಾಣವನ್ನೇ ತೆಗೆಯುತ್ತದೆ

Kidney Care Tips: ಮೂತ್ರಪಿಂಡದ ಸಮಸ್ಯೆ ಇರುವವರು ಯಾವ ಉಪ್ಪನ್ನು ಸೇವಿಸಬೇಕು? ಏಕೆಂದರೆ, ಸಾಮಾನ್ಯ ಉಪ್ಪು ಸೇವನೆಯಿಂದ ಕಿಡ್ನಿ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ ಹಾಗೂ ಗಂಭೀರ ಕಾಯಿಲೆಯ ಅಪಾಯವನ್ನು ತಂದೊಡ್ಡುತ್ತದೆ.  

Written by - Nitin Tabib | Last Updated : Dec 5, 2022, 10:45 PM IST
  • ಆರೋಗ್ಯ ತಜ್ಞರ ಪ್ರಕಾರ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಉಪ್ಪು ಸೇವನೆಯ ಬಗ್ಗೆ ಗಮನ ಹರಿಸಬೇಕು.
  • ಏಕೆಂದರೆ ಉಪ್ಪಿನ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು,
  • ಇದು ಮೂತ್ರಪಿಂಡದ ರೋಗಿಗಳಿಗೆ ಹಾನಿಕಾರಕವಾಗಿದೆ.
Kidney ರೋಗಿಗಳಿಗೆ ಯಾವ ಉಪ್ಪು ಆರೋಗ್ಯಕರ? ಬಿಳಿ ಉಪ್ಪು ಪ್ರಾಣವನ್ನೇ ತೆಗೆಯುತ್ತದೆ title=
Kidney Care Tips

Health Tips For Kidney Patients: ಆಹಾರ ರುಚಿಯಾಗಿರಬೇಕಾದರೆ ಅದರಲ್ಲಿ ಮಸಾಲೆಗಳ ಪಾತ್ರ ಎಷ್ಟು ಇರುತ್ತದೆಯೋ, ಅಷ್ಟೇ ಉಪ್ಪಿನ ಪಾತ್ರವೂ ಕೂಡ ಪ್ರಮುಖವಾಗಿದೆ. ಉಪ್ಪು ಇಲ್ಲದೆ ಆಹಾರವು ಅಪೂರ್ಣವಾಗಿದೆ. ಉಪ್ಪು ಆಹಾರಕ್ಕೆ ರುಚಿ ಮತ್ತು ದೇಹಕ್ಕೆ ಅಯೋಡಿನ್ ನೀಡುತ್ತದೆ. ದೇಹದಲ್ಲಿನ ಥೈರಾಯ್ಡ್ ಗ್ರಂಥಿಯ ಕಾರ್ಯವನ್ನು ನಿಯಂತ್ರಿಸುವಲ್ಲಿ ಅಯೋಡಿನ್ ಸಹಾಯ ಮಾಡುತ್ತದೆ. ಸೋಡಿಯಂ ಉಪ್ಪಿನಲ್ಲಿ ಕಂಡುಬರುತ್ತದೆ, ಇದನ್ನು ಅತಿಯಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ, ಮೂತ್ರಪಿಂಡದ ತೊಂದರೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಬಿಳಿ ಉಪ್ಪಿನ ಅತಿಯಾದ ಸೇವನೆಯು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮಾರಕವಾಗಿದೆ. ಮೂತ್ರಪಿಂಡ ರೋಗಿಗಳಿಗೆ ಯಾವ ಉಪ್ಪು ಆರೋಗ್ಯಕರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕಲ್ಲು ಉಪ್ಪು ಒಳ್ಳೆಯದು ಎಂದು ಸಂಶೋಧನೆಯೊಂದರಲ್ಲಿ ಕಂಡುಬಂದಿದೆ. ಆರೋಗ್ಯ ತಜ್ಞರ ಪ್ರಕಾರ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಉಪ್ಪು ಸೇವನೆಯ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಉಪ್ಪಿನ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು, ಇದು ಮೂತ್ರಪಿಂಡದ ರೋಗಿಗಳಿಗೆ ಹಾನಿಕಾರಕವಾಗಿದೆ. ಆಹಾರದಲ್ಲಿ ಚಿಟಿಕೆ ಉಪ್ಪು ಸೇವಿಸಬೇಕಾದ ಪರಿಸ್ಥಿತಿ ಬಂದರೆ, ಸಾಮಾನ್ಯ ಉಪ್ಪಿನ ಬದಲು ಕಲ್ಲು ಉಪ್ಪನ್ನು ಸೇವಿಸಬಹುದು ಅಂದು ಅವರು ಹೇಳುತ್ತಾರೆ. ಇದು ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತದೆ, ಇದು ಮೂತ್ರಪಿಂಡದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ನಿಕಲ್ ಸೇರಿದಂತೆ ಕೆಲವು ಅಗತ್ಯ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿಯಾಗಿರುವ ಕಲ್ಲು ಉಪ್ಪಿನಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ-Healthy Diet: 40ನೇ ವಯಸ್ಸಿನಲ್ಲಿಯೂ 30ನೇ ವಯಸ್ಸಿನವರಂತೆ ಕಾಣಬೇಕೆ? ಆಹಾರದಲ್ಲಿ ಈ ಬದಲಾವಣೆ ಮಾಡಿ

ಸೋಡಿಯಂನಿಂದ ಹಾನಿಯಾಗುತ್ತದೆ
ವಾಸ್ತವದಲ್ಲೀ, ಸಾಮಾನ್ಯ ಉಪ್ಪಿನಲ್ಲಿ ಸೋಡಿಯಂ ಕಂಡುಬರುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಾಯಿಲೆಯ ಸಂದರ್ಭದಲ್ಲಿ, ರೋಗಿಗಳು ಕಡಿಮೆ ಸೋಡಿಯಂ ಉಪ್ಪು ಮತ್ತು ಆಹಾರವನ್ನು ಸೇವಿಸಬೇಕು ಇದರಿಂದ ಮೂತ್ರಪಿಂಡದ ಆರೋಗ್ಯವು ಉತ್ತಮವಾಗಿರುತ್ತದೆ. ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಸಮಸ್ಯೆಗಳಿಗೆ ಎರಡನೇ ದೊಡ್ಡ ಕಾರಣ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ-Health Tips: ಸಾಸಿವೆ ಕಾಳುಗಳ ಈ ಅದ್ಭುತ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯಾ?

ಕಿಡ್ನಿ ರೋಗಿಗಳು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಿನ್ನುವುದು ಮತ್ತು ಕುಡಿಯುವುದರಲ್ಲಿ ನಿರ್ಲಕ್ಷ್ಯ ತೋರಿದರೆ, ಮೂತ್ರಪಿಂಡವು ದೇಹದ ಕೊಳೆಯನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಈ ಕೊಳೆ ರಕ್ತವನ್ನು ಸೇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ದೇಹಕ್ಕೆ ಪ್ರಯೋಜನಕಾರಿಯಲ್ಲದ ರಕ್ತದಲ್ಲಿನ ಎಲೆಕ್ಟ್ರೋಲೈಟ್ನ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಮೂತ್ರಪಿಂಡದ ರೋಗಿಗಳು ಕಲ್ಲು ಉಪ್ಪನ್ನು ಸೇವಿಸಬೇಕು, ಇದರಿಂದ ಮೂತ್ರಪಿಂಡದ ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ ಮತ್ತು ದೇಹವು ರೋಗ ಮುಕ್ತವಾಗಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News