ನವದೆಹಲಿ: ಭಾರತದಲ್ಲಿ ಥೈರಾಯ್ಡ್ (Thyroid) ರೋಗಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಈ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇಂದು, 10 ಮಹಿಳೆಯರಲ್ಲಿ 2 ಮಹಿಳೆಯರು ಹೈಪೋಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ರೋಗದಲ್ಲಿ ನಿರಂತರ ತೂಕ ಹೆಚ್ಚಾಗುತ್ತದೆ. ನಂತರ ಅದನ್ನು ಕಡಿಮೆ ಮಾಡಲು ಸಾಕಷ್ಟು ಹರಸಾಹಸಪಡಬೇಕಾಗುತ್ತದೆ. ಒಂದು ವೇಳೆ ನೀವೂ ಕೂಡ ಥೈರಾಯಿಡ್ ಸಮಸ್ಯೆಯ ಕಾರಣ ಹೆಚ್ಚಾಗಿರುವ ತೂಕದಿಂದ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಕೆಲ ಸಣ್ಣ tips ಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ತೂಕವನ್ನು ನಿಯಂತ್ರಿಸಬಹುದು.
ಇದನ್ನು ಓದಿ- Health Tips: ಈ ಸಮಸ್ಯೆಗಳಿದ್ದರೆ ಅಪ್ಪಿ-ತಪ್ಪಿಯೂ ಕೂಡ ಬೆಳ್ಳುಳ್ಳಿ ಸೇವನೆ ಮಾಡಬೇಡಿ
ಬೆಳ್ಳುಳ್ಳಿ ಲಾಭಕಾರಿ
ತೂಕ ಕಡಿಮೆ ಮಾಡಲು ಬೆಳಗ್ಗೆ ಖಾಲಿ ಹೊಟ್ಟೆ ಬೆಳ್ಳುಳ್ಳಿ ಸೇವನೆ ಮಾಡಿ. ಬೇಕಾದರೆ ಇದನ್ನು ನೀವು ವೆಜಿಟೆಬಲ್ ಸೂಪ್ ನಲ್ಲಿ ಬೆರೆಸಿ ಕೂಡ ಸೇವಿಸಬಹುದು. ಈ ಸೂಪ್ ಅನ್ನು ನೀವು ಊಟಕ್ಕೂ ಮೊದಲು ಕೂಡ ಸೇವಿಸಬಹುದು.
ಗ್ರೀನ್ ಟೀ
ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ತೂಕ ಕಡಿಮೆ ಮಾಡಲು ಇದು ತುಂಬಾ ಲಾಭಕಾರಿಯಾಗಿದೆ. ಇದಕ್ಕಾಗಿ ನೀವು ಬೇಕಾದರೆ ಲೆಮನ್ ಟೀ ಕೂಡ ಸೇವಿಸಬಹುದು.
ಇದನ್ನು ಓದಿ- ಪ್ರೇಮ ನಿವೇದನೆಗಾಗಿ ಬಳಕೆಯಾಗುವ ಗುಲಾಬಿ ಹೂವಿನಿಂದ ವಾಸಿಯಾಗುತ್ತವೆ ಹಲವು ಕಾಯಿಲೆಗಳು
ಊಟದ ಕಡೆಗೆ ಹೆಚ್ಚಿನ ಗಮನ ಹರಿಸಿ
ಥೈರಾಯಿಡ್ ಸಮಸ್ಯೆ ಎದುರಿಸುತ್ತಿರುವವರು ತಮ್ಮ ತಿಂಡಿ-ತಿನಿಸುಗಳ ಕುರಿತು ಹೆಚ್ಚಿನ ಕಾಳಜಿ ವಹಿಸುವ ಆವಶ್ಯಕತೆ ಇದೆ. ಕರಿದ ಹಾಗೂ ಹುರಿದ ಪದಾರ್ಥಗಳ ಸೇವನೆಯಿಂದ ದೂರವಿರಿ. ಥೈರಾಯಿಡ್ ಸಮಸ್ಯೆ ಇರುವವರಿಗೆ ಆಹಾರ ಡೈಜೆಸ್ಟ್ ಮಾಡಲು ಕಷ್ಟಪಡಬೇಕಾಗುತ್ತದೆ. ಊಟದ ಬಳಿಕ ವಾಕ್ ಮಾಡಲು ಮರೆಯಬೇಡಿ.
ಯೋಗಾ ಮಾಡಿ
ಯೋಗ ಶರೀರಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಯೋಗ ಮಾಡುವ ಮೂಲಕ ನೀವು ನಿಮ್ಮ ಥೈರಾಯಿಡ್ ಸಮಸ್ಯೆಯನ್ನು ದೂರಮಾಡಬಹುದು. ಯೋಗ ಮಾಡಲು ನೀವು ಯುಟ್ಯೂಬ್ ಸಹಾಯ ಕೂಡ ಪಡೆಯಬಹುದು.
ತೂಕ ಕಡಿಮೆ ಮಾಡುವ ಔಷಧಿಗಳ ಸೇವನೆಯಿಂದ ತಪ್ಪಿಸಿಕೊಳ್ಳಿ
ಹಲವು ಥೈರಾಯಿಡ್ ಸಮಸ್ಯೆ ಎದುರಿಸುವ ವ್ಯಕ್ತಿಗಳು ತೂಕ ಇಳಿಕೆಗಾಗಿ ಔಷಧಿಗಳ ಮೇಲೆ ಅವಲಂಭಿಸಿರುತ್ತಾರೆ. ಹೀಗೆ ಮಾಡುವುದರಿಂದ ಅವರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆ.