ಕಣ್ಣುಗಳಲ್ಲಿಯೂ ಕಾಣಿಸುತ್ತದೆ ಮಧುಮೇಹದ ಲಕ್ಷಣಗಳು !

ಮಧುಮೇಹವಿದ್ದಾಗ  ಕಣ್ಣಿನಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನಲ್ಲಿ ಕಂಡುಬರುವ ಕೆಲವು ಲಕ್ಷಣಗಳ ಮೂಲಕ ಕೂಡಾ ಮಧುಮೇಹವಿದ್ದರೆ ಅದನ್ನು ಕಂಡುಕೊಳ್ಳಬಹುದು.   

Written by - Ranjitha R K | Last Updated : Feb 22, 2023, 09:48 AM IST
  • ಇಂದಿನ ಯುಗದಲ್ಲಿ ಮಧುಮೇಹ ಸಾಮಾನ್ಯ ಕಾಯಿಲೆಯಾಗುತ್ತಿದೆ.
  • ಈ ರೋಗ ನಾನಾ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ.
  • ಮಧುಮೆಹವಿದ್ದಾಗ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಕಣ್ಣುಗಳಲ್ಲಿಯೂ ಕಾಣಿಸುತ್ತದೆ ಮಧುಮೇಹದ ಲಕ್ಷಣಗಳು ! title=

ಬೆಂಗಳೂರು : ಇಂದಿನ ಯುಗದಲ್ಲಿ ಮಧುಮೇಹ ಸಾಮಾನ್ಯ ಕಾಯಿಲೆಯಾಗುತ್ತಿದೆ. ಈ ರೋಗ ಒಮ್ಮೆ ಕಾಣಿಸಿಕೊಂಡರೆ ಸಾಕು, ಕೊನೆಯ ಉಸಿರು ಇರುವವರೆಗೂ ಬೆನ್ನು ಬಿಡುವುದಿಲ್ಲ. ಈ ರೋಗ ನಾನಾ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಅನಾರೋಗ್ಯಕರ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಇತ್ಯಾದಿಗಳಿಂದಲೂ ಮಧುಮೇಹ ಕಾಣಿಸಿಕೊಳ್ಳುತ್ತದೆ. ಮಧುಮೇಹ ರೋಗಿಗಳ ಮೇದೋಜ್ಜೀರಕ ಗ್ರಂಥಿಯು ಕಡಿಮೆ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವುದೇ ಇಲ್ಲ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಗ್ಲೂಕೋಸ್ ಅನ್ನು ದೇಹದ ಜೀವಕೋಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮಧುಮೆಹವಿದ್ದಾಗ ರೋಗಿಯು ತನ್ನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ಜಗತ್ತಿನಲ್ಲಿ ತಮಗೆ ಮಧುಮೇಹವಿದೆ ಎಂಬುದೇ ಗೊತ್ತೇ ಇಲ್ಲದ ಅನೇಕ ಜನರಿದ್ದಾರೆ. ಮಧುಮೇಹ ಇರುವಾಗ, ವ್ಯಕ್ತಿಗೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕು ಅನ್ನಿಸುತ್ತದೆ, ಅತಿಯಾದ ಬಾಯಾರಿಕೆ, ನಿರಂತರ ಹಸಿವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಧುಮೇಹವಿದ್ದಾಗ  ಕಣ್ಣಿನಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನಲ್ಲಿ ಕಂಡುಬರುವ ಕೆಲವು ಲಕ್ಷಣಗಳ ಮೂಲಕ ಕೂಡಾ ಮಧುಮೇಹವಿದ್ದರೆ ಅದನ್ನು ಕಂಡುಕೊಳ್ಳಬಹುದು.   

ಇದನ್ನೂ ಓದಿ : Breakfast Tips : ಬೆಳಗಿನ ಉಪಾಹಾರದಲ್ಲಿ ತಪ್ಪದೆ ಕಿನ್ನೋ ಜ್ಯೂಸ್ ಕುಡಿಯಿರಿ, ಆರೋಗ್ಯವಾಗಿರಿ!

ಕ್ಯಾಟರಾಕ್ಟ್ :
ಅಕಾಲಿಕ ಕಣ್ಣಿನ ಪೊರೆ ಸಮಸ್ಯೆ ಮಧುಮೇಹದ ಸಂಕೇತವಾಗಿರಬಹುದು. ಮಧುಮೇಹ ರೋಗಿಗಳಲ್ಲಿ, ಈ ಸಮಸ್ಯೆಯು ಸಮಯಕ್ಕಿಂತ ಮುಂಚೆಯೇ  ಕಾಣಿಸಿಕೊಳ್ಳುತ್ತದೆ. ಮಧುಮೇಹವಿದ್ದಾಗ ಈ ಸಮಸ್ಯೆಯು ತುಂಬಾ ಹೆಚ್ಚಾಗಬಹುದು.

ದೃಷ್ಟಿ ಮಂದವಾಗುವುದು : 
ಮಂದ ದೃಷ್ಟಿ ಮಧುಮೇಹದ ಲಕ್ಷಣವೂ ಆಗಿರಬಹುದು. ನಿಮ್ಮ ದೃಷ್ಟಿ ಸ್ಪಷ್ಟವಾಗಿಲ್ಲ ಎಂದಾದರೆ ತಕ್ಷಣ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ  ಈ ಸಮಸ್ಯೆಯನ್ನು ಗುಣಪಡಿಸಬಹುದು. ಕೆಲವೊಮ್ಮೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾಗಬಹುದು. 

ಇದನ್ನೂ ಓದಿ : Health Tips : ಇಂದೇ ಈ ಪದಾರ್ಥ ಬಿಡಿ, ಇಲ್ಲದಿದ್ದರೆ ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ!

ಡಯಾಬಿಟಿಕ್ ರೆಟಿನೋಪತಿ :
ಡಯಾಬಿಟಿಕ್ ರೆಟಿನೋಪತಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರೆಟಿನಾವನ್ನು ಬಾಧಿಸುವ ಸಮಸ್ಯೆಯಾಗಿದೆ. ರೆಟಿನಾಕ್ಕೆ ರಕ್ತವನ್ನು ಪೂರೈಸುವ ನರಗಳು ಹಾನಿಗೊಳಗಾದಾಗ ಈ ಸ್ಥಿತಿಯು ಸಂಭವಿಸುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಕಣ್ಣು ಕುರುಡಾಗಲೂಬಹುದು.

ಗ್ಲುಕೋಮಾ :
ಈ ಸಮಸ್ಯೆಯಲ್ಲಿ, ದ್ರವವು ಕಣ್ಣುಗಳಿಂದ ಹೊರಬರುವುದಿಲ್ಲ, ಇದರಿಂದಾಗಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ರಕ್ತ ಕಣಗಳು ಮತ್ತು ಕಣ್ಣುಗಳ ನರಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ  ದೃಷ್ಟಿ ಸಮಸ್ಯೆ ಎದುರಾಗಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News