High Blood Sugar ಅನ್ನು ನಿಯಂತ್ರಣದಲ್ಲಿಡಬೇಕೇ? ರಾತ್ರಿ ಊಟದ ಬಳಿಕ ಈ ಒಂದು ಕೆಲಸ ಮಾಡಿ!

Diabetes Control Tips: ಸಾಮಾನ್ಯವಾಗಿ ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ಅನೇಕ ಬಾರಿ ಅಪೇಕ್ಷಿತ ಫಲಿತಾಂಶವನ್ನು ಅವರಿಗೆ ಸಿಗುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಊಟದ ನಂತರ ವಿಶೇಷ ಕೆಲಸವನ್ನು ಮಾಡಿ ನೀವು ಮಧುಮೇಹವನ್ನು ನಿಯಂತ್ರಿಸಬಹುದು.  

Written by - Nitin Tabib | Last Updated : Apr 9, 2023, 03:42 PM IST
  • ಎಣ್ಣೆಯುಕ್ತ ಮತ್ತು ಸಿಹಿ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ,
  • ಇದರಿಂದಾಗಿ ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.
  • ವಿಶೇಷವಾಗಿ ಮಧುಮೇಹ ರೋಗಿಗಳು ಅನಾರೋಗ್ಯಕರ ಆಹಾರದಿಂದ ದೂರವಿರಬೇಕು
High Blood Sugar ಅನ್ನು ನಿಯಂತ್ರಣದಲ್ಲಿಡಬೇಕೇ? ರಾತ್ರಿ ಊಟದ ಬಳಿಕ ಈ ಒಂದು ಕೆಲಸ ಮಾಡಿ! title=
ಮಧುಮೇಹ ನಿಯಂತ್ರಣಕ್ಕೆ ಸಲಹೆಗಳು

Blood Sugar Level Control: ಮಧುಮೇಹವು ಅತ್ಯಂತ ಸಂಕೀರ್ಣವಾದ ಕಾಯಿಲೆಗಳಲ್ಲಿ ಒಂದಾಗಿದೆ, ಇದರಲ್ಲಿ ರೋಗಿಗಳು ಯಾವಾಗಲೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಕ್ಷೀಸುತ್ತಲೇ ಇರಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ತೀವ್ರ ಹಾನಿಯಾಗಬಹುದು ಮತ್ತು ಅನೇಕ ರೋಗಗಳಿಗೆ ಇದು ಆಮಂತ್ರಣವನ್ನು ನೀಡುತ್ತದೆ. ಇದಲ್ಲದೆ ಕೆಲ ಮಾರಣಾಂತಿಕ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಇದಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿ ಮತ್ತು ಸಮತೋಲಿತ ಜೀವನಶೈಲಿ ತುಂಬಾ ಮುಖ್ಯ, ಪ್ರಸ್ತುತ ಯುಗದಲ್ಲಿ ಇದರ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಆದಾಗ್ಯೂ, ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರುವ ಜನರು ಆರೋಗ್ಯಕರ ದಿನಚರಿಯನ್ನು ಅನುಸರಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ, ಏಕೆಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಮೂಲಕ ಗ್ಲೂಕೋಸ್ ಮಟ್ಟವನ್ನು ಸರಿಪಡಿಸಬಹುದು.

ಊಟದ ನಂತರ ಈ ಕೆಲಸವನ್ನು ಮಾಡಿ
ರಾತ್ರಿಯ ಊಟವು ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ, ಈ ಸಮಯದಲ್ಲಿ ಮಧುಮೇಹ ರೋಗಿಗಳು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾತ್ರಿಯಲ್ಲಿ ಆರೋಗ್ಯಕರ ಊಟವನ್ನು ಮಾಡಿದ ನಂತರ, ಒಂದು ಮುಖ್ಯವಾದ ಕೆಲಸವನ್ನು ಮಾಡಬೇಕು. ರಾತ್ರಿಯ ಊಟದ ನಂತರ 10 ರಿಂದ 15 ನಿಮಿಷಗಳ ಕಾಲ ವಾಕ್ ಮಾಡಬೇಕು ಎಂದು ಅನೇಕ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸುಲಭವಾಗುತ್ತದೆ. ನೀವು ನಿಯಮಿತವಾಗಿ ಈ ದಿನಚರಿಯನ್ನು ಅನುಸರಿಸಿದರೆ, ಅದರ ಪರಿಣಾಮವು ಕೆಲವೇ ದಿನಗಳಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ-ಯುವಕರಲ್ಲಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಉಂಟಾಗುತ್ತಿದೆ ಈ ಸಮಸ್ಯೆ!
 
ಈ ವಿಷಯಗಳನ್ನು ಕೂಡ ಗಮನದಲ್ಲಿಡಿ
ಹಸಿವನ್ನು ನಿರ್ಲಕ್ಷಿಸಬೇಡಿ

ಆಗಾಗ್ಗೆ ನಾವು ನಮ್ಮ ಕೆಲಸದಲ್ಲಿ ಎಷ್ಟು ನಿರತರಾಗುತ್ತೇವೆ ಎಂದರೆ ನಾವು ಊಟದ ವೇಳೆಯ ಕಡೆಗೆ ಗಮನವನ್ನೇ ಹರಿಸುವುದಿಲ್ಲ, ಆದರೆ ಹಸಿವನ್ನು ನಿರ್ಲಕ್ಷಿಸುವುದು ಮಧುಮೇಹ ರೋಗಿಗಳಿಗೆ ದೊಡ್ಡ ತಪ್ಪು ಎಂದು ಸಾಬೀತಾಗಬಹುದು. ವೈದ್ಯರು ಸಾಮಾನ್ಯವಾಗಿ ಈ ಸಲಹೆಯನ್ನು ಶಿಫಾರಸು ಮಾಡುತ್ತಾರೆ. ಹೀಗಾಗಿ ಸ್ವಲ್ಪ ಹಸಿವಾದಾಗ ಹಣ್ಣುಗಳು, ಕಾಳುಗಳು, ಸಲಾಡ್ ಅಥವಾ ಆರೋಗ್ಯಕರ ತಿಂಡಿಗಳನ್ನು ತಿನ್ನಬೇಕು. ನೀವು ಹಸಿವಿನ ಕಡುಬಯಕೆಗಳನ್ನು ನಿರ್ಲಕ್ಷಿಸಿದರೆ, ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಉಳಿಯುವುದಿಲ್ಲ.

ಇದನ್ನೂ ಓದಿ-ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ವರದಾನ ಹಸಿರು ಬಾಳೆ!

ಅನಾರೋಗ್ಯಕರ ಆಹಾರದಿಂದ ದೂರವಿರಲಿ
ಎಣ್ಣೆಯುಕ್ತ ಮತ್ತು ಸಿಹಿ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಇದರಿಂದಾಗಿ ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳು ಅನಾರೋಗ್ಯಕರ ಆಹಾರದಿಂದ ದೂರವಿರಬೇಕು ಮತ್ತು ಆರೋಗ್ಯಕರ ಆಹಾರದ ಸಂಪೂರ್ಣ ಪಟ್ಟಿಯನ್ನು ತಮ್ಮ ಆಹಾರ ತಜ್ಞರಿಂದ ತಿಳಿದುಕೊಳ್ಳಬೇಕು, ಆಗ ಮಾತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News