ಬೆಂಗಳೂರು : ನಾವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ. ಅದರಲ್ಲೂ ಹೊಟ್ಟೆ ಭಾಗದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟವಾಗುತ್ತದೆ. ತೂಕ ಇಳಿಸಿಕೊಳ್ಳಲು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರುವುದು ಬಹಳ ಮುಖ್ಯ. ನಾವು ಅನುಸರಿಸುವ ಆಹಾರಕ್ರಮವೇ ನಮ್ಮ ತೂಕ ಹೆಚ್ಚಾಗಲು ಮುಖ್ಯ ಕಾರಣ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ತೂಕವನ್ನು ಕಳೆದುಕೊಳ್ಳುವುದು ಪ್ರತಿಯೊಬ್ಬರೂ ಎದುರಿಸುವ ಸವಾಲು. ದೇಹದ ಕೊಬ್ಬನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ.
ತೂಕವನ್ನು ಕಳೆದುಕೊಳ್ಳಲು ಕೆಲವು ವಿಶಿಷ್ಟ ವಿಧಾನಗಳನ್ನು ಅನುಸರಿಸಬೇಕು. ದಿನನಿತ್ಯ ಸೇವಿಸುವ ಕೆಲವು ತರಕಾರಿಗಳು ಕೂಡಾ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅನಾರೋಗ್ಯಕರ ಅಭ್ಯಾಸಗಳಿಂದಾಗಿ, ಹೆಚ್ಚಿನ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ತೂಕ ಇಳಿಸಿಕೊಳ್ಳಲು ನಾವು ಮಾಡುವ ಕೆಲವು ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.
ಇದನ್ನೂ ಓದಿ : Bay Leaf : ಸ್ವಾದ ಮಾತ್ರವಲ್ಲ ಆರೋಗ್ಯದ ನಿಧಿ ಈ ಎಲೆ.. ಹೀಗೆ ಬಳಸಿದ್ರೆ 5 ರೋಗಗಳಿಗೆ ಸಿಗುವುದು ಮುಕ್ತಿ!
ನಾವು ನಮ್ಮ ತೂಕ ನಷ್ಟ ಪ್ರಯತ್ನಗಳಲ್ಲಿ ತರಕಾರಿಗಳನ್ನು ಬಳಸಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇವುಗಳ ಬಳಕೆಯಿಂದ ಹೆಚ್ಚಾದ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕೆಲವು ತರಕಾರಿಗಳ ಬಗೆಗಿನ ಮಾಹಿತಿ ಇಲ್ಲಿದೆ. ಈ ತರಕಾರಿಗಳನ್ನು ಸೇವಿಸುವ ಮೂಲಕ ತೂಕವನ್ನು ನಿಯಂತ್ರಿಸಬಹುದು. ಹಾಗಿದ್ದರೆ ದೇಹದ ತೂಕವನ್ನು ತ್ವರಿತವಾಗಿ ನಿಯಂತ್ರಿಸಲು ಯಾವ ಹನ್ನು ತರಕಾರಿಯನ್ನು ಸೇವಿಸಬೇಕು ನೋಡೋಣ.
ಇದನ್ನೂ ಓದಿ : ಕೆಂಪಕ್ಕಿ ಅನ್ನವನ್ನೊಮ್ಮೆ ತಿಂದು ನೋಡಿ ಈ ಎಲ್ಲಾ ರೋಗಗಳು ಮಾಯವಾಗಿ ಬಿಡುತ್ತವೆ
1. ಚೀನೀಕಾಯಿ ರಸ :
ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಚೀನೀಕಾಯಿ ತಿನ್ನುವುದು ಒಳ್ಳೆಯದು. ಕುಂಬಳಕಾಯಿಯನ್ನು ಸಾಂಬಾರ್, ಪಲ್ಯ ರೀತಿಯಲ್ಲಿ ಸೇವಿಸಬಹುದು. ಅಥವಾ ಕುಂಬಳಕಾಯಿಯನ್ನು ಜ್ಯೂಸ್ ಮಾಡಿ ಕುಡಿಯಬಹುದು. ಚೀನೀಕಾಯಿ ಅತ್ಯಂತ ಪ್ರಯೋಜನಕಾರಿ ಹಣ್ಣು. ಆದ್ದರಿಂದ ಇದನ್ನು ಸೇವಿಸುವುದರಿಂದ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು.
2. ಸೌತೆಕಾಯಿ :
ಸೌತೆಕಾಯಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನೀರಿನ ಅಂಶ ಕಂಡು ಬರುತ್ತದೆ. ಸೌತೆಕಾಯಿಯನ್ನು ತಿನ್ನುವ ಮೂಲಕ ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಬಹುದು. ಇದು ಶೂನ್ಯ ಕ್ಯಾಲೋರಿಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳಲು ಸೌತೆಕಾಯಿ ಕೂಡ ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ : Health Tips: ಎಕ್ಕದ ಎಲೆಗಳನ್ನು ಈ ರೀತಿ ಬಳಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?
3. ಹಾಗಲಕಾಯಿ :
ಹಾಗಲಕಾಯಿಯ ರುಚಿಯ ಕಾರಣದಿಂದ ಇದನ್ನೂ ಅನೇಕ ಮಂದಿ ತಿನ್ನಲು ಇಷ್ಟಪಡುವುದಿಲ್ಲ. ಇದನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಮಧುಮೇಹಿಗಳು ಹಾಗಲಕಾಯಿಯನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಅಂತೆಯೇ, ತೂಕ ಇಳಿಸಿಕೊಳ್ಳಲು ಕೂಡಾ ಹಾಗಲಕಾಯಿ ಸಹಕಾರಿ. ಹಾಗಲಕಾಯಿ ರುಚಿಯಲ್ಲಿ ಕಹಿ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ತಮ್ಮ ಆಹಾರದಲ್ಲಿ ಹಾಗಲಕಾಯಿ ಸೇವಿಸುವಂತೆ ಹೇಳಲಾಗುತ್ತದೆ.
4. ಹೆಸರುಕಾಳು
ಹೆಸರುಕಾಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಇದನ್ನು ಸಾಂಬಾರ್ ಮಾಡಿ, ಪಾಲಿ ಮಾಡಿ ಅಥವಾ ಮೊಳಕೆ ಬರಿಸಿ ಸೇವಿಸಬಹುದು.
ಇದನ್ನೂ ಓದಿ : Sunflower Seeds: ಸೂರ್ಯಕಾಂತಿ ಹೂ, ಬೀಜಗಳ ಪ್ರಯೋಜನ ಅಪಾರ...!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.