ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮೆದುಳಿನ ಕ್ಯಾನ್ಸರ್‌ಗೆ ಕಾರಣ..!? WHO ಶಾಕಿಂಗ್‌ ವರದಿ ಬಹಿರಂಗ

Is using phone cause cancer : ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್‌ಗಳನ್ನು ಬಳಸುವುದರಲ್ಲೇ ಕಳೆಯುತ್ತಾರೆ. ಮೊಬೈಲ್ ಫೋನ್‌ಗಳನ್ನು ಹೆಚ್ಚು ಹೊತ್ತು ನೋಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಅಲ್ಲದೆ, ಕೆಲವು ವರದಿಗಳಲ್ಲಿ, ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚರಿಸಿವೆ..  

Written by - Krishna N K | Last Updated : Sep 12, 2024, 07:01 PM IST
    • ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್‌ಗಳನ್ನು ಬಳಸುವುದರಲ್ಲೇ ಕಳೆಯುತ್ತಾರೆ
    • ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ
    • ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ
ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮೆದುಳಿನ ಕ್ಯಾನ್ಸರ್‌ಗೆ ಕಾರಣ..!? WHO ಶಾಕಿಂಗ್‌ ವರದಿ ಬಹಿರಂಗ title=

Cell Phones Cancer Risk Fact : ಇಂದಿನ ಆಧುನಿಕ ಜೀವನದಲ್ಲಿ ಸ್ಮಾರ್ಟ್ ಫೋನ್ ಇಲ್ಲದವರನ್ನು ಬಡವರು ಎಂದು ಹೇಳುವಷ್ಟರ ಮಟ್ಟಿಗೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಲವಾರು ವರದಿಗಳಿಂದ ಬಹಿರಂಗಗೊಂಡಿವೆ.

ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್ ಬಳಸುತ್ತಾರೆ. ಮೊಬೈಲ್ ಫೋನ್ ಅನ್ನು ಹೆಚ್ಚು ಹೊತ್ತು ನೋಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನಗಳು ತೋರಿಸಿವೆ. ಅಲ್ಲದೆ, ಕೆಲವು ವರದಿಗಳಲ್ಲಿ, ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮತ್ತು ಆಗಾಗ್ಗೆ ಇಯರ್‌ಪೋನ್‌ಗಳಲ್ಲಿ ಮಾತನಾಡುವುದು ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ:ಈ ತರಕಾರಿ ಸಿಪ್ಪೆ ಸಮೇತ ಕಚ್ಚಿ ತಿಂದರೆ ಸಾಕು.. ಗಂಟುಗಳಲ್ಲಿನ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುತ್ತದೆ!

ಮೊಬೈಲ್ ಫೋನ್‌ಗಳ ಬಳಕೆಯು ನಿಜವಾಗಿಯೂ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆಯೇ..? ಎಂದು ಅಧ್ಯಯನವನ್ನು ಇತ್ತೀಚೆಗೆ ನಡೆಸಲಾಯಿತು. ಮೊಬೈಲ್ ಫೋನ್‌ಗಳಿಂದ ಮೆದುಳು ಮತ್ತು ತಲೆಗೆ ಕ್ಯಾನ್ಸರ್ ಬರುವ ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯನ್ ವಿಕಿರಣ ರಕ್ಷಣೆ ಮತ್ತು ಪರಮಾಣು ಸುರಕ್ಷತಾ ಸಂಸ್ಥೆ (ARPANSA) ನೇತೃತ್ವದಲ್ಲಿ ಅಧ್ಯಯನವನ್ನು ನಡೆಸಲಾಯಿತು, ಇದು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧಕರ ಅಧ್ಯಯನಗಳ ಸಮಗ್ರ ವಿಮರ್ಶೆಯಾಗಿದೆ. ಇದಕ್ಕಾಗಿ, ಸಂಶೋಧಕರು ಮೊಬೈಲ್ ಫೋನ್ ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ 5,000 ಕ್ಕೂ ಹೆಚ್ಚು ಅಧ್ಯಯನಗಳನ್ನು ನಡೆಸಿದರು. ಅಂತಿಮ ವಿಶ್ಲೇಷಣೆಯಲ್ಲಿ, 1994 ಮತ್ತು 2022 ರ ನಡುವೆ ಮಾನವರಲ್ಲಿ ಮೊಬೈಲ್ ಫೋನ್‌ಗಳ ಅಡ್ಡಪರಿಣಾಮಗಳ ಕುರಿತು 63 ಅಧ್ಯಯನಗಳನ್ನು ನಡೆಸಲಾಯಿತು.

ಇದನ್ನೂ ಓದಿ:ವೈರಲ್ ಜ್ವರದಿಂದ ನೀವು ಹೈರಾಣಾಗಿದ್ದಿರಾ? ಚಿಂತಿಸಬೇಡಿ, ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ..!

ಕ್ಯಾನ್ಸರ್ ತಜ್ಞ ಮತ್ತು ವಿಮರ್ಶೆಯ ಸಹ-ಲೇಖಕ ಪ್ರೊಫೆಸರ್ ಮಾರ್ಕ್ ಎಲ್ವುಡ್ ಪ್ರಕಾರ, ಬಹು ಹಂತದ ತನಿಖೆಯ ಆಧಾರದ ಮೇಲೆ, ಮೊಬೈಲ್ ಫೋನ್‌ಗಳು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಮೊಬೈಲ್ ಫೋನ್‌ಗಳಿಂದ ಹೊರಸೂಸುವ ಅಲೆಗಳನ್ನು ಕಾರ್ಸಿನೋಜೆನಿಕ್ ಎಂದು ವರ್ಗೀಕರಿಸುತ್ತದೆ, ಅಂದರೆ ವರ್ಗ 2B. ಆದರೆ ಇದು ನೇರವಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News