ಎರಡೇ ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಈ ಮ್ಯಾಜಿಕ್ ಡ್ರಿಂಕ್ !ನಿತ್ಯ ಒಂದು ಲೋಟ ಕುಡಿದರೆ ಸಾಕು !

ಏನೇ ಮಾಡಿದರೂ ಕೆಲವೊಮ್ಮೆ ನಾವು ನಿರೀಕ್ಷಿಸಿದ ಫಲಿತಾಂಶ ಸಿಗುವುದಿಲ್ಲ.ಇಂಥ ಸಂದರ್ಭದಲ್ಲಿ ಕೆಲವು ಸರಳ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. 

Written by - Ranjitha R K | Last Updated : Apr 22, 2024, 04:18 PM IST
  • ತೂಕ ಹೆಚ್ಚಾದರೆ ಅನೇಕ ರೀತಿಯ ದೈಹಿಕ ಸಮಸ್ಯೆಯ ಅಪಾಯ ಕೂಡಾ ಹೆಚ್ಚುತ್ತದೆ.
  • ಕಾಡುತ್ತದೆ ತೂಕ ಹೆಚ್ಚಳ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹದಂಥಹ ಸಮಸ್ಯೆ
  • ತೂಕ ಇಳಿಸಿಕೊಳ್ಳಲು ಅನೇಕ ರೀತಿಯ ಕಸರತ್ತು
ಎರಡೇ ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಈ ಮ್ಯಾಜಿಕ್ ಡ್ರಿಂಕ್ !ನಿತ್ಯ ಒಂದು ಲೋಟ ಕುಡಿದರೆ ಸಾಕು ! title=

ಬೆಂಗಳೂರು : ದೇಹದ ತೂಕ ಹೆಚ್ಚಾದರೆ ಅನೇಕ ರೀತಿಯ ದೈಹಿಕ ಸಮಸ್ಯೆಯ ಅಪಾಯ ಕೂಡಾ ಹೆಚ್ಚುತ್ತದೆ. ಅನಾರೋಗ್ಯಕರ ಆಹಾರ ಮತ್ತು ಕಳಪೆ ಜೀವನಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ.ಯಾವಾಗ ಬೇಕು ಆವಾಗ ತಿನ್ನುವುದು, ಮನಸ್ಸಿಗೆ ಬಂದ ಸಮಯದಲ್ಲಿ ಮಲಗುವುದು ಹೀಗೆ ಗೊತ್ತು ಗುರಿಯಿಲ್ಲದ ದಿನಚರಿ ಅನುಸರಿಸಿಕೊಂಡು ಬದುಕುವುದರಿಂದ ಅನೇಕ ಜನರ ತೂಕ ಹೆಚ್ಚಾಗುತ್ತದೆ. 

ಅನೇಕ ಜನರು ತೂಕ ಹೆಚ್ಚಳ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹದಂಥಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ತೂಕ ಇಳಿಸಿಕೊಳ್ಳಲು ಅನೇಕ ರೀತಿಯ ಕಸರತ್ತುಗಳನ್ನು ಕೂಡಾ ಮಾಡುತ್ತಾರೆ. ಏನೇ ಮಾಡಿದರೂ ಕೆಲವೊಮ್ಮೆ ನಾವು ನಿರೀಕ್ಷಿಸಿದ ಫಲಿತಾಂಶ ಸಿಗುವುದಿಲ್ಲ.ಇಂಥ ಸಂದರ್ಭದಲ್ಲಿ ಕೆಲವು ಸರಳ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.  

ಇದನ್ನೂ  ಓದಿ :Calcium Drinks: ನಿಮ್ಮ ಮೂಳೆಗಳನ್ನು ಬಲವನ್ನು ಹೆಚ್ಚಿಸಲು ಕ್ಯಾಲ್ಸಿಯಂ ಸಮೃದ್ಧ ಉತ್ತಮ ಪಾನಿಯಗಳು ಕುಡಿಯಿರಿ!

ಪ್ರತಿದಿನ ಬೆಳಿಗ್ಗೆ ಮೆಂತ್ಯೆ ಮತ್ತು ಸೋಂಪು ನೀರನ್ನು ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.ಈ ಎರಡು ಮಸಾಲೆಗಳಿಂದ ತಯಾರಿಸಿದ ನೀರು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 

ತೂಕ ನಷ್ಟಕ್ಕೆ  ಈ ಮ್ಯಾಜಿಕ್ ಡ್ರಿಂಕ್ : 
- ರಾತ್ರಿ 1 ಕಪ್ ನೀರಿನಲ್ಲಿ 1 ಚಮಚ ಶುಂಠಿ ಮತ್ತು 1 ಚಮಚ ಮೆಂತ್ಯೆಯನ್ನು ಹಾಕಿ  ನೆನೆಸಿಡಿ.
- ಬೆಳಿಗ್ಗೆ ಎದ್ದ ನಂತರ ಇದನ್ನು ಫಿಲ್ಟರ್ ಮಾಡಿ ಉಳಿದ ನೀರನ್ನು ಮಾತ್ರ ಕುಡಿಯಬೇಕು.
- ಈ ನೀರು ಕಹಿಯಾಗಿದ್ದರೆ, ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.
- ನೀರು ಕುಡಿದ ನಂತರ, ಈ ನೆನೆಸಿದ ಬೀಜಗಳನ್ನು ಅಗಿದು ತಿನ್ನಬೇಕು.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ  ಓದಿ :ಮೊಸರಿನೊಂದಿಗೆ ಬೆಲ್ಲ ಬೆರೆಸಿ ತಿನ್ನಿ!ಈ ಕಾಯಿಲೆಗಳಿಗೆ ಔಷಧಿಯೇ ಬೇಕಿಲ್ಲ

ಮೆಂತ್ಯೆ ಮತ್ತು ಸೋಂಪು ನೀರಿನ ಪ್ರಯೋಜನಗಳು : 
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ಮತ್ತು ಮೆಂತ್ಯೆ ನೀರನ್ನು ಕುಡಿಯುವುದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ದೇಹದಿಂದ ಎಲ್ಲಾ ರೀತಿಯ ತ್ಯಾಜ್ಯವನ್ನು ಕ್ರಮೇಣ ಹೊರಹಾಕಲ್ಪಡುತ್ತವೆ. ಆದರೆ,ಈ ನೀರನ್ನು ನಿರಂತರವಾಗಿ 15 ದಿನಗಳಿಗಿಂತ ಹೆಚ್ಚು ಕಾಲ ಕುಡಿಯಬಾರದು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಮೆಂತ್ಯೆ  ಮತ್ತು ಸೋಂಪು ಎರಡೂ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ದವಾಗಿವೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮೆಂತ್ಯೆ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ತೂಕ ನಷ್ಟದಲ್ಲಿ ಉಪಯುಕ್ತ : ನಿಯಮಿತವಾಗಿ ಮೆಂತ್ಯೆ  ಮತ್ತು ಸೋಂಪು ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಇದು ತೂಕ ನಷ್ಟ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.ಉತ್ತಮ ಫಲಿತಾಂಶಗಳಿಗಾಗಿ ಇದರ ಬೀಜಗಳನ್ನು ಅಗಿಯಬಹುದು.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News