ಮಲಬದ್ಧತೆಯೇ? ಇಲ್ಲಿದೆ ಪರಿಹಾರ!

ಆಹಾರದಲ್ಲಿ ಮುಖ್ಯವಾಗಿ ಧಾನ್ಯ-ಬೇಳೆಕಾಳು, ತರಕಾರಿ, ಹಣ್ಣು-ಹಂಪಲುಗಳ ಸೇವನೆಯಿಂದ ಮಲಬದ್ಧತೆ ನಿವಾರಿಸಿ.

Last Updated : Dec 19, 2017, 12:10 PM IST
ಮಲಬದ್ಧತೆಯೇ? ಇಲ್ಲಿದೆ ಪರಿಹಾರ! title=

ಇಂದಿನ ಆಧುನಿಕ ಸಮಾಜದಲ್ಲಿ ಜನರ ಜೀವನ ಕ್ರಮ, ಆಹಾರ ಕ್ರಮದ ಬದಲಾವಣೆಯಿಂದಾಗಿ ಜನ ಅತಿ ಹೆಚ್ಚು ಅನಾರಾಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಹೆಚ್ಚು ಜನರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾರೆ. ಇದರಿಂದ ತಲೆನೋವು, ಹೊಟ್ಟೆನೋವು ಮೊದಲಾದ ಇತರ ಸಮಸ್ಯೆಗಳೂ ಉಲ್ಬಣಗೊಳ್ಳುತ್ತವೆ. 

ಹಾಗಾಗಿ ಆಹಾರದಲ್ಲಿ ಮುಖ್ಯವಾಗಿ ಧಾನ್ಯ-ಬೇಳೆಕಾಳು, ತರಕಾರಿ, ಹಣ್ಣು-ಹಂಪಲುಗಳ ಸೇವನೆ ಅತ್ಯಗತ್ಯ. ಇದರೊಂದಿಗೆ ಮಲಬದ್ಧತೆಯನ್ನು ತಡೆಗಟ್ಟುವ ಕೆಲವು ಸಲಹೆಗಳು ನಿಮಗಾಗಿ :

  • ಮೈದಾ ಹಾಗೂ ಸೂಕ್ಷ್ಮಗೊಳಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಬೇಡಿ.
  • ಹೊಟ್ಟುಸಹಿತ ಹಿಟ್ಟು ಬಳಸಿ ತಯಾರಿಸಿದ ಆಹಾರ ಸೇವಿಸಬೇಕು.
  • ಹೆಚ್ಚು ಪಾಲಿಶ್ ಮಾಡಿದ ಅಕ್ಕಿ ಬಳಸಬೇಡಿ. ಏಕೆಂದರೆ ಅದರಲ್ಲಿ ಜೀವಸತ್ವ ಕಡಿಮೆ ಇರುವುದಲ್ಲದೆ ಜೀರ್ನವಾಗುವುದೂ ಕಷ್ಟ.
  • ಧಾನ್ಯ-ಬೇಳೆಕಾಳು, ತರಕಾರಿಗಳನ್ನೂ ಹೆಚ್ಚಾಗಿ ಸೇವಿಸಿ. ಆಯಾ ಋತುಗಳಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸಿ. ಇದು ಮಲಬದ್ಧತೆ ನಿವಾರಿಸುವ ಮೂಲ ಮಂತ್ರ.
  • ಮುಳ್ಳುಸೌತೆಕಾಯಿ, ಸೌತೆಕಾಯಿ, ಗಜ್ಜರಿ, ಟೊಮ್ಯಾಟೊ, ಪಾಲಕ್ ಅನ್ನು ಬೇಯಿಸದೆ ಹಸಿಯಾಗಿಯೇ ಸೇವಿಸಿ. ಇವುಗಳ ಸಣ್ಣ ತುಂಡುಗಳಿಗೆ ಉಪ್ಪು ನಿಂಬೆರಸ ಬೆರೆಸಿದರೆ, ಅದಕ್ಕೆ ಹೊಸ ರುಚಿ ಬರುತ್ತದೆ, ಹೊಸ ಖಾದ್ಯವೂ ಆಗುತ್ತದೆ.
  • ಹಣ್ಣು ಸೇವಿಸುವುದು ಆಹಾರದ ಅವಿಭಾಜ್ಯ ಅಂಗವಾಗಬೇಕು. ಮುಂಜಾನೆಯ ಬ್ರೆಕ್‌ಫಾಸ್ಟ್‌ಗೆ ಒಂದು ಹಣ್ಣು ಇರಲಿ. ಜೊತೆಗೆ ಹಾಲು ಸೇವಿಸಬಹುದು. ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಹಣ್ಣು ಇರಲಿ. ಹಣ್ಣು ತಾಜಾ ಇರಬೇಕು, ಇಲ್ಲದಿದ್ದರೆ ಅವುಗಳಿಂದ ಲಾಭವಾಗುವುದಿಲ್ಲ.
  • ದಿನಕ್ಕೆ ಕನಿಷ್ಠ 3 ರಿಂದ 5 ಲೀಟರ್ ನೀರನ್ನು ಕುಡಿಯಿರಿ. ಹಣ್ಣಿನ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ. 
  • ಹೆಚ್ಚು ಎಣ್ಣೆ ಬಳಸಿದ ಆಹಾರಗಳು, ಮಸಾಲೆಗಳು ಮತ್ತು ಕುರುಕಲು ತಿಂಡಿಗಳ ಸೇವನೆ ಕಡಿಮೆ ಮಾಡಿ. 
  • ಚಹಾ ಮತ್ತು ಕಾಫಿಗಳನ್ನು ಕುಡಿಯದಿದ್ದರೆ ಉತ್ತಮ.
  • ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ ಕನಿಷ್ಠ 3 ರಿಂದ 5 ಲೀಟರ್ ನೀರನ್ನು ತೆಗೆದುಕೊಳ್ಳಬೇಕು.
  • ಪ್ರತಿದಿನದ ವ್ಯಾಯಾಮವು ಮಲಬದ್ಧತೆ ನಿವಾರಣೆಗೆ ಸಹಕಾರ. ಹಾಗಾಗಿ ತಪ್ಪದೇ ವ್ಯಾಯಾಮ ಮಾಡಿ.

Trending News