ಈ ಚಳಿಗಾಲದಲ್ಲಿ ಜ್ವರದಿಂದ ರಕ್ಷಿಸಿಕೊಳ್ಳಲು ಮತ್ತು ಉತ್ತಮವಾಗಿ ನಿರ್ವಹಿಸಲು ಸಲಹೆಗಳು

Winter Care : ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಮಾನ್ಸೂನ್ ತಿಂಗಳುಗಳಲ್ಲಿನ ಅದರ ಹಿಂದಿನ ಉತ್ತುಂಗದ ನಂತರ ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಜ್ವರದ ಅವಧಿಯೂ ಸಹ ಆರಂಭವಾಗುತ್ತದೆ. ಈ ಋತುವಿನಲ್ಲಿ, ವಿಶ್ವಾದ್ಯಂತ 'ರೋಗನಿರೋಧಕತೆಯ ಕೊರತೆ' (ಇಮ್ಯುನಿಟಿ ಡೆಟ್) ಎಂಬ ಆತಂಕಕಾರಿ ವಿದ್ಯಮಾನದಿಂದಾಗಿ ಜ್ವರದ ಹೊರೆಯು ಗಮನಾರ್ಹವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Written by - Chetana Devarmani | Last Updated : Jan 23, 2023, 04:20 PM IST
  • ಚಳಿಗಾಲದಲ್ಲಿ ಜ್ವರದ ಸಮಸ್ಯೆ ಹೆಚ್ಚಾಗುತ್ತದೆ
  • ಈ ಚಳಿಗಾಲದಲ್ಲಿ ಜ್ವರದಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಸಲಹೆ
  • ಜ್ವರವನ್ನು ಉತ್ತಮವಾಗಿ ನಿರ್ವಹಿಸಲು ಈ ಉಪಾಯ ಅನುಸರಿಸಿ
ಈ ಚಳಿಗಾಲದಲ್ಲಿ ಜ್ವರದಿಂದ ರಕ್ಷಿಸಿಕೊಳ್ಳಲು ಮತ್ತು ಉತ್ತಮವಾಗಿ ನಿರ್ವಹಿಸಲು ಸಲಹೆಗಳು title=

Winter Care : ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಮಾನ್ಸೂನ್ ತಿಂಗಳುಗಳಲ್ಲಿನ ಅದರ ಹಿಂದಿನ ಉತ್ತುಂಗದ ನಂತರ ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಜ್ವರದ ಅವಧಿಯೂ ಸಹ ಆರಂಭವಾಗುತ್ತದೆ. ಈ ಋತುವಿನಲ್ಲಿ, ವಿಶ್ವಾದ್ಯಂತ 'ರೋಗನಿರೋಧಕತೆಯ ಕೊರತೆ' (ಇಮ್ಯುನಿಟಿ ಡೆಟ್) ಎಂಬ ಆತಂಕಕಾರಿ ವಿದ್ಯಮಾನದಿಂದಾಗಿ ಜ್ವರದ ಹೊರೆಯು ಗಮನಾರ್ಹವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಸಾಮಾನ್ಯ ವೈರಸ್‌ಗಳಿಗೆ ಒಡ್ಡಿಕೊಳ್ಳುವ ಕೊರತೆಯಾಗಿದೆ ಏಕೆಂದರೆ ಜನರು ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಅಂತರ ಮತ್ತು ಮಾಸ್ಕ್‍ಗಳನ್ನು ಧರಿಸಿದ್ದರು. ಈಗ, ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಇನ್ಫ್ಲುಯೆನ್ಝಾ ಸೋಂಕಿಗೆ ಒಳಗಾಗುವ  ಜನರ ಸಂಖ್ಯೆಯು, ತಸ್ಲಿಮ್ ಅಲಿ ಮತ್ತು ಸಹೋದ್ಯೋಗಿಗಳ (2022) ಸಂಶೋಧನೆಯ ಪ್ರಕಾರ, ಶೇಕಡಾ 10 ರಿಂದ 60 ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. 

ಇದು ಪ್ರಸ್ತುತ 2022-23 ಜ್ವರದ ಋತುವಿನಲ್ಲಿ ಒಂದರಿಂದ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣವಾಗಬಹುದು. ಭಾರತದಲ್ಲಿ, 2022 ರಲ್ಲಿ ಸಂಗ್ರಹಿಸಿದ ಮಾಹಿತಿಯು ಈಗಾಗಲೇ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಪ್ರಕರಣಗಳ ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ.    ಹಿಂದಿನ ವರ್ಷಕ್ಕಿಂತ 15 ಪಟ್ಟು ಏರಿಕೆಯೊಂದಿಗೆ ದೇಶದಲ್ಲಿ ಹಂದಿಜ್ವರದ ಸಂಖ್ಯೆಯೂ ಹೆಚ್ಚುತ್ತಿದೆ.  

ಇದನ್ನೂ ಓದಿ : Preserving Vegetables Without Fridge: ಫ್ರಿಡ್ಜ್ ಇಲ್ಲದೆಯೇ ಒಂದು ವಾರಗಳ ತನಕ ಹಣ್ಣು-ತರಕಾರಿ ಫ್ರೆಶ್ ಆಗಿಡಲು ಈ ಟ್ರಿಕ್ಸ್ ಅನುಸರಿಸಿ

ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ ಜೆಜೋ ಕರಣ್‌ಕುಮಾರ್ ಪ್ರತಿಕ್ರಿಯಿಸುತ್ತಾ, "ಇನ್‌ಫ್ಲುಯೆನ್ಝಾವು ಲಸಿಕೆಯಿಂದ-ತಡೆಗಟ್ಟಬಹುದಾದ ಒಂದು ಕಾಯಿಲೆಯಾಗಿದೆ ಮತ್ತು ಜನರು ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಅದರ ಸಂಬಂಧಿತ ಆರೋಗ್ಯ ತೊಡಕುಗಳಿಂದ ರಕ್ಷಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇದು ಮಕ್ಕಳಿಗೆ ಮಾತ್ರವಲ್ಲ, ಅಪಾಯದಲ್ಲಿರುವ ವಯಸ್ಕರೂ ಸೇರಿದಂತೆ, ಇನ್ಫ್ಲುಯೆನ್ಝಾ ವಿರುದ್ಧ ರಕ್ಷಣೆಯ ಪದರಗಳನ್ನು ಜನರೆಲ್ಲರಿಗೂ  ವಿಸ್ತರಿಸಲು ಮುಖ್ಯವಾಗಿದೆ. " ಎಂದರು.

ಜ್ವರದಿಂದ ರಕ್ಷಿಸಲು, ನೀವು ತೆಗೆದುಕೊಳ್ಳಬಹುದಾದ 3 ಹೆಜ್ಜೆಗಳು ಇಲ್ಲಿವೆ:

1. ನೀವು ಮತ್ತು ನಿಮ್ಮ ಕುಟುಂಬದವರು ಸಂಪೂರ್ಣವಾದ ಲಸಿಕೆಯನ್ನು ಪಡೆಯಿರಿ - ಮಕ್ಕಳಿಗಾಗಿ ಮಕ್ಕಳ ಲಸಿಕೆ ವೇಳಾಪಟ್ಟಿಯನ್ನು ಅನುಸರಿಸಿ ಮತ್ತು ವಯಸ್ಕರು ವಾರ್ಷಿಕ ಫ್ಲೂ ಶಾಟ್ ಅನ್ನು ಪಡೆದುಕೊಳ್ಳಿ. ಫ್ಲೂನ ವೈರಸ್ ಹೊಸ ರೂಪಾಂತರಗಳು ಹುಟ್ಟಿಕೊಳ್ಳುವುದರಿಂದ ಪ್ರತಿ ವರ್ಷ ಲಸಿಕೆಯನ್ನು ಪಡೆಯುವುದು ಮುಖ್ಯವಾಗಿದೆ ಮತ್ತು WHO (ವಿಶ್ವ ಆರೋಗ್ಯ ಸಂಸ್ಥೆ) ಗುರುತಿಸಿದ ಇತ್ತೀಚಿನ ಸ್ಟ್ರೈನ್ನ ಪ್ರಕಾರ ಫ್ಲೂ ಶಾಟ್ ಗಳನ್ನು ತಯಾರಿಸಲಾಗುತ್ತದೆ.  

2. ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಿ ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯಿರಿ. ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ ಮತ್ತು ಆಗಾಗ್ಗೆ ಮುಟ್ಟುವ ವಸ್ತುಗಳನ್ನು ಸೋಂಕುರಹಿತಗೊಳಿಸಿ.

3. ಅನಾರೋಗ್ಯದಿಂದ ಬಳಲುತ್ತಿರುವವರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ, ಕೊಠಡಿಗಳಲ್ಲಿ ಮುಕ್ತವಾಯುಸ೦ಚಾರವನ್ನು ಹೆಚ್ಚಿಸಿ ಮತ್ತು ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ಗಳನ್ನು ಧರಿಸಿ.

ಈ ಹೆಜ್ಜೆಗಳು ಜ್ವರದಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆದರೂ, ಜ್ವರ, ಶೀತ, ಕೆಮ್ಮು, ಸೂರುವ/ಕಟ್ಟಿಕೊಳ್ಳುವ ಮೂಗು, ಮೈಕೈ ನೋವುಗಳಂತಹ ಯಾವುದೇ ಇನ್ನಿತರ ಜ್ವರದ ಲಕ್ಷಣಗಳ ಕಡೆ ಗಮನವಿರಲಿ.

ಇದನ್ನೂ ಓದಿ : ಈ ಅಪಾಯಕಾರಿ ರೋಗಗಳನ್ನು ಬುಡ ಸಮೇತ ಕಿತ್ತೆಸೆಯುತ್ತದೆ ಹಸಿರು ಕಡಲೆ ಕಾಳು

ಬೆಂಗಳೂರಿನ ಕೈಕೊಂಡ್ರಹಳ್ಳಿಯ ಮದರ್‌ಹುಡ್ ಆಸ್ಪತ್ರೆಯ ನಿರ್ದೇಶಕ ಮತ್ತು ಸಂಸ್ಥಾಪಕ, ಮಕ್ಕಳ ತಜ್ಞರು ಮತ್ತು ನವಜಾತಶಿಶು ತಜ್ಞರು ಆದ ಡಾ.ಪ್ರಶಾಂತ್ ಗೌಡ ಮಾತನಾಡಿ, “ಬೆಂಗಳೂರಿನಲ್ಲಿ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ 3-4 ಪಟ್ಟು ಏರಿಕೆ ಕಂಡಿದ್ದೇವೆ. ಈ ಏರಿಕೆಯನ್ನು ನಿಭಾಯಿಸಲು, ಜ್ವರವು ವಿವಿಧ ಗುಂಪುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದರ ವಿರುದ್ಧ ರಕ್ಷಣೆ ಏಕೆ ಅತ್ಯಗತ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಜನರಿಗೆ ಮುಖ್ಯವಾಗಿದೆ. ಜನರು ಹೆಚ್ಚು ಲಸಿಕೆ ಪಡೆಯುವುದನ್ನು ಬೆಂಬಲಿಸುವುದು ಮತ್ತು ಇತರ ನಿರೋಧಕ ಕ್ರಮಗಳು ಹೆಚ್ಚಿನ ವ್ಯಕ್ತಿಗಳನ್ನು ಜ್ವರದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರೋಗಲಕ್ಷಣಗಳ ಚಿಕಿತ್ಸೆ, ಮತ್ತು ವಿಶ್ರಾಂತಿ ಮತ್ತು ಉತ್ತಮ ಪೋಷಣೆ ಸೇರಿದಂತೆ ಪ್ರಮುಖ ಹೆಜ್ಜೆಗಳೊಂದಿಗೆ ಇದನ್ನು ನಿರ್ವಹಿಸಬಹುದು.” ಎಂದರು.

ನಿಮಗೆ ಜ್ವರ ಬಂದರೆ, ಈ ಚಳಿಗಾಲದಲ್ಲಿ ರೋಗಲಕ್ಷಣಗಳನ್ನು ನಿರ್ವಹಿಸಲು 4 ಸರಳ ಮಾರ್ಗಗಳಿವೆ:

1. ಮನೆಯಲ್ಲಿಯೇ ಇರಿ ಮತ್ತು ವಿಶ್ರಾಂತಿ ಪಡೆಯಿರಿ - ವಿಶೇಷವಾಗಿ ಜ್ವರದ ಮೊದಲ ಕೆಲವು ದಿನಗಳಲ್ಲಿ, ನೀವು ಸ್ವಲ್ಪ ಆರಾಮವಾಗಿರಬೇಕು ಮತ್ತು ವಿಶ್ರಾಂತಿ ಪಡೆಯಬೇಕು. ಚಳಿಯು ಹೆಚ್ಚಾಗುತ್ತಿದ್ದಂತೆ ಹಾಸಿಗೆಯಿಂದ ಹೊರಬರಲು ಕಷ್ಟವಾಗುವುದರಿಂದ, ನೀವು ಇದರ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಕೆಲವು ಹೊದಿಕೆಗಳ ಒಳಗೆ ಸೇರಿಕೊಳ್ಳಬಹುದು ಮತ್ತು ನೀವು ಚೇತರಿಸಿಕೊಂಡು ಶಕ್ತಿಯನ್ನು ಮರಳಿ ಪಡೆಯುವಾಗ ಸ್ವಲ್ಪ ನಿದ್ರೆ ಮಾಡಬಹುದು, ಓದಬಹುದು ಅಥವಾ ಸ್ವಲ್ಪ ದೂರದರ್ಶನವನ್ನು ವೀಕ್ಷಿಸಬಹುದು.

2. ಸಾಕಷ್ಟು ದ್ರವಗಳನ್ನು ಸೇವಿಸಿ - ತೆಳ್ಳಗಿನ ಚಳಿಗಾಲದ ಸೂಪ್‌ಗಳು (ಚಿಕನ್ ನೂಡಲ್ ಸೂಪ್‌ನಂತಹ) ಮತ್ತು ಕೆಫೀನ್ ರಹಿತ ಬಿಸಿ ಗಿಡಮೂಲಿಕೆ ಚಹಾಗಳು (ಶುಂಠಿ ಮತ್ತು ಕ್ಯಾಮೊಮೈಲ್‌ನಂತಹವು) ಜ್ವರದ ವಿರುದ್ಧ ಹೋರಾಡಲು ಪ್ರಮುಖವಾಗಿವೆ. ಅಲ್ಲದೆ, ನಿಮ್ಮ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ನಿಂಬೆರಸ, ಎಳನೀರು ಅಥವಾ ತಾಜಾ ಹಣ್ಣಿನ ರಸ ಹಾಗೂ ಬಿಸಿನೀರಿನ ಪ್ರಯೋಜನಗಳನ್ನು ಕಡೆಗಣಿಸಬೇಡಿ.

ಇದನ್ನೂ ಓದಿ : Egg Side Effects: ನಿಮಗೂ ಈ ಆರೋಗ್ಯ ಸಮಸ್ಯೆಗಳಿವೆಯೇ? ಯಾವುದೇ ಕಾರಣಕ್ಕೂ ಮೊಟ್ಟೆ ತಿನ್ನಬೇಡಿ

3. ಚೆನ್ನಾಗಿ ತಿನ್ನಿರಿ - ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ಹೆಚ್ಚು ತಿನ್ನಲು ಬಯಸದಿದ್ದರೂ, ಉತ್ತಮ ಪೋಷಣೆ ಮುಖ್ಯವಾಗಿದೆ. ಕಿತ್ತಳೆ, ದಾಳಿಂಬೆ, ಸ್ಟ್ರಾಬೆರಿ ಮತ್ತು ಹೆಚ್ಚಿನ ಕಾಲೋಚಿತ ಹಣ್ಣುಗಳನ್ನು ಉತ್ತಮ ಪ್ರಮಾಣದಲ್ಲಿ ಸೇವಿಸಿ, ಜೊತೆಗೆ ಚಳಿಗಾಲದ ತರಕಾರಿಗಳಾದ ಪಾಲಕ ಮತ್ತು ಸಿಹಿಗೆಣಸುಗಳನ್ನು ಸೇವಿಸಿ. ಮಸಾಲೆಯುಕ್ತ ಆಹಾರಗಳು - ಬಿಸಿ ಮೆಣಸು, ಶುಂಠಿ ಮತ್ತು ಅರಿಶಿನದೊಂದಿಗೆ - ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದಟ್ಟಣೆಯನ್ನು ನಿವಾರಿಸುತ್ತದೆ.

4. ಸ್ಟೀಮ್ ತೆಗೆದುಕೊಳ್ಳಿ - ವಿಶೇಷವಾಗಿ ನಿಮ್ಮ ಮೂಗು ಕಟ್ಟಿದ್ದರೆ, ಬಿಸಿನೀರಿನ ಸ್ನಾನ ಮಾಡಿ ಅಥವಾ ನಿಮ್ಮ ಮೂಗಿನ ದ್ವಾರಗಳನ್ನು ತೆರವುಗೊಳಿಸಲು ಆವಿಯನ್ನು ತೆಗೆದುಕೊಳ್ಳಿ. ಇದು ನಿಮ್ಮನ್ನು ಬೆಚ್ಚಗಿಡಲು ಸಹ ಸಹಾಯ ಮಾಡುತ್ತದೆ.

ಈ ಹಂತಗಳನ್ನು ಮೀರಿದರೆ, ನಿಮ್ಮ ರೋಗಲಕ್ಷಣಗಳು ಹದಗೆಡಲು ಪ್ರಾರಂಭಿಸಿದರೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು, ಆ ಮೂಲಕ ನಿಮಗೆ ಅಗತ್ಯವಿರುವ ಸರಿಯಾದ ಆರೈಕೆಯನ್ನು ನೀವು ಪಡೆಯಬಹುದು, ನಿಮ್ಮ ಬಗ್ಗೆ ಕಾಳಜಿ ವಹಿಸಬಹುದು ಮತ್ತು ತ್ವರಿತವಾಗಿ ಉತ್ತಮ ಆರೋಗ್ಯ ಹೊಂದಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News